Select Your Language

Notifications

webdunia
webdunia
webdunia
webdunia

ಇರಾನ್ ಜೈಲು ಸೇರಿದ್ದ 15 ಮೀನುಗಾರರ ಬಿಡುಗಡೆ: ಸುಷ್ಮಾ ಸ್ವರಾಜ್

ಇರಾನ್ ಜೈಲು ಸೇರಿದ್ದ 15 ಮೀನುಗಾರರ ಬಿಡುಗಡೆ: ಸುಷ್ಮಾ ಸ್ವರಾಜ್
ನವದೆಹಲಿ , ಸೋಮವಾರ, 3 ಏಪ್ರಿಲ್ 2017 (15:08 IST)
ಅಂತಾರಾಷ್ಟ್ರೀಯ ಜಲ ಗಡಿ ದಾಟಿದ ಆರೋಪದಲ್ಲಿ ಇರಾನ್ ಭದ್ರತಾ ಪಡೆಗಳಿಂದ ಬಂಧನಕ್ಕೊಳಗಾಗಿ ಇರಾನ್ ಜೈಲು ಸೇರಿದ್ದ 15 ಮಂದಿ ತಮಿಳುನಾಡಿನ ಮೀನುಗಾರರನ್ನ ಇವತ್ತು ಬಿಡುಗಡೆಗೊಳಿಸಲಾಗಿದೆ.
 

ಈ ಕುರಿತು, ಟ್ವಿಟ್ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಇರಾನ್ ದೇಶ ನಮ್ಮ 15 ಮೀನುಗಾರರನ್ನ ಬಿಡುಗಡೆಗೊಳಿಸಿರುವ ಸುದ್ದಿ ತಿಳಿಸಲು ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ. ಬಹ್ರೇನ್`ನಲ್ಲಿ ಕೆಲಸ ಮಾಡುತ್ತಿದ್ದ ಅವರನ್ನ 3 ಬಹ್ರೇನಿ ಬೋಟ್`ಗಳ ಸಮೇತ ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಕಳೆದ ವರ್ಷ ಅಕ್ಟೋಬರ್ 22ರಂದೇ ಬಂಧಿಸಲಾಗಿದ್ದು, ಕಳೆದ ತಿಂಗಳು ಡಿಎಂಕೆ ಎಂಪಿ ತಿರುಚ್ಚಿ ಸಿವಾ, ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಗಮನ ಸೆಳೆದಿದ್ದರು.

ಒಟ್ಟು 37 ಮಂದಿ ಇರಾನ್ ಸರ್ಕಾರದ ವಶದಲ್ಲಿದ್ದು, 5 ಮಂದಿ ಸೌದಿ ಅರೇಬಿಯಾದಲ್ಲಿ, 15 ಮಂದಿ ಬಹ್ರೇನಿನಲ್ಲಿ, ಇನ್ನುಳಿದವರು ದುಬೈನಲ್ಲಿ ಕೆಲಸಮಾಡುತ್ತಿದ್ದರು ಎಮದು ಸಿವಾ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿನಲ್ಲಿ ಜರ್ಮನ್ ಮಹಿಳೆಯ ಮೇಲೆ ಗ್ಯಾಂಗ್‌ರೇಪ್