Select Your Language

Notifications

webdunia
webdunia
webdunia
webdunia

‘ಇಟಾಲಿ ನಿರ್ಮಿತ ಕಪ್ಪು ಕನ್ನಡಕ ಹಾಕಿಕೊಂಡ ರಾಹುಲ್ ಗಾಂಧಿಗೆ ಈ ವಿಚಾರ ಹೇಗೆ ಕಾಣಬೇಕು ಪಾಪ!’

‘ಇಟಾಲಿ ನಿರ್ಮಿತ ಕಪ್ಪು ಕನ್ನಡಕ ಹಾಕಿಕೊಂಡ ರಾಹುಲ್ ಗಾಂಧಿಗೆ ಈ ವಿಚಾರ ಹೇಗೆ ಕಾಣಬೇಕು ಪಾಪ!’
NewDelhi , ಗುರುವಾರ, 2 ಫೆಬ್ರವರಿ 2017 (11:06 IST)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸೂಟ್ ವಿಚಾರವನ್ನು ಆಗಾಗ ಕೆಣಕುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಕ್ಕ ಉತ್ತರ ನೀಡಿದ್ದಾರೆ.

 
‘ರಾಹುಲ್ ಬಾಬಾ ಯಾವತ್ತೂ ಕಣ್ಣಿಗೆ ಇಟಾಲಿಯನ್ ನಿರ್ಮಿತ ಕಪ್ಪು ಕನ್ನಡಕ ಹಾಕಿಕೊಂಡಿರುತ್ತಾರೆ. ಅವರಿಗೆ ಭಾರತ-ಪಾಕಿಸ್ತಾನ ಗಡಿಯಾಚೆ ನಡೆಯುವ ಕಾಳಗ ಹೇಗೆ ಗೊತ್ತಾಗಬೇಕು ಪಾಪ. ಅವರಿಗೆ ಅಂದು ಮತ್ತು ಇಂದಿನ ವ್ಯತ್ಯಾಸವೇ ಗೊತ್ತಾಗುತ್ತಿಲ್ಲ’ ಎಂದು ಅಮಿತ್ ಶಾ ಗೋವಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗೆ ಟಾಂಗ್ ಕೊಟ್ಟಿದ್ದಾರೆ.

‘ಗಡಿಯಾಚೆ ನಡೆಯುತ್ತಿರುವ ಗುಂಡಿನ ಚಕಮಕಿ ವಿಚಾರದ ಬಗ್ಗೆ ರಾಹುಲ್ ಬಾಬಾ ಮಾತನಾಡುತ್ತಾರೆ. ಪಾಪ ಅವರಿಗೆ ಗೊತ್ತಿಲ್ಲ. ಕಾಂಗ್ರೆಸ್ ಇದ್ದಾಗ ಪಾಕಿಸ್ತಾನ ಗುಂಡಿನ ದಾಳಿ ಆರಂಭಿಸಿ ಅವರೇ ನಿಲ್ಲಿಸುತ್ತಿದ್ದರು. ಈಗ ಪಾಕಿಸ್ತಾನ ಆರಂಭಿಸುತ್ತದೆ ಆದರೆ ಭಾರತದ ಸೈನಿಕರು ಅವರ ಸದ್ದಡಗಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಣ್ಣು ಮಾರಿಕೊಂಡವರು ನೀಡುವ ಹಣದ ಆಸೆಗೆ ಮತ ಮಾರಿಕೊಳ್ಳಬೇಡಿ: ಕುಮಾರಸ್ವಾಮಿ