Select Your Language

Notifications

webdunia
webdunia
webdunia
webdunia

ಪುಲ್ವಾಮಾ ಎನ್ ಕೌಂಟರ್ ನಲ್ಲಿ ಮೂವರು ಲಷ್ಕರ್ ಉಗ್ರರ ಹತ್ಯೆ: ಓರ್ವ ಯೋಧನಿಗೆ ಗಾಯ

ಪುಲ್ವಾಮಾ ಎನ್ ಕೌಂಟರ್ ನಲ್ಲಿ ಮೂವರು ಲಷ್ಕರ್ ಉಗ್ರರ ಹತ್ಯೆ: ಓರ್ವ ಯೋಧನಿಗೆ ಗಾಯ
ಶ್ರೀನಗರ , ಗುರುವಾರ, 22 ಜೂನ್ 2017 (10:40 IST)
ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾದ ಕಾಕ್ಪೋರಾದಲ್ಲಿ ಉಗ್ರರ ವಿರುದ್ಧ ಭಾರತೀಯ ಯೋಧರು  ನಡೆಸಿದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. 
 
ಕಾಕ್ಪೋರಾದಲ್ಲಿ ಉಗ್ರರ ಬಗ್ಗೆ ಖಚಿತ ಮಾಹಿತಿ ಪಡೆದ ಯೋಧರು ದಾಳಿ ಮಾಡಿದ್ದು, ಈ ವೇಳೆ ಉಗ್ರರು ಸೈನಿಕರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ  ಎಲ್ಲ ಮೂವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ.  ಈ ಮೂಲಕ ಕೆಲ ಘಂಟೆಗಳಿಂದ ನಡೆಯುತ್ತಿದ್ದ ಎನ್ ಕೌಂಟರ್ ಕಾರ್ಯಾಚರಣೆ ಇದೀಗ ಅಂತ್ಯವಾಗಿದೆ. ಮೃತ ಉಗ್ರರನ್ನು ಲಷ್ಕರ್ ಸಂಘಟನೆಯ ಮಜೀದ್ ಮೀರ್, ಶರೀಖ್ ಅಹ್ಮಮದ್ ಮತ್ತು ಇರ್ಷಾದ್ ಅಹ್ಮದ್ ಎಂದು ಗುರುತಿಸಲಾಗಿದೆ  ಎಂದು ಸೇನೆ ತಿಳಿಸಿದೆ.  
 
ಅಂತೆಯೇ ಮೃತ ಉಗ್ರರಿಂದ 3 ಎಕೆ 47 ಬಂದೂಕು ಮತ್ತು ಭಾರಿ ಪ್ರಮಾಣದ ಸ್ಫೋಟಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಘಟನಾ ಸ್ಥಳದಲ್ಲಿ ಶೋಧ ಕಾರ್ಯ ನಡೆಯಲಾಗುತ್ತಿದೆ. ಇನ್ನು ಘಟನೆಯಲ್ಲಿ  ಭಾರತೀಯ ಸೇನೆಯ 50 ರಾಷ್ಟ್ರೀಯ ರೈಫಲ್ಸ್ ದಳದ ಓರ್ವ ಯೋಧ ಗಾಯಗೊಂಡಿದ್ದು. ಗಾಯಾಳು ಸೈನಿಕನನ್ನು ಸೇನಾಸ್ಪತ್ರೆಗೆ ದಾಖಲಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷಗಳ ಅಭ್ಯರ್ಥಿ ಫೈನಲ್?