Select Your Language

Notifications

webdunia
webdunia
webdunia
webdunia

‘ಮೋದಿ ಜೀ..ಎದೆ ತಟ್ಟಿದ್ದು ಮುಗಿಯಿತೇ?’

ಪ್ರಧಾನಿ ಮೋದಿ
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಪ್ರಧಾನಿ ಮೋದಿ ಮೇಲೆ ಟೀಕಾಸ್ತ್ರ ಹರಿಸಿದ್ದಾರೆ. ಡೋಕ್ಲಾಂನಲ್ಲಿ ಚೀನಾ ರಸ್ತೆ ನಿರ್ಮಿಸಿರುವ ವಿಚಾರವನ್ನು ಉಲ್ಲೇಖಿಸಿ ಕೆಣಕಿದ್ದಾರೆ.


‘ಮೋದಿ ಜೀ ಎದೆತಟ್ಟಿಕೊಂಡಿದ್ದು ಮುಗಿಯಿತೇ? ಅಷ್ಟೊಂದು ಭಾರತೀಯ ಸೈನಿಕರ ಜಮಾವಣೆ ಮಾಡಿಯೂ ಡೋಕ್ಲಾಂನಲ್ಲಿ ಚೀನಾ ಹೇಗೆ ರಸ್ತೆ ನಿರ್ಮಿಸಿತು?’ ಎಂದು ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ.

ಡೋಕ್ಲಾಂ ಗಡಿ ಬಳಿಯೇ ಚೀನಾ ರಸ್ತೆ ಅಗಲೀಕರಣ ಕಾಮಗಾರಿ ಮಾಡುತ್ತಿದೆ. ಇದೇ ವಿಚಾರವನ್ನು ಬಳಸಿ ಪ್ರಧಾನಿ ಮೋದಿಗೆ ರಾಹುಲ್ ಕುಟುಕಿದ್ದಾರೆ.  ಇತ್ತೀಚೆಗೆ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕತೆ ಸುಧಾರಿಸುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಂಚೆಕಚೇರಿಯ ಪಿಪಿಎಫ್‌, ಕೆವಿಪಿ ಠೇವಣಿಗಳಿಗೆ ಆಧಾರ ಸಂಖ್ಯೆ ಕಡ್ಡಾಯ