ನವದೆಹಲಿ : ಒಬಿಸಿಯ ಶೇ.27 ಕೋಟಾದ ಮೇಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ನಿರಾಕರಿಸಿರುವ ಮಧ್ಯಪ್ರದೇಶದ ಹೈಕೋರ್ಟ್ ಪ್ರಧಾನ ಬೆಂಚ್, ಮಧ್ಯಂತರ ಆದೇಶವನ್ನು ಕೊಡಲು ಒಪ್ಪದೇ ಸೆಪ್ಟೆಂಬರ್ 20 ಅಂತಿಮ ತೀರ್ಪನ್ನು ನೀಡುವುದಾಗಿ ತಿಳಿಸಿದೆ.
ಮಧ್ಯಪ್ರದೇಶ ರಾಜ್ಯ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ಆಗಿರುವ ತುಷಾರ್ ಮೆಹ್ತಾ ಮತ್ತು ಅಡ್ವೊಕೇಟ್ ಜನರಲ್ ಪುರುಶೆಂದ್ರ ಹೈಕೋರ್ಟ್ ನಲ್ಲಿ ಒಬಿಸಿಯ ಮೇಲಿನ ಶೇ.27 ಕೋಟಾದ ಮೇಲಿರುವ ತಡೆಯಾಜ್ಞೆಗೆ ಅರ್ಜಿ ಸಲ್ಲಿಸಿದ್ದರು.
ಕೋರ್ಟ್ ಇದೆ ವಿಷಯವಾಗಿ ಎರಡು ಕಡೆಯ ಚರ್ಚೆ ಆಲಿಸಿ ನಂತರ ಅಂತಿಮ ತೀರ್ಪು ಕೊಡುವುದಾಗಿ ತಿಳಿಸಿದೆ.