Webdunia - Bharat's app for daily news and videos

Install App

ಚಿಪ್ಸ್ ಪೊಟ್ಟಣದಲ್ಲಿ 'ಉಬ್ಬಿದ ಚಿಪ್' ಶೋಧಿಸಿದ ಬಾಲಕಿಗೆ 14 ಲಕ್ಷ ರೂ. ಬಹುಮಾನ

Webdunia
ಸೋಮವಾರ, 23 ಆಗಸ್ಟ್ 2021 (14:28 IST)
ವಿಡಿಯೋ ಗೇಮ್ ಪಾತ್ರವೊಂದರ ಹಾಗೆ ಕಾಣುವ ಚಿಕನ್ ನಗೆಟ್ ಒಂದನ್ನು ಕಳೆದ ಜೂನ್ನಲ್ಲಿ ಆನ್ಲೈನ್ನಲ್ಲಿ $100,000ಗೆ ಮಾರಾಟ ಮಾಡಿದ್ದ ಮ್ಯಾಕ್ ಡೊನಾಲ್ಡ್ಸ್, ಈ ಮೂಲಕ ಭಾರೀ ಸದ್ದು ಮಾಡಿತ್ತು.

'ಅಮಾಂಗ್ ಅಸ್' ಗೇಮ್ನ ಪಾತ್ರವೊಂದರ ಹಾಗೆ ಇದ್ದ ಈ ಮಾಂಸದ ತುಂಡು ಭಾರೀ ಸುದ್ದಿಯಲ್ಲಿತ್ತು.'ಪೊಲ್ಝಿನಾ' ಹೆಸರಿನ ಇ-ಬೇ ಬಳಕೆದಾರರೊಬ್ಬರು ಪಟ್ಟಿ ಮಾಡಿದ ಮೇಲೆ, 184 ಬಿಡ್ಗಳನ್ನು ಪಡೆದ ಈ ತಿಂಡಿಯನ್ನು $99,997ಗೆ ಹರಾಜಾಗಿತ್ತು.
ಇದೀಗ 13 ವರ್ಷದ ಬಾಲೆಯೊಬ್ಬಳು ಪತ್ತೆ ಮಾಡಿದ ಮತ್ತೊಂದು ಜನಪ್ರಿಯ ಕುರುಕಲು ತಿಂಡಿಯೊಂದು ಭಾರೀ ಮೊತ್ತಕ್ಕೆ ಬಿಕರಿಯಾಗಿದೆ.
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಿವಾಸಿಯಾದ ರೈಲೀ ಸ್ಟುವರ್ಟ್ಗೆ 'ಡೊರಿಟೋಸ್' ಬ್ರಾಂಡ್ನ ಚಿಪ್ಸ್ ಪೊಟ್ಟಣವೊಂದರಲ್ಲಿ ಉಬ್ಬಿಕೊಂಡಂತೆ ಕಾಣುವ ಚಿಪ್ ಒಂದು ಕಂಡಿದ್ದು, ಅದನ್ನಾಕೆ ವಿಡಿಯೋ ಮಾಡಿ ಟಿಕ್ಟಾಕ್ನಲ್ಲಿ ಶೇರ್ ಮಾಡಿದ್ದರು. ಇದು ಡೊರಿಟಾಸ್ನ ಗಮನ ಸೆಳೆದಿದೆ.
ಮ್ಯಾಕ್ಡೊನಾಲ್ಡ್ಸ್ ನಗೆಟ್ಗೆ ಮಾಡಿದ ಹಾಗೆಯೇ ರೈಲೀ ಸಹ ಈ ಅಸಹಜ ಗಾತ್ರದ ಚಿಪ್ ಅನ್ನು ಇಬೇನಲ್ಲಿ ಹರಾಜಿನ ಪಟ್ಟಿಗೆ ಸೇರಿಸಿದ್ದಾಳೆ. ಖುದ್ದು ಆಕೆಗೇ ಅಚ್ಚರಿಯಾಗುವ ನಡೆಯೊಂದರಲ್ಲಿ ಹರಾಜಿನ ಮೊತ್ತವು $20,100ರಷ್ಟು (14 ಲಕ್ಷ ರೂಪಾಯಿ) ಜೋರಾಗಿ ಬೆಳೆದಿದೆ.
ಇದೀಗ ಈ ಚಿಪ್ ಡೊರಿಟಾಸ್ ಪ್ರಧಾನ ಕಚೇರಿ ತಲುಪಿದ್ದು, ಅದನ್ನು ಶೋಧಿಸಿದ ಬಾಲೆಗೆ ಬಹುಮಾನ ನೀಡಲು ಕಂಪನಿ ನಿರ್ಧರಿಸಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments