ಬಿಹಾರದಲ್ಲಿ 10 ವರ್ಷದ ಮಗು ಸೇರಿದಂತೆ ಇಬ್ಬರ ಮೇಲೆ ಅತ್ಯಾಚಾರ ನಡೆದಿದ್ದು, ಸಂಪೂರ್ಣ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
ಪಾಟ್ಣಾದಿಂದ 160 ಕೀಲೋಮೀಟರ್ ದೂರದಲ್ಲಿರುವ ಹಳ್ಳಿಯೊಂದರಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆಕೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಆಕೆ ಅಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಐರೋಪಿಗಳಾದ ಪ್ರಮೋದ್ ಸಹ್ನಿ ಮತ್ತು ಕಮಲ್ ಸಹ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯನ್ನು ಅಪಹಣ ಮಾಡಿ ಅತ್ಯಾಚಾರವೆಸಗಲಾಗಿದೆ. ಆಕೆ ಕಿರುಚಿಕೊಳ್ಳಲು ಪ್ರಯತ್ನಿಸಿದಾಗ ಕುತ್ತಿಗೆಗೆ ಚಾಕುವನ್ನು ಹಿಡಿದು ಹೆದರಿಸಿದ್ದಾರೆ ಎಂದು ಪೀಡಿತಳ ಸಹೋದರ ಮಾಹಿತಿ ನೀಡಿದ್ದಾನೆ.
ಪ್ರಕರಣವನ್ನು ಕೈ ಬಿಡುವಂತೆ ನಮಗೆ ಬೆದರಿಕೆ ಹಾಕಲಾಗಿದೆ. ನಾವು ಬಡವರು, ಅವರ ಒತ್ತಾಯಕ್ಕೆ ಒಪ್ಪದಿದ್ದರೆ ನಮ್ಮನ್ನು ಶೂಟ್ ಮಾಡಲಾಗುವುದು ಎಂದಾತ ಆತಂಕವನ್ನು ವ್ಯಕ್ತ ಪಡಿಸಿದ್ದಾನೆ.
ಅಷ್ಟೇ ಅಲ್ಲದೆ ಮೋತಿಹಾರ್‌ನ ಇನ್ನೊಂದು ಪ್ರದೇಶದಲ್ಲಿ 17 ವರ್ಷದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವಾದ ಘಟನೆ ವರದಿಯಾಗಿದೆ. ಗನ್ ಹಿಡಿದು ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಪೋಷಕರು ದೂರಿದ್ದಾರೆ. ಆದರೆ ಆಕೆಯ ಮೇಲೆ ಅತ್ಯಾಚಾರವಾಗಿಲ್ಲ ಎಂದು ಪೊಲೀಸರು ವಾದಿಸುತ್ತಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.