Select Your Language

Notifications

webdunia
webdunia
webdunia
webdunia

ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮೌಲ್ವಿಗಳು ಭಾರತಕ್ಕೆ ವಾಪಸ್

ಪಾಕಿಸ್ತಾನ
ನವದೆಹಲಿ , ಸೋಮವಾರ, 20 ಮಾರ್ಚ್ 2017 (14:02 IST)
ದೆಹಲಿಯ ಹಜರರತ್ ನಿಜಾಮುದ್ದೀನ್ ದರ್ಗಾದ ಮುಖ್ಯಸ್ಥ ಸೇರಿದಂತೆ ಪಾಕಿಸ್ತಾನಕ್ಕೆ ತೆರಳಿ ನಾಪತ್ತೆಯಾಗಿದ್ದ ಇಬ್ಬರು ಮೌಲ್ವಿಗಳು ಭಾರತಕ್ಕೆ ವಾಪಸ್ ಆಗಿದ್ದಾರೆ. ಏರ್`ಪೋರ್ಟ್`ನಲ್ಲಿ ಬಂದಿಳಿದ ಮೌಲ್ವಿಗಳನ್ನ ಕುಟುಂಬ ಸದಸ್ಯರು ಸೇರಿ ಹಲವರು ಬರಮಾಡಿಕೊಂಡರು.


ಹಜರತ್ ನಿಜಾಮುದ್ದೀನ್ ದರ್ಗಾ ಮುಖ್ಯಸ್ಥ ಸೈಯದ್ ಆಸಿಫ್ ನಿಜಾಮಿ ಮತ್ತು ಅವರ ಸೋದರಳಿಯ ನಜೀಮ್ ಅಲಿ ನಿಜಾಮಿ ಮಾರ್ಚ್ 8ರಂದು ಲಾಹೋರ್`ಗೆ ತೆರಳಿದ್ದರು. 80 ವರ್ಷದ ಆಸೀಫ್ ತನ್ನ ಸಹೋದರಿಯನ್ನ ನೋಡಲು ಅಲ್ಲಿಂದ ಕರಾಚಿಗೆ ತೆರಳಿದ್ದರು. ಬಳಿಕ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು.

ಬಳಿಕ ಪಾಕಿಸ್ತಾನ ಸರ್ಕಾರವನ್ನ ಸಂಪರ್ಕಿಸಿದ್ದ ಭಾರತ ಮೌಲ್ವಿಗಳನ್ನ ಪತ್ತೆಮಾಡಿತ್ತು. ಮೌಲ್ವಿಗಳು ಸಿಂಧ್ ಪ್ರಾಂತ್ಯದ ಪ್ರದೇಶವೊಂದಕ್ಕೆ ತೆರಳಿದ್ದರಿಂದ ಸಂಪರ್ಕ ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ.

ತಂದೆ ವಾಪಸ್ಸಾದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಆಸೀಫ್ ಪುತ್ರ ಅಸೀಮ್ ನಿಜಾಮಿ, ಭಾರತ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲೇ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಏರ್ಪಡಿಸಲಾಗಿದೆ. ಪಾಕಿಸ್ತಾನದಿಂದ ವಾಪಸ್ಸಾದ ಇಬ್ಬರೂ ಮೌಲ್ವಿಗಳು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನ ಸಹ ಭೇಟಿಮಾಡುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ ಪತ್ನಿ!