Select Your Language

Notifications

webdunia
webdunia
webdunia
webdunia

ಹಿಂದೂ ದೇವಾಲಯದ ಮೇಲೆ ದಾಳಿಗೆ ಸಂಚು ನಡೆಸಿದ್ದ ಮೂವರು ಐಎಸ್ ಉಗ್ರರ ಬಂಧನ

ಹಿಂದೂ ದೇವಾಲಯದ ಮೇಲೆ ದಾಳಿಗೆ ಸಂಚು ನಡೆಸಿದ್ದ ಮೂವರು ಐಎಸ್ ಉಗ್ರರ ಬಂಧನ
ಕೌಲಾಲಂಪುರ: , ಗುರುವಾರ, 1 ಸೆಪ್ಟಂಬರ್ 2016 (14:20 IST)
ಇಲ್ಲಿನ ಬಾಟು ಕೇವ್ಸ್‌ನಲ್ಲಿರುವ ಪ್ರಖ್ಯಾತ ಹಿಂದು ದೇವಾಲಯ, ಮನರಂಜನೆ ಕೇಂದ್ರಗಳು ಮತ್ತು ಪೊಲೀಸ್ ಠಾಣೆಗಳ ಮೇಲೆ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ದಾಳಿಗೆ ಸಂಚು ರೂಪಿಸಿದ್ದ ಭಯಾನಕ ಐಎಸ್ ಭಯೋತ್ಪಾದಕ ಗುಂಪಿನ ಮೂವರು ಉಗ್ರರನ್ನು ಬಂಧಿಸಲಾಗಿದೆ.
 
ಭಯೋತ್ಪಾದನೆ ನಿಗ್ರಹ ವಿಭಾಗದ ವಿಶೇಷ ವಿಭಾಗ ಆಗಸ್ಟ್ 27 ಮತ್ತು ಆಗಸ್ಟ್ 29 ರ ನಡುವೆ ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಬಾಟು ಕೇವ್ಸ್ ಪ್ರಖ್ಯಾತ ಹಿಂದೂ ದೇವಾಲಯಕ್ಕೆ ಮತ್ತು ಭಗವಾನ್ ಮುರುಗನ್‌ಗೆ ಮುಡಿಪಾದ ಮಂದಿರಗಳ ವಾಸಸ್ಥಾನವಾಗಿದೆ. ಆಗಸ್ಟ್ 27ರಂದು ಮೊದಲ ಶಂಕಿತ ವ್ಯಕ್ತಿಯನ್ನು ಕೆ75 ಗ್ರೆನೇಡ್ ಮತ್ತು ಪಿಸ್ತೂಲ್‌ನೊಂದಿಗೆ 9 ಎಂಎಂ ಗುಂಡುಗಳ ಸಮೇತ ಬಂಧಿಸಲಾಗಿದೆ.
 
ಮಧ್ಯವರ್ತಿಯಿಂದ ಅವನು ಶಸ್ತ್ರಾಸ್ತ್ರಗಳನ್ನು ಪಡೆದಿರಬಹುದೆಂದು ನಾವು ಶಂಕಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಖಾಲಿದ್ ತಿಳಿಸಿದರು. ಇನ್ನೂ ಇಬ್ಬರು ಶಂಕಿತರನ್ನು ಆಗಸ್ಟ್ 29ರಂದು ಬಂಧಿಸಲಾಗಿದೆ. ಗುರಿಗಳಿಗೆ ದಾಳಿ ಮಾಡಲು ಯಶಸ್ವಿಯಾದ ಮೇಲೆ ಅವರು ಸಿರಿಯಾಗೆ ಹೋಗಲು ಯೋಜಿಸಿದ್ದರು ಎಂದು ಖಾಲಿದ್ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಜಿಯೋ ಪ್ರವೇಶ: 45ನಿಮಿಷದಲ್ಲೇ ಸಾವಿರಾರು ಕೋ. ನಷ್ಟ ಅನುಭವಿಸಿದ ಏರ್‌ಟೆಲ್, ಐಡಿಯಾ