ಉತ್ತಾರಾಖಂಡ್`ನ ವಿಧಾನಸಬೆಯ ಚುನಾವಣೆಯಲ್ಲಿ ಶೇ.68ರಷ್ಟು ಮತದಾರರು ತಮ್ಮಸಂವಿಧಾನಬದ್ಧ ಹಕ್ಕು ಚಲಾಯಿಸಿದ್ದಾರೆ. ಇಲ್ಲಿ ಅತ್ಯಂತ ಗಮನ ಸಳೆದಿದ್ದು, ತೆಹ್ರಿ ಗರ್ಹ್ವಾಲ್ ಕ್ಷೇತ್ರ. ಇಲ್ಲಿನ ಹಿಮಚ್ಛಾದಿತ ಪರ್ವತದಲ್ಲಿನ ಬೂತ್`ವೊಂದಕ್ಕೆ 24 ಕಿ.ಮೀ ಟ್ರೆಕ್ಕಿಂಗ್ ಮೂಲಕ ಬೂತ್ ಸಿಬ್ಬಂದಿ ತೆರಳಿದ್ದಾರೆ. ಕೇವಲ 275 ಓಟಿಗಾಗಿ ಇಷ್ಟು ನಡೆದುಹೋದ ಬೂತ್ ಸಿಬ್ಬಂದಿಯ ಕಾರ್ಯ ಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
10000 ಅಡಿ ಎತ್ತರದ ಪ್ರದೇಶ ತಲುಪುವುದು ಸುಲಭದ ಮಾತಾಗಿರಲಿಲ್ಲ. ಸ್ಲೀಪಿಂಗ್ ಬ್ಯಾಗ್, ಸ್ನೋ ಬೂಟ್`ಗಳನ್ನ ಹಾಕಿಕೊಂಡು 3 ದಿನಗಳ ಮುಂಚೆಯೇ ಟ್ರೆಕ್ಕಿಂಗ್ ಆರಂಭಿಸಿದ ಸಿಬ್ಬಂದಿ ಮತದಾನದದಿನದ ಹೊತ್ತಿಗೆ ಪ್ರದೇಶ ತಲುಪಿದ್ದರು. ಮೊಬೈಲ್ ಫೋನ್ ಸಂಪರ್ಕರಹಿತ ಪ್ರದೇಶದಲ್ಲಿ ಅಧಿಕಾರಿಗಳು ನಿಜವಾಗಿಯೂ ವನವಾಸ ಅನುಭವಿಸಿದ್ದಾರೆ.