ಬಾಯಾರಿಕೆಯಾಗಿ ನೀರು ಹುಡುಕುತ್ತ ಗಡಿ ದಾಟಿ ಭಾರತ ಪ್ರವೇಶಿಸಿದ್ದ ಪಾಕ್ ಬಾಲಕನೊಬ್ಬನನ್ನು ಸುರಕ್ಷಿತವಾಗಿ ಪಾಕ್ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.
ಪಾಕಿಸ್ತಾನದ ಕಾಸೂರ್ ಜಿಲ್ಲೆಯ ಧಾರಿ ಗ್ರಾಮದ ನಿವಾಸಿ 12 ವರ್ಷದ ಬಾಲಕ ಮೊಹಮ್ಮದ್ ತನ್ವೀರ್ ಭಾನುವಾರ ಸಂಜೆ ನರು ಹುಡುಕುತ್ತಾ ಪಂಜಾಬ್‌ನ ದೋಮ ತೇಲುನಲ್ ಮೂಲಕ ಆಕಸ್ಮಿಕವಾಗಿ ಭಾರತವನ್ನು ಪ್ರವೇಶಿಸಿ ಬಿಎಸ್‌ಎಫ್ ಯೋಧರ ಕಣ್ಣಿಗೆ ಬಿದ್ದಿದ್ದ. ರಾತ್ರಿ ಎಲ್ಲ ಆತನನ್ನು ಜತೆಗಿಟ್ಟುಕೊಂಡು ನೋಡಿಕೊಂಡ ಯೋಧರು ಮರುದಿನ ಮುಂಜಾನೆ 11 ಗಂಟೆ ಸುಮಾರಿಗೆ ಪಾಕಿಸ್ತಾನಿ ರೇಂಜರ್ ಕೈಗೆ ಒಪ್ಪಿಸಿದ್ದಾರೆ. ಈ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಇದಕ್ಕೆ ಪ್ರತಿಯಾಗಿ ಆಕಸ್ಮಿಕವಾಗಿ ಪಾಕ್ ಗಡಿ ದಾಟಿದ್ದ ಭಾರತೀಯ ಯೋಧ ಬಾಬುಲಾಲ್ ಚವ್ಹಾಣ್‌ನನ್ನು ಕೂಡ ಬಿಡುಗಡೆ ಮಾಡುತ್ತಾರಾ ಎಂಬ ನಿರೀಕ್ಷೆ ಎದ್ದಿದೆ. ಯೋಧನ ಬಿಡುಗಡೆ ಮಾಡುವಂತೆ ಡಿಜಿಎಂಒ ಮೂಲಕ ಪಾಕ್‌ಗೆ ಮನವಿ ಮಾಡಿಕೊಳ್ಳಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ