Webdunia - Bharat's app for daily news and videos

Install App

10 ತಿಂಗಳ ಮಗು ಮೇಲೆ ಅತ್ಯಾಚಾರ! ಮುದೇನಾಯ್ತು?

Webdunia
ಮಂಗಳವಾರ, 16 ನವೆಂಬರ್ 2021 (19:14 IST)
ಲಕ್ನೋ : ತೊಟ್ಟಿಲಲ್ಲಿ ಮಲಗಿಕೊಂಡು ಆಟವಾಡುತ್ತಿದ್ದ ಮಗುವಿನ ಮೇಲೂ ಲೈಂಗಿಕ ದೌರ್ಜನ್ಯ  ನಡೆಸುವವರ ಸಂಖ್ಯೆಗೇನೂ ಕಡಿಮೆಯಿಲ್ಲ.
ಉತ್ತರ ಪ್ರದೇಶದಲ್ಲಿ ಕೇವಲ 10 ತಿಂಗಳ ಹಸುಗೂಸಿನ ಮೇಲೆ ಮನೆ ಕೆಲಸದವನು ಅತ್ಯಾಚಾರ ನಡೆಸಿರುವ ಅಮಾನವೀಯ ಹಾಗೂ ಆಘಾತಕಾರಿ ಘಟನೆ ನಡೆದಿದೆ. ಆ ಮಗುವಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಗುವಿನ ಗುಪ್ತಾಂಗಕ್ಕೆ ಭಾರೀ ಗಾಯಗಳಾಗಿವೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅನಾಗರಿಕ ಅಪರಾಧದ ಮತ್ತೊಂದು ಆಘಾತಕಾರಿ ಘಟನೆ ಲಕ್ನೋದಲ್ಲಿ ನಡೆದಿದ್ದು, ಸಾದತ್‌ಗಂಜ್‌ನಲ್ಲಿ 10 ತಿಂಗಳ ಹೆಣ್ಣು ಮಗುವಿನ ಮೇಲೆ ಮನೆಗೆಲಸದವನು ಅತ್ಯಾಚಾರವೆಸಗಿದ್ದಾನೆ. ಆ ಶಿಶುವನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಪೀಡಿಯಾಟ್ರಿಕ್ ಸರ್ಜರಿ ವಿಭಾಗಕ್ಕೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ, ಮಗುವಿನ ಗುಪ್ತಾಂಗ, ಜನನಾಂಗಗಳಿಗೆ ಹಾನಿ ಮಾಡಿದ್ದರಿಂದ ಮಗು ತೀವ್ರವಾಗಿ ಗಾಯಗೊಂಡಿದೆ.
ಆ ಮನೆಯಲ್ಲಿದ್ದ 10 ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಭಾನುವಾರ ಆ ಮಗುವಿನ ತಾಯಿ ತನ್ನ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬೆಡ್ ರೂಂನಲ್ಲಿ ಮಗು ಅಳುತ್ತಿರುವುದನ್ನು ಕೇಳಿ ರೂಮಿನೊಳಗೆ ಹೋಗಿ ನೋಡಿದಳು.
ಆಗ ಆ ಬೆಡ್ ರೂಮಿನಲ್ಲಿ ಸನ್ನಿ ಕುಮಾರ್ ಬಟ್ಟೆಯನ್ನು ಅರೆಬರೆ ಬಿಚ್ಚಿಕೊಂಡು ನಿಂತಿದ್ದ. ಇದನ್ನು ನೋಡಿ ಆತಂಕಗೊಂಡ ಆಕೆ ಅವನನ್ನು ಹಿಡಿಯಲು ನೋಡಿದಳು. ಆದರೆ, ಆತ ಅಲ್ಲಿಂದ ಪರಾರಿಯಾದ. ತೊಟ್ಟಿಲಲ್ಲಿ ಮಲಗಿದ್ದ ಮಗುವಿನ ಯೋನಿಯಲ್ಲಿ ರಕ್ತ ಸುರಿಯುತ್ತಿತ್ತು. ಮಗು ಅರೆಪ್ರಜ್ಞಾವಸ್ಥ ಸ್ಥಿತಿಯಲ್ಲಿತ್ತು. ಇದನ್ನು ನೋಡಿದ ಆಕೆ ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂಬುದು ಗೊತ್ತಾಯಿತು.
ಆ ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಸೋಮವಾರ ಸಾದತ್‌ಗಂಜ್‌ನಿಂದ ಬಂಧಿಸಿದ್ದಾರೆ. ಆತನ ವಿರುದ್ಧ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆ ಮಗುವಿಗೆ ಆಪರೇಷನ್ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Dehli Airport: ಭಾರೀ ಮಳೆಗೆ ಸೋರುತ್ತಿದೆ ಛಾವಣಿ, Video Viral

ಮಗನ ಇನ್ನೊಂದು ಸಂಬಂಧ ತಿಳಿಯುತ್ತಿದ್ದ ಹಾಗೇ RJDಯಿಂದ ಉಚ್ಛಾಟಿಸಿದ ಲಾಲು

18 ಬಿಜೆಪಿ ಶಾಸಕರ ಅಮಾನತು ವಾಪಾಸ್ ಪಡೆಯುವ ಮುನ್ಸೂಚನೆ ಕೊಟ್ಟ ಸ್ಪೀಕರ್ ಯುಟಿ ಖಾದರ್‌

ಆಪರೇಷನ್ ಸಿಂಧೂರ್‌ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಭಾರತದ ಪ್ರತಿಬಿಂಬ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ

ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿ ಭಾರತ: ಐದನೇ ಸ್ಥಾನಕ್ಕೆ ಜಾರಿದ ಜಪಾನ್‌

ಮುಂದಿನ ಸುದ್ದಿ