Select Your Language

Notifications

webdunia
webdunia
webdunia
webdunia

2017ರಲ್ಲಿ ಉ,ಪ್ರದೇಶದಲ್ಲಿ ಬಿಜೆಪಿ ಸರಕಾರ ರಚನೆಗೆ ಶೇ.32 ರಷ್ಟು ಜನರ ಒಲವು

2017ರಲ್ಲಿ ಉ,ಪ್ರದೇಶದಲ್ಲಿ ಬಿಜೆಪಿ ಸರಕಾರ ರಚನೆಗೆ ಶೇ.32 ರಷ್ಟು ಜನರ ಒಲವು
ಲಕ್ನೋ , ಬುಧವಾರ, 3 ಆಗಸ್ಟ್ 2016 (19:27 IST)
ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಸತ್ವಪರೀಕ್ಷೆಯಾಗಿದೆ. ಸಮಾಜವಾದಿ ಪಕ್ಷ, ಬಿಎಸ್‌ಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮತದಾರರನ್ನು ಸೆಳೆಯಲು ಹರಸಾಹಸ ಪಡುತ್ತಿವೆ.
 
ವಿಧಾನಸಭೆ ಚುನಾವಣೆಗೆ ಇನ್ನೂ ಕಾಲಾವಕಾಶವಿದ್ದರೂ ಇತ್ತೀಚಿನ ಸಮೀಕ್ಷೆಯ ಪ್ರಕಾರ ಅಖಿಲೇಶ್ ಯಾದವ್ ಸಿಎಂ ಹುದ್ದೆಗೆ ಜನರ ಮೊದಲ ಆಯ್ಕೆಯಾಗಿದ್ದಾರೆ. ಮತ್ತೊಂದೆಡೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
 
ಎಬಿಪಿ ನ್ಯೂಸ್ ಸಂಸ್ಥೆ ಜುಲೈ 24 ಮತ್ತು 25 ರಂದು 10 ವಿಧಾನಸಭೆ ಕ್ಷೇತ್ರಗಳಲಲಿ ನಡೆಸಿದ ಸಮೀಕ್ಷೆಯಲ್ಲಿ 1ಸಾವಿರ ಜನರನ್ನು ಪ್ರಶ್ನಿಸಲಾಗಿದೆ.
 
ಸಿಎಂ ಅಖಿಲೇಶ್ ಯಾದವ್ ಉತ್ತಮ ಸಿಎಂ ಅಭ್ಯರ್ಥಿ ಎಂದು ಶೇ.28 ರಷ್ಟ ಮತಗಳಿಸಿದ್ದರೆ, ಮಾಯಾವತಿ ಶೇ.25 ರಷ್ಟು ಹಾಗೂ ಶೇ.17 ರಷ್ಟು ಜನರು ಯೋಗಿ ಆದಿತ್ಯನಾಥ್, ಕೇಶವ್ ಪ್ರಸಾದ್ ಮೌರ್ಯ ಶೇ.6 ರಷ್ಟು ಮತ್ತು ಶೀಲಾ ದೀಕ್ಷಿತ್ ಶೇ.5 ರಷ್ಟು ಮತಗಳಿಸಿದ್ದಾರೆ.  
 
ಏತನ್ಮಧ್ಯೆ, ಶೇ.32 ರಷ್ಟು ಜನರು ಮುಂಬರುವ ಚುನಾವಣೆಯಲ್ಲಿ ಜಯಗಳಿಸಿ ಬಿಜೆಪಿ ಸರಕಾರ ರಚಿಸಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.26 ರಷ್ಟು ಜನರು ಸಮಾಜವಾದಿ ಪಕ್ಷ, ಶೇ.24 ರಷ್ಟು ಜನರು ಬಿಎಸ್‌ಪಿ, ಶೇ.7 ರಷ್ಟು ಜನರು ಕಾಂಗ್ರೆಸ್ ಹಾಗೂ ಶೇ.4 ರಷ್ಟು ಜನರ ಪ್ರಕಾರ ಸಮ್ಮಿಶ್ರ ಸರಕಾರ ರಚನೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಶೇ.7 ರಷ್ಟು ಜನರು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಡಿಜಿಪಿ ಓಂ ಪ್ರಕಾಶ್ ವರ್ಗಾಯಿಸಿದ್ರೆ ಕೆಟ್ಟ ಪರಿಣಾಮ: ಸರಕಾರಕ್ಕೆ ಐಪಿಎಸ್ ಅಧಿಕಾರಿಗಳ ವಾರ್ನಿಂಗ್