ನವದೆಹಲಿ: ಇಂದಿನ ಮಕ್ಕಳೇ ಹಾಗೆ. ದೊಡ್ಡವರನ್ನು ಮೀರಿದ ಬುದ್ಧಿಮತ್ತೆ ಹೊಂದಿರುತ್ತಾರೆ. ನಮಗೆ ಅರಿವಿಲ್ಲದಂತೆಯೇ ಅಚ್ಚರಿಗೆ ದೂಡುತ್ತಾರೆ. ಅಂತಹದ್ದೇ ಒಂದು ಕೆಲಸವನ್ನು ಬ್ರಿಟನ್ ನಿವಾಸಿ 7 ವರ್ಷದ ಬಾಲಕಿ ಮಾಡಿದ್ದಾಳೆ!
ಕ್ಲೋ ಬ್ರಿಡ್ಜ್ ವಾಟರ್ ಎಂಬ ಬಾಲಕಿ ಗೂಗಲ್ ಸಿಇಒ ಭಾರತ ಮೂಲದ ಸುಂದರ್ ಪಿಚ್ಚೈಗೆ ಪತ್ರ ಬರೆದಿದ್ದಾಳೆ. ಅದೂ ಅಂತಿಂತಹ ಪತ್ರವಲ್ಲ. ಉದ್ಯೋಗಕ್ಕಾಗಿ ಅರ್ಜಿ ಹಾಕಿ ಬರೆದ ಪತ್ರ. ತಾನು ದೊಡ್ಡವಳಾದ ಮೇಲೆ ಗೂಗಲ್ ನಲ್ಲಿ ನನಗೊಂದು ಕೆಲಸ ನೀಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾಳೆ.
ಅಲ್ಲದೆ ಇದರಲ್ಲಿ ತನ್ನ ಕನಸು, ಆಸೆಗಳನ್ನು ತೆರೆದಿಟ್ಟಿದ್ದಾಳೆ. ನನಗೆ ದೊಡ್ಡವಳಾದ ಮೇಲೆ ಚಾಕಲೇಟ್ ಕಂಪನಿಯಲ್ಲಿ ಕೆಲಸ ಮಾಡಬೇಕು, ಒಲಿಂಪಿಕ್ಸ್ ನಲ್ಲಿ ಈಜಬೇಕು ಎಂದೆಲ್ಲಾ ಬರೆದಿದ್ದಾಳೆ. ಆಕೆಯ ಪತ್ರ ನೋಡಿ ಸ್ವತಃ ಸುಂದರ್ ಪಿಚ್ಚೈ ಅಚ್ಚರಿಗೊಂಡು ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಖಂಡಿತಾ ನೀನು ಓದಿ ದೊಡ್ಡವಳಾಗು. ಗೂಗಲ್ ಕಂಪನಿಯಲ್ಲಿ ಖಂಡಿತಾ ಕೆಲಸ ಸಿಗುತ್ತದೆ ಎಂದು ಭರವಸೆ ನೀಡಿದ್ದಾರೆ. ಇವರೇ ಆಧುನಿಕ ಯುಗದ ಮಕ್ಕಳೆಂದರೆ! ಯಾವತ್ತೋ ಬೇಕಾದ ಕೆಲಸಕ್ಕೆ ಇಂದೇ ಅರ್ಜಿ ಗುಜರಾಯಿಸಿದ್ದಾಳೆ ನೋಡಿ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ