Select Your Language

Notifications

webdunia
webdunia
webdunia
webdunia

ಗಡಿಯಲ್ಲಿ ಉಗ್ರರ ಅಟ್ಟಹಾಸ: ಮೂವರು ಕಾರ್ಮಿಕರ ಸಾವು

ಗಡಿಯಲ್ಲಿ ಉಗ್ರರ ಅಟ್ಟಹಾಸ: ಮೂವರು ಕಾರ್ಮಿಕರ ಸಾವು
ಜಮ್ಮು , ಸೋಮವಾರ, 9 ಜನವರಿ 2017 (09:20 IST)
ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು ಜಿಆರ್‌ಇಎಫ್‌ ( ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್)ನ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ದಾಳಿ ನಡೆದಾಗ ಕತ್ತಲಿದ್ದುದರಿಂದ ಉಗ್ರರು ಅಲ್ಲಿಂದ ಸುಲಭವಾಗಿ ಪರಾರಿಯಾಗಿದ್ದಾರೆ.

ಜಮ್ಮುವಿನ ಆಕ್ನೂರ್ ಸಮೀಪದ ಬಟಾಲ್ ಗ್ರಾಮದ ಬಳಿ ಇದ್ದ ಶಿಬಿರದ ಮೇಲೆ ಇಂದು ಮುಂಜಾನೆ ಈ ದಾಳಿ ನಡೆದಿದ್ದು ಜಿಆರ್‌ಇಎಫ್‌ ಮೂವರು ಸಿಬ್ಬಂದಿ ಸಹ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಅಂತರಾಷ್ಟ್ರೀಯ ಗಡಿಯ ಎರಡು ಕೀಲೋಮೀಟರ್ ದೂರದಲ್ಲಿ ಈ ದಾಳಿ ನಡೆದಿದೆ. 
 
ಘಟನೆಯ ಸ್ಥಳಕ್ಕೆ ಭೇಟಿ ನೀಡಿರುವ ಸೇನಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಉಗ್ರರಿಗಾಗಿ ಶೋಧ ನಡೆಸಲಾಗುತ್ತಿದೆ. 
 
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಳಿಕ ಗಡಿಯಲ್ಲಿ ಪಾಕ್ ಸೇನೆಯ ಅಪ್ರಚೋದಿತ ಗುಂಡಿನ ದಾಳಿ ಮತ್ತು ಉಗ್ರರ ಅಟ್ಟಹಾಸ ಎಲ್ಲೆ ಮೀರಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೇವಲ ರೂ.16ಕ್ಕೆ ಒಂದು ಗಂಟೆ ಅನಿಯಮಿತ ಡಾಟಾ