Select Your Language

Notifications

webdunia
webdunia
webdunia
webdunia

ಕಳೆದ ವರ್ಷ ದೇಶದಲ್ಲಿ 32,077 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ: ಕೇಂದ್ರ ಸರಕಾರ

ಕಳೆದ ವರ್ಷ ದೇಶದಲ್ಲಿ 32,077 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ: ಕೇಂದ್ರ ಸರಕಾರ
ದೆಹಲಿ , ಗುರುವಾರ, 28 ಏಪ್ರಿಲ್ 2016 (13:53 IST)
ಕಳೆದ ವರ್ಷದ ಅವಧಿಯಲ್ಲಿ ದೇಶಾದ್ಯಂತ 32,077 ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ ಎಂದು ಸರಕಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ.
 
ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಕಾನೂನು ಜಾರಿಯಾಗುವವರೆಗೆ ಅತ್ಯಾಚಾರ ಪ್ರಕರಣಗಳು ಇಳಿಕೆಯಾಗುವುದಿಲ್ಲ ಎಂದು ಅಭಿಪ್ರಾಯಪಡಲಾಗಿದೆ.
 
ನ್ಯಾಷನಲ್ ಕ್ರೈಮ್ ರಿಕಾರ್ಡ್ಸ್ ಬ್ಯೂರೋ ಮಾಹಿತಿಯ ಪ್ರಕಾರ, ಒಟ್ಟು 32,077 ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದಿದ್ದು ಅದರಲ್ಲಿ 1706 ಗ್ಯಾಂಗ್‌ರೇಪ್ ಪ್ರಕರಣಗಳು ನಡೆದಿವೆ ಎಂದು ಗೃಹ ಖಾತೆಯ ರಾಜ್ಯ ಸಚಿವ ಹರಿಭಾಯಿ ಪರಾಠಿಭಾಯಿ ಚೌಧರಿ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
 
ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಪರಿಹಾರ ಧನ ನೀಡಲು ಕೇಂದ್ರದ ಗೃಹ ಸಚಿವಾಲಯ 200 ಕೋಟಿ ರೂಪಾಯಿಗಳನ್ನು ಮೀಸಲಾಗಿರಿಸಿದೆ ಎಂದು ಸಚಿವ ಚೌಧರಿ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.  

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸಭೆ ಚುನಾವಣೆ ಸ್ಪರ್ಧೆ: ಗೋವಾ, ಹಿಮಾಚಲ್, ಮಧ್ಯಪ್ರದೇಶ, ಕರ್ನಾಟಕದ ಮೇಲೆ ಆಪ್ ಕಣ್ಣು