Select Your Language

Notifications

webdunia
webdunia
webdunia
webdunia

18ರ ಯುವತಿಯ ಮಗುವಿಗೆ 12ರ ಬಾಲಕನಾದ ಅಪ್ಪ

18-yr-old girl
ಎರ್ನಾಕುಲಂ , ಸೋಮವಾರ, 7 ನವೆಂಬರ್ 2016 (12:47 IST)
ಕೇರಳದ ಕೊಚ್ಚಿ ಆಸ್ಪತ್ರೆಯಲ್ಲಿ 18ರ ಹರೆಯದ ಯುವತಿಯೊಂದು ಮಗುವಿಗೆ ಜನ್ಮ ನೀಡಿದ್ದಾರೆ. ಅದರಲ್ಲೇನು ವಿಶೇಷ ಎನ್ನುತ್ತೀರಾ? ಆಕೆಯನ್ನು ಗರ್ಭಿಣಿಯಾಗಿಸಿದ್ದು 12ರ ಹರೆಯದ ಬಾಲಕನಂತೆ! ಹೀಗೆಂದು ದೂರಿ ಯುವತಿಯ ಪೋಷಕರೀಗ ಎರ್ನಾಕುಲಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 
ಯುವತಿಗೆ 18 ವರ್ಷವಾಗುವುದಕ್ಕಿಂತ 2 ತಿಂಗಳ ಮೊದಲು ಬಾಲಕ ಆಕೆಯನ್ನು ಗರ್ಭಿಣಿಯಾಗಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದ್ದು, ಬಾಲಕನ ಮೇಲಿದ ಬಾಲಾಪರಾಧ ಕಾಯಿದೆಯ ಪ್ರಕಾರ ಪ್ರಕರಣ ದಾಖಲಾಗಿದೆ.
 
ಈ ವಿಷಯವನ್ನು ಪೊಲೀಸರ ಗಮನಕ್ಕೆ ತರದ ಖಾಸಗಿ ಆಸ್ಪತ್ರೆಯ ಮೇಲೂ ಕಡ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
 
ಆದರೆ ಯುವತಿಯ ಹೆರಿಗೆಗೆ ಸಂಬಂಧಿಸಿದಂತೆ ತಾವು ಮಕ್ಕಳ ಸಹಾಯವಾಣಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಗಿ ಆಕೆಗೆ ಡೆಲಿವರಿ ಮಾಡಿದ ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. 
 
ಯುವತಿಯ ಪೋಷಕರು ಮಗುವನ್ನು ಕೊಂಡೊಯ್ಯಲು ಒಪ್ಪದ ಕಾರಣ ಅದನ್ನು ಶಿಶುಪಾಲನಾ ಕೇಂದ್ರಕ್ಕೆ ನೀಡಲಾಗಿದ್ದು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಹಣವಿಲ್ಲದೆ ತಳ್ಳುಗಾಡಿಯಲ್ಲಿ 60ಕೀಮೀ ಪತ್ನಿ ಶವ ಸಾಗಾಟ