Select Your Language

Notifications

webdunia
webdunia
webdunia
webdunia

379 ರೂ. ಕಳ್ಳತನ ಪ್ರಕರಣ 29 ವರ್ಷ ವಿಚಾರಣೆ, 5 ವರ್ಷ ಜೈಲು! ಇದೆಂಥಾ ವಿಚಿತ್ರ!?

379 ರೂ. ಕಳ್ಳತನ ಪ್ರಕರಣ 29 ವರ್ಷ ವಿಚಾರಣೆ, 5 ವರ್ಷ ಜೈಲು! ಇದೆಂಥಾ ವಿಚಿತ್ರ!?
NewDelhi , ಬುಧವಾರ, 19 ಜುಲೈ 2017 (10:23 IST)
ನವದೆಹಲಿ: ನಮ್ಮ ದೇಶದಲ್ಲಿ ಕೋರ್ಟ್ ವಿಚಾರಣೆಗಳು ಬೇಗನೇ ಮುಗಿಯಲು ಕ್ರಮ ಕೈಗೊಳ್ಳಬೇಕೆಂದು ಕಾನೂನು ತಜ್ಞರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಂತೂ ಕೇವಲ 379 ರೂ.ಗಳ ಕಳ್ಳತನ ಪ್ರಕರಣ ಬರೋಬ್ಬರಿ 29 ವರ್ಷ ವಿಚಾರಣೆ ನಡೆಸಿದೆ. ಕೊನೆಗೆ ಆರೋಪಿಗಳಿಗೆ ಬರೇಲಿಯ ನ್ಯಾಯಾಲಯ ವರ್ಷ ಜೈಲು ಶಿಕ್ಷೆ ವಿಧಿಸಿದೆ.


ಅಂದು 30 ರ ತರುಣರಾಗಿದ್ದ ಆರೋಪಿಗಳು ಇಂದು 60 ವರ್ಷದ ಮುದುಕರಾಗಿದ್ದಾರೆ. 1988 ರಲ್ಲಿ ಈ ಘಟನೆ ನಡೆದಿತ್ತು. ವಾಜಿದ್ ಹುಸೇನ್ ಎಂಬಾತನಿಗೆ ಮತ್ತು ಬರಿಸುವ ಚಹಾ ನೀಡಿ ಚಂದ್ರ ಪಾಲ್, ಕನ್ಹಯ್ಯಾ ಲಾಲ್ ಮತ್ತು ಸರ್ವೇಶ್ ಎಂಬವರು 379 ರೂ. ಎಗರಿಸಿದ್ದರು. ಇವರಲ್ಲಿ ಚಂದ್ರಪಾಲ್ ಎಂಬಾತ 2004 ರಲ್ಲಿ ಸಾವನ್ನಪ್ಪಿದ್ದ.

ನಂತರ ಈ ಪ್ರಕರಣ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಇದೀಗ ಬದುಕುಳಿದಿರುವ ಕನ್ಹಯ್ಯಾ ಮತ್ತು ಸರ್ವೇಶ್ 60 ವರ್ಷದ ವೃದ್ಧರಾಗಿದ್ದಾರೆ. ತಮ್ಮ ಯೌವನದ ದಿನಗಳಲ್ಲಿ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಆದರೇನಂತೆ? ಇದೀಗ ಇಬ್ಬರೂ ಆರೋಪಿಗಳು 10 ಸಾವಿರ ರೂ. ದಂಡ ಮತ್ತು ಐದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

15 ವರ್ಷಗಳ ಬಳಿಕ ರೈಲು ಹತ್ತಿದ ಗಂಗೂಲಿಗೆ ಶಾಕ್..!