Webdunia - Bharat's app for daily news and videos

Install App

11 ವರ್ಷದ ಬಾಲಕನಿಂದ ಬ್ಯಾಂಕ್ ದರೋಡೆ!

Webdunia
ಗುರುವಾರ, 1 ಅಕ್ಟೋಬರ್ 2020 (10:32 IST)
ಹರ್ಯಾಣ: 11 ವರ್ಷದ ಬಾಲಕ ಬ್ಯಾಂಕ್ ನಿಂದ ಸುಮಾರು 20 ಲಕ್ಷ ರೂ. ದೋಚಿ ಯಾರಿಗೂ ಗೊತ್ತಾಗದಂತೆ ಪರಾರಿಯಾದ ಘಟನೆ ಹರ್ಯಾಣದ ಜಿಂದ್ ನಲ್ಲಿ ನಡೆದಿದೆ.


ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದೆ. ಬ್ಯಾಂಕ್ ನಲ್ಲಿ ಜನಜಂಗುಳಿಯಿದ್ದಾಗ ಇನ್ನೊಬ್ಬ ಆರೋಪಿಯೊಂದಿಗೆ ಬಂದಿದ್ದ ಈತ ಯಾರಿಗೂ ಗೊತ್ತಾಗದಂತೆ ಕ್ಯಾಶಿಯರ್ ಕ್ಯಾಬಿನ್ ಗೆ ನುಗ್ಗಿ ತಲಾ 5 ಲಕ್ಷ ರೂ.ಗಳ ನೋಟುಗಳ ಬಂಡಲ್ ಬ್ಯಾಗ್ ಗೆ ತುಂಬಿ ಸದ್ದಿಲ್ಲದೇ ಜಾಗ ಖಾಲಿ ಮಾಡಿದ್ದ. ಸಂಜೆ ವೇಳೆ ಬ್ಯಾಂಕ್ ಸಿಬ್ಬಂದಿ ನೋಟುಗಳ ಲೆಕ್ಕಾಚಾರ ಮಾಡುವಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದೆ. ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲಿಸುವಾಗ 11 ವರ್ಷದ ಬಾಲಕ ಹಾಗೂ ಇನ್ನೊಬ್ಬ ವ್ಯಕ್ತಿ ಬ್ಯಾಗ್ ನೊಂದಿಗೆ ಪರಾರಿಯಾಗುತ್ತಿರುವುದು ಕಂಡುಬಂದಿದೆ. ಅರೆಕ್ಷಣ ಕ್ಯಾಶಿಯರ್ ತನ್ನ ಸೀಟ್ ನಿಂದ ಎದ್ದು ಅತ್ತ ಕಡೆ ಹೋಗುವಾಗ ಕ್ಯಾಬಿನ್ ಬಂದ್ ಮಾಡಲು ಮರೆತಿದ್ದ. ಈ ವೇಳೆ ಬಾಲಕ ಕೈ ಚಳಕ ತೋರಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments