Select Your Language

Notifications

webdunia
webdunia
webdunia
webdunia

‘ರಾತ್ರಿ 2 ಗಂಟೆಗೆ ಸಹಾಯ ಮಾಡಿ ಎಂದು ಟ್ವೀಟ್ ಮಾಡಿದರೂ ಉತ್ತರಿಸುತ್ತಾರೆ ಸಚಿವೆ ಸುಷ್ಮಾ’

‘ರಾತ್ರಿ 2 ಗಂಟೆಗೆ ಸಹಾಯ ಮಾಡಿ ಎಂದು ಟ್ವೀಟ್ ಮಾಡಿದರೂ ಉತ್ತರಿಸುತ್ತಾರೆ ಸಚಿವೆ ಸುಷ್ಮಾ’
Washington , ಸೋಮವಾರ, 26 ಜೂನ್ 2017 (10:04 IST)
ವಾಷಿಂಗ್ಟನ್: ಭಾರತೀಯರು ವಿಶ್ವದ ಯಾವುದೇ ಮೂಲೆಯಲ್ಲಿದ್ದುಕೊಂಡು ಸಹಾಯಕ್ಕಾಗಿ ಮೊರೆಯಿಟ್ಟರೂ ತಕ್ಷಣ ಕಾರ್ಯಪ್ರವೃತ್ತರಾಗುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಪ್ರಧಾನಿ ಮೋದಿ ಶಹಬಾಸ್ ಗಿರಿ ಕೊಟ್ಟಿದ್ದಾರೆ.

 
ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ವರ್ಜಿನಿಯಾದಲ್ಲಿ ಭಾರತೀಯ ಸಮುದಾಯದವರನ್ನುದ್ದೇಶಿಸಿ ಮಾತನಾಡುವಾಗ ಸುಷ್ಮಾಗೆ ಹೊಗಳಿಕೆ ನೀಡಿದ್ದಾರೆ. ‘ಸಾಮಾಜಿಕ ಜಾಲತಾಣಗಳು ಇತ್ತೀಚೆಗೆ ತುಂಬಾ ಪ್ರಭಾವಶಾಲಿಯಾಗಿದೆ. ನಾನೂ ಅದನ್ನು ಬಳಸುತ್ತೇನೆ. ಆದರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅದನ್ನು ಎಷ್ಟರಮಟ್ಟಿಗೆ ಆಡಳಿತ ಬಲಪಡಿಸಲು ಉಪಯೋಗಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಹೊಗಳಿದ್ದಾರೆ.

‘ಈಗ ಎಲ್ಲರಿಗೂ ಗೊತ್ತಾಗಿದೆ. ಸಹಾಯ ಮಾಡಿ ಎಂದು ಯಾರೇ ವಿದೇಶಾಂಗ ಸಚಿವೆ ಸುಷ್ಮಾಗೆ ಮೆಸೇಜ್ ಮಾಡಿದರೆ ಮಧ್ಯರಾತ್ರಿ 2 ಗಂಟೆಯಾಗಿದ್ದರೂ ಸರಿಯೇ, 15 ನಿಮಿಷದೊಳಗೆ ಪ್ರತಿಕ್ರಿಯಿಸುತ್ತಾರೆ. ಹಾಗೂ ಸರ್ಕಾರದಿಂದ ಸಾಧ್ಯವಾಗುವ ಎಲ್ಲಾ ನೆರವೂ ನೀಡುತ್ತಾರೆ’ ಎಂದು ಪ್ರಧಾನಿ ಮೋದಿ ಕೊಂಡಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲಾಕರ್ ನಲ್ಲಿ ಒಡವೆ ಇಟ್ಟಿದ್ದರೆ ಇನ್ನು ಬ್ಯಾಂಕ್ ಗಳು ಹೊಣೆಗಾರರಲ್ಲ!