Select Your Language

Notifications

webdunia
webdunia
webdunia
webdunia

ಬಸ್- ಟ್ರಕ್ ಡಿಕ್ಕಿ; 25 ಮಕ್ಕಳ ದಾರುಣ ಸಾವು; ಪ್ರಧಾನಿ ಸಂತಾಪ

25 children
ಅಲಿಗಂಜ್ , ಗುರುವಾರ, 19 ಜನವರಿ 2017 (11:01 IST)
ಖಾಸಗಿ ಶಾಲಾ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ 25 ಮಕ್ಕಳು ದುರ್ಮರಣವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಅಲಿಗಂಜ್ ರಸ್ತೆಯಲ್ಲಿ ನಡೆದಿದೆ. ದುರ್ಘಟನೆಯಲ್ಲಿ 36ಕ್ಕಿಂತ ಹೆಚ್ಚು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  
ಮೃತ ಮಕ್ಕಳು ಅಲಿಗಂಜ್‌ನ ಜೆ.ಎಸ್ ವಿದ್ಯಾ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದರು. ದಟ್ಟ ಮಂಜಿನಿಂದಾಗಿ ರಸ್ತೆ ಸರಿಯಾಗಿ ಕಾಣಿಸದೆ ಘಟನೆ ನಡೆದಿದೆ ಎನ್ನಲಾಗುತ್ತಿದೆ.
 
ಮೃತರೆಲ್ಲರೂ 13 ವರ್ಷದೊಳಗಿನವರು ಎಂದು ತಿಳಿದು ಬಂದಿದೆ. 
 
ಉತ್ತರ ಪ್ರದೇಶದಾದ್ಯಂತ ದಟ್ಟ ಮಂಜು ಆವರಿಸಿದ್ದು ಶಾಲೆಗಳಿಗೆ ರಜೆ ನೀಡುವಂತೆ ಸೂಚಿಸಲಾಗಿತ್ತು. ಆದರೆ  ಜೆ.ಎಸ್ ವಿದ್ಯಾ  ಶಾಲೆಗೆ ರಜೆ ನೀಡಿರಲಿಲ್ಲ ಎಂದು ತಿಳಿದು ಬಂದಿದೆ. 
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಘಟನೆಗೆ ತೀವ್ರ ದುಃಖ ವ್ಯಕ್ತ ಪಡಿಸಿರುವ ಪ್ರಧಾನಿ, ದುರ್ಘಟನೆ ಬಗ್ಗೆ ಕೇಳಿ ತುಂಬಾ ದುಃಖವಾಗುತ್ತಿದೆ. ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬದ ನೋವನ್ನು ಹಂಚಿಕೊಳ್ಳ ಬಯಸುತ್ತೇನೆ. ಅಗಲಿದ ಕಂದಮ್ಮಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸ್ಮಾರ್ಟ್ ಫೋನ್ ಕೊಡಿಸಲಿಲ್ಲವೆಂದು ಬಾಲಕ ಆತ್ಮಹತ್ಯೆ