ಹೈದರಾಬಾದ್ : ಪ್ರೇಮದಲ್ಲಿ ಬಿದ್ದು ಶಾಲಾ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯೊಂದಿಗೆ ಪರಾರಿಯಾದ ಘಟನೆ ಚಂದಾನಗರದಲ್ಲಿ ನಡೆದಿದೆ.
ಕಳೆದ ಫೆ.16 ರಂದು 26 ವರ್ಷದ ಶಿಕ್ಷಕಿ ಹಾಗೂ 10ನೇ ತರಗತಿ ವಿದ್ಯಾರ್ಥಿ ಇಬ್ಬರೂ ನಗರದಿಂದ ಬೆಂಗಳೂರಿಗೆ ತೆರಳಿದ್ದರು. ಈ ಬಗ್ಗೆ ಬಾಲಕನ ಪೋಷಕರು ಗಚಿಬೌಲಿ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಿದ್ದರು. ಶಿಕ್ಷಕಿಯ ಅಜ್ಜಿ ಚಂದಾನಗರ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಿಸಿದ್ದರು.
ತನಿಖೆ ಆರಂಭಗೊಳ್ಳುತ್ತಿದ್ದಂತೆ ಶಿಕ್ಷಕಿ ಹಾಗೂ ವಿದ್ಯಾರ್ಥಿ ಮನೆಗೆ ಮರಳಿದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳು ನೀಡಿದ್ದ ದೂರನ್ನು ವಾಪಸ್ ಪಡೆದಿದ್ದಾರೆ.