Select Your Language

Notifications

webdunia
webdunia
webdunia
webdunia

ಸತ್ತಿದೆಯೆಂದು ಘೋಷಿಸಿದ್ದ ಮಗು ಸ್ಮಶಾನದಲ್ಲಿ ಉಸಿರಾಡಿತೇ?!

ಸತ್ತಿದೆಯೆಂದು ಘೋಷಿಸಿದ್ದ ಮಗು ಸ್ಮಶಾನದಲ್ಲಿ ಉಸಿರಾಡಿತೇ?!
Hyderabad , ಸೋಮವಾರ, 3 ಜುಲೈ 2017 (11:35 IST)
ಹೈದರಾಬಾದ್: ಸತ್ತಿದೆಯೆಂದು ವೈದ್ಯರು ಘೋಷಿಸಿದ್ದ ಮಗು ಇನ್ನೇನು ಅಂತ್ಯ ಸಂಸ್ಕಾರ ನಡೆಸಬೇಕೆನ್ನುವಷ್ಟರಲ್ಲಿ ಜೀವಂತವಿರುವ ಲಕ್ಷಣ ತೋರಿದೆಯೆಂದು ತೆಲಂಗಾಣದ ಎಂಜಿಎಂ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದಾರೆ.


 
ಜೂನ್ 30 ರಂದು ಗರ್ಭಿಣಿ ಮಹಿಳೆಯೊಬ್ಬರು ಗಂಭೀರ ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಆದರೆ ಅಲ್ಲಿ ಅಗತ್ಯ ಸಲಕರಣೆಗಳಿಲ್ಲದ ಕಾರಣ ಅಲ್ಲಿನ ವೈದ್ಯರು ಆಕೆಯನ್ನು ಎಂಜಿಎಂ ಆಸ್ಪತ್ರೆಗೆ ದಾಖಲಿಸಲು ಸಲಹೆ ನೀಡಿದ್ದರು. ಅದರಂತೆ ಎಂಜಿಎಂ ಆಸ್ಪತ್ರೆಯಲ್ಲಿ ಮಗುವನ್ನು ಹೊರ ತೆಗೆಯಲಾಯಿತು.

ಆದರೆ ಅವಧಿ ಪೂರ್ಣವಾಗಿ ಹುಟ್ಟಿದ ಮಗು ಮೂರು ದಿನಕ್ಕೆ ಮೃತಪಟ್ಟಿದೆಯೆಂದು ವೈದ್ಯರು ಘೋಷಿಸಿದ್ದರು. ಅದರಂತೆ ಪೋಷಕರು ಮಗುವನ್ನು ಸ್ಮಶಾನಕ್ಕೆ ಕರೆದೊಯ್ದಾಗ ಮಗುವಿನಲ್ಲಿ ಚಲನವಲನ ಕಂಡುಬಂದಿದೆ ಎಂಬುದು ಅವರ ವಾದ. ಇದರಿಂದ ಸಿಟ್ಟಿಗೆದ್ದ ಪೋಷಕರು ಎಂಜಿಎಂ ಆಸ್ಪತ್ರೆಯ ವೈದ್ಯರ ವಿರುದ್ಧ ಕೂಗಾಡಿರುವುದಲ್ಲದೆ, ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದಾರೆ.

ಸರಿಯಾಗಿ ಇಸಿಜಿ ಪರೀಕ್ಷೆ ನಡೆಸಿಲ್ಲ ಎನ್ನುವುದು ಪೋಷಕರ ವಾದ. ಆದರೆ ವೈದ್ಯ ಸಿರಾಜುದ್ದೀನ್ ತಂಡ ತಮ್ಮದು ತಪ್ಪಿಲ್ಲ. ಮಗುವಿನ ಇಸಿಜಿ ಮತ್ತು ಹೃದಯ ಬಡಿತ ಪತ್ತೆಯಾಗದ ಕಾರಣ ಮೃತಪಟ್ಟಿದೆ ಎಂದು ಘೋಷಿಸಲಾಗಿದೆ ಎಂದಿದ್ದಾರೆ. ಅಂತೂ ಮಗುವಂತೂ ಈಗ ನಿಜವಾಗಿಯೂ ಬದುಕಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಋತುಸ್ರಾವದ ವೇಳೆ ಬಳಸುವ ಸ್ಯಾನಿಟರಿ ನ್ಯಾಪ್ ಕಿನ್ ಮೇಲೆ ಶೇ. 12ರಷ್ಟು ಜಿಎಸ್`ಟಿ: ಮೋದಿ ವಿರುದ್ಧ ಸಿಡಿದೆದ್ದ ನಾರಿಯರು