Select Your Language

Notifications

webdunia
webdunia
webdunia
webdunia

“ಅಬ್ಬಾ..ಈಗಿನ ಕಾಲದಲ್ಲಿ ಮಹಿಳೆಯರು ರಾಜಕಾರಣ ಮಾಡುವುದೇ ಕಷ್ಟ..!”

“ಅಬ್ಬಾ..ಈಗಿನ ಕಾಲದಲ್ಲಿ ಮಹಿಳೆಯರು ರಾಜಕಾರಣ ಮಾಡುವುದೇ ಕಷ್ಟ..!”
Chennai , ಸೋಮವಾರ, 13 ಫೆಬ್ರವರಿ 2017 (09:08 IST)
ಚೆನ್ನೈ: ಈಗಿನ ಕಾಲವೇ ಅಂತಹದ್ದು. ಇಲ್ಲಿ ಮಹಿಳೆಯರಿಗೆ ರಾಜಕಾರಣದಲ್ಲಿ ಉಳಿದುಕೊಳ್ಳುವುದೇ ಕಷ್ಟ. ಹಾಗಂತ ತಮಿಳುನಾಡು ಸಿಎಂ ಗದ್ದುಗೆಗಾಗಿ ಫೈಟ್ ಮಾಡುತ್ತಿರುವ ಚಿನ್ನಮ್ಮ ಶಶಿಕಲಾ ಹೇಳಿಕೊಂಡಿದ್ದಾರೆ.

 
ಜಯಲಲಿತಾ ಕಾಲದಲ್ಲೂ ನಾನು ನೋಡಿದ್ದೇನೆ. ಮಹಿಳೆಯರಿಗೆ ರಾಜಕಾರಣ ಕಷ್ಟವೇ. ಆದರೂ ಎಐಎಡಿಎಂಕೆ ಪಕ್ಷದ ಜನರಲ್ ಸೆಕ್ರೆಟರಿಯಾಗಿ ಮುಂದಿನ ನಾಲ್ಕು ವರ್ಷವೂ ನಾವೇ ಆಡಳಿತ ನಡೆಸಲಿದ್ದೇವೆ ಎಂದು ವಿಶ್ವಾಸದಿಂದ ಹೇಳಬಲ್ಲೆ ಎಂದಿದ್ದಾರೆ.

ನನಗೆ ಶಾಸಕರ ಬೆಂಬಲವಿದೆ. ಹಾಗಾಗಿ ಯಾವುದೇ ಸವಾಲಾದರೂ ಮೆಟ್ಟಿ ನಿಲ್ಲಬಲ್ಲೆ ಎಂದು ಶಶಿಕಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ವಿರೋಧಿ ಪನೀರ್ ಸೆಲ್ವಂ ಬಣಕ್ಕೆ ಸೇರಿದವರ ಸಂಖ್ಯೆ 10 ಕ್ಕೇರಿದ್ದು, ಒತ್ತಡದಲ್ಲಿರುವ ಶಶಿಕಲಾ ರಾತ್ರೋ ರಾತ್ರಿ ರೆಸಾರ್ಟ್ ನಲ್ಲಿರುವ ಶಾಸಕರನ್ನು ಭೇಟಿ ಮಾಡಿ ಬಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವದ ದಢೂತಿ ಮಹಿಳೆಯನ್ನು ಭಾರತಕ್ಕೆ ಕರೆತರಲಾದ ವೆಚ್ಚವೆಷ್ಟು ಗೊತ್ತಾ?