Webdunia - Bharat's app for daily news and videos

Install App

23 ತಳಿಯ ನಾಯಿಗಳಿಗೆ ಭಾರತದಲ್ಲಿ ನಿಷೇಧ: ಸರ್ಕಾರದ ಆದೇಶದ ಹಿಂದಿರುವ ಕಾರಣ ಗೊತ್ತಾ

Sampriya
ಗುರುವಾರ, 14 ಮಾರ್ಚ್ 2024 (15:06 IST)
ದೆಹಲಿ: ದೇಶದಲ್ಲಿ ಆಕ್ರಮಣಕಾರಿ ನಾಯಿಗಳಿಂದ ಸಾವಿನ ಸಂಖ್ಯೆ ದಿನೇ ದಿನ ಹೆಚ್ಚುತ್ತಿರುವುದರಿಂದ ದೇಶದಲ್ಲಿ 23 ತಳಿಯ ನಾಯಿಗಳ ಸಾಕಾನೆಯನ್ನು ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 
 
ಈ ಹಿನ್ನೆಲೆ 'ಕ್ರೂರ' ನಾಯಿ ತಳಿಗಳ ಆಮದು, ಸಂತಾನೋತ್ಪತ್ತಿ ಮತ್ತು ಮಾರಾಟವನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ಹೇಳಿದೆ. 
 
ಸರ್ಕಾರದ ಪ್ರಕಾರ ರೊಟ್ವೀಲರ್, ಪಿಟ್ಬುಲ್, ಟೆರಿಯರ್, ತೋಳ ನಾಯಿಗಳು ಮತ್ತು ಮ್ಯಾಸ್ಟಿಪ್ಸ್‌ಗಳ ಸಾಕುವುದು ಮಾನವ ಜೀವಕ್ಕೆ ಅಪಾಯ ಎಂದು ಹೇಳಲಾಗಿದೆ.  ದೆಹಲಿ ಹೈಕೋರ್ಟ್‌ನ ಆದೇಶಕ್ಕೆ ಪ್ರತಿಕ್ರಿಯೆಯಾಗಿ ತಜ್ಞರು ಮತ್ತು ಪ್ರಾಣಿ ಕಲ್ಯಾಣ ಸಂಸ್ಥೆಗಳ ಸಮಿತಿಯು ವರದಿಯನ್ನು ಸಲ್ಲಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ನಾಯಿಗಳ ಮಿಶ್ರ ತಳಿಗಳನ್ನು ಸಾಕಾಬಾರದೆಂದು ಹೇಳಲಾಗಿದೆ. 
 
ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಎಲ್ಲ ರಾಜ್ಯಗಳಿಗೆ ಪತ್ರವನ್ನು ಕಳುಹಿಸಿದ್ದು, ಸ್ಥಳೀಯ ಸಂಸ್ಥೆಗಳು ಈ ನಾಯಿಗಳ ಮಾರಾಟ ಮತ್ತು ಸಾಕಣೆಗೆ ಪರವಾನಗಿ ನೀಡಬಾರದೆಂದು ಉಲ್ಲೇಖಿಸಲಾಗಿದೆ.  ಈಗಾಗಲೇ ಸಾಕುಪ್ರಾಣಿಗಳಾಗಿ ಸಾಕಿರುವ ಈ ತಳಿಗಳ ನಾಯಿಗಳನ್ನು ಮತ್ತಷ್ಟು ಸಂತಾನಾಭಿವೃದ್ಧಿಯನ್ನು ತಡೆಗಟ್ಟಲು ಕ್ರಿಮಿನಾಶಕಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.
 
ಈ ಕೆಲ ನಾಯಿಗಳನ್ನು ಹಾಗೂ ಮಿಶ್ರ ತಳಿಗಳನ್ನು ಸಾಕುವುದಕ್ಕೆ ನಿಷೇಧಿಸಲಾಗಿದೆ. 
 
1. ಪಿಟ್ಬುಲ್ ಟೆರಿಯರ್
2. ತೋಸಾ ಇನು
3. ಅಮೇರಿಕನ್ ಸ್ಟಾಫರ್ಡ್ಶೈರ್ ಟೆರಿಯರ್
4. ಫಿಲಾ ಬ್ರೆಸಿಲಿರೊ
5. ಡೋಗೊ ಅರ್ಜೆಂಟಿನೋ
6. ಅಮೇರಿಕನ್ ಬುಲ್ಡಾಗ್
7. ಬೋಸ್ಬೋಲ್
8. ಕಂಗಲ್
9. ಮಧ್ಯ ಏಷ್ಯಾದ ಕುರುಬ ನಾಯಿ
10. ಕಕೇಶಿಯನ್ ಶೆಫರ್ಡ್ ಡಾಗ್
11. ದಕ್ಷಿಣ ರಷ್ಯನ್ ಶೆಫರ್ಡ್ ಡಾಗ್
12. ಟೊರ್ನ್ಜಾಕ್, ಸರ್ಪ್ಲಾನಿನಾಕ್
13. ಜಪಾನೀಸ್ ತೋಸಾ ಮತ್ತು ಅಕಿತಾ
14. ಮ್ಯಾಸ್ಟಿಫ್ಸ್
15. ರೊಟ್ವೀಲರ್
16. ಟೆರಿಯರ್‌ಗಳು
17. ರೊಡೇಸಿಯನ್ ರಿಡ್ಜ್‌ಬ್ಯಾಕ್
18. ತೋಳ ನಾಯಿಗಳು
19. ಕೆನರಿಯೊ
20. ಅಕ್ಬಾಷ್
21. ಮಾಸ್ಕೋ ಗಾರ್ಡ್
22. ಕೇನ್ ಕೊರ್ಸೊ
23. ಬಂದೋಗ್ ನಾಯಿಗಳ ಸಾಕಾನೆಯನ್ನು ನಿಷೇಧಿಸಲಾಗಿದೆ.
 
ದೆಹಲಿ ಹೈಕೋರ್ಟ್‌ನ ಆದೇಶಕ್ಕೆ ಪ್ರತಿಕ್ರಿಯೆಯಾಗಿ ತಜ್ಞರು ಮತ್ತು ಪ್ರಾಣಿ ಕಲ್ಯಾಣ ಗುಂಪುಗಳನ್ನು ಒಳಗೊಂಡ ಸಮಿತಿಯು ತಮ್ಮ ವರದಿಯನ್ನು ಸಲ್ಲಿಸಿದ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಹಿಂದೆ ದೆಹಲಿ ಹೈಕೋರ್ಟ್ ಕೆಲವು ನಾಯಿ ತಳಿಗಳನ್ನು ಸಾಕುಪ್ರಾಣಿಗಳಾಗಿ ಸಾಕುವುದನ್ನು ನಿಷೇಧಿಸಿತ್ತು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಜಯೇಂದ್ರನಿಂದ ನಾನು ಪಾಠ ಕಲಿಯಬೇಕಾ: ಸಿದ್ದರಾಮಯ್ಯ ರೋಷಾವೇಷ

ಅಮಾನತು ಮಾಡೋದು, ಮತ್ತೆ ರದ್ದು ಮಾಡೋದು ಎಲ್ಲಾ ನಾಟಕ: ಬಿವೈ ವಿಜಯೇಂದ್ರ

ಕೇರಳ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಸಂಪೂರ್ಣವಾಗಿ ರದ್ದು

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Video: ಆಪರೇಷನ್ ಸಿಂಧೂರ್ ಶೌರ್ಯದ ಬಗ್ಗೆ ಹೇಳಿದ್ರೆ ವಿಪಕ್ಷಗಳು ಮೇಜು ತಟ್ಟಲ್ಲ ಯಾಕೆ: ಅನುರಾಗ್ ಠಾಕೂರ್

ಮುಂದಿನ ಸುದ್ದಿ
Show comments