ಪುದುಚೇರಿಯಲ್ಲಿ ಸಿಎಂ ಯಾರಾಗುತ್ತಾರೆ ಎಂಬುದರ ಕುರಿತು ಸ್ಪಷ್ಟ ಚಿತ್ರಣ ದೊರಕಿದೆ. ಈ ಬಾರಿಯೂ ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ ಪಕ್ಷ (ಎಐಎನ್ಆರ್‌ಸಿ) ಅಧಿಕಾರದ ಗದ್ದುಗೆ ಏರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಎಐಎನ್ಆರ್‌ಸಿ 9 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಇನ್ನೂ ಕಾಂಗ್ರೆಸ್ 11 ಸ್ಠಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲದೇ ಎಡಿಎಂಕೆ 1, ಇತರೆ ಸ್ಥಾನಗಳಲ್ಲಿ 1 ಸ್ಥಾನದಲ್ಲಿದೆ. ತಟ್ಟನ್ ಚಾವಂಡಿ ಕ್ಷೇತ್ರದಿಂದ ಮುಖ್ಯಮಂತ್ರಿ ರಂಗಸ್ವಾಮಿ ಮುನ್ನಡೆ ಸಾಧಿಸಿದ್ದಾರೆ.
ಹೀಗಾಗಿ ಮತ್ತೆ ಪುದುಚೇರಿಯಲ್ಲಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದ್ದು.
ಇನ್ನೂ ಕಾಂಗ್ರೆಸ್ ಮತ್ತು ಎಐಎನ್‌ಆರ್‌ಸಿ ಮಧ್ಯೆ ಒಂದು ಕಡೆ ಪೈಪೋಟಿ ಹೆಚ್ಚಿದೆ. ಎಐಎನ್‌ಆರ್‌ಸಿಯ ಪಕ್ಷದ ಎನ್. ರಂಗಸ್ವಾಮಿಗೆ ಗೆಲವು ಸೀಗುವ ಸಾಧ್ಯತೆ ಇದೆ.ಆದ್ರೆ ಇನ್ನೂ ಕಡೆಗೂ ಪುದುಚೇರಿಯಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದರ ಬಗ್ಗೆ ಕೆಲ ಕ್ಷಣಗಳಲ್ಲಿ ಗೊತ್ತಾಗಲಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ