19 ವರ್ಷದ ಯುವತಿಯ ಜತೆ ಪ್ರೀತಿಸುವ ನಾಟಕವಾಡಿ, ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು ವಂಚಿಸಿದ 2 ವರ್ಷದ ಯುವಕನ ಮೇಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ರಾಹುಲ್ ಸೈಂದನೆ ಎಂದು ಗುರುತಿಸಲಾಗಿದ್ದು ಗುರುವಾರ ರಾತ್ರಿ ಪೀಡಿತ ಯುವತಿ ನೀಡಿದ್ದ ದೂರಿನ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ನೌಪಾಡಾ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ತೃಪ್ತಿ ಖಾಲ್ಡೆ ತಿಳಿಸಿದ್ದಾರೆ,
ಕಳೆದ ನಾಲ್ಕು ತಿಂಗಳಿಂದ ನಗರದ ಅನೇಕ ಕಡೆಗಳಲ್ಲಿ, ಜತೆಗೆ ಪವಿತ್ರ ಕ್ಷೇತ್ರ ಶಿರಡಿಯಲ್ಲಿ ಸಹ ನನ್ನ ಮೇಲೆ ಅತ್ಯಾಚಾರವೆಸಗಲಾಗಿತ್ತು. ಪರಿಣಾಮ ನಾನು ಗರ್ಭ ಧರಿಸಿದೆ. 3 ತಿಂಗಳಿಗೆ ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಲಾಯಿತು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಆರೋಪಿಯ ಮೇಲೆ ಐಪಿಸಿ ವಿಭಾಗ 376( ಅತ್ಯಾಚಾರಕ್ಕೆ ಶಿಕ್ಷೆ), 312 (ಗರ್ಭಪಾತಕ್ಕೆ ಕಾರಣ) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಆತನನ್ನು ಇಲ್ಲಿಯವರೆಗೆ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆ ಪ್ರಗತಿಯಲ್ಲಿದ್ದು ಆದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುವುದು ಎಂದು ಖಾಲ್ಡೆ ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.