Select Your Language

Notifications

webdunia
webdunia
webdunia
webdunia

‘ಪಾಕ್ ಸಹಾಯದೊಂದಿಗೆ ಭಾರತದ ಮೇಲೆ ದಾಳಿಗೆ ಚೀನಾ ಯೋಜನೆ’

‘ಪಾಕ್ ಸಹಾಯದೊಂದಿಗೆ ಭಾರತದ ಮೇಲೆ ದಾಳಿಗೆ ಚೀನಾ ಯೋಜನೆ’
ನವದೆಹಲಿ , ಬುಧವಾರ, 16 ಆಗಸ್ಟ್ 2017 (09:58 IST)
ನವದೆಹಲಿ: ಪಾಕಿಸ್ತಾನದ ಸಹಾಯದೊಂದಿಗೆ ಭಾರತದ ಮೇಲೆ ದಾಳಿ ನಡೆಸಲು ಚೀನಾ ಯೋಜನೆ ರೂಪಿಸಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಆರೋಪಿಸಿದ್ದಾರೆ.

 
‘ಭಾರತಕ್ಕೆ ಹಲವು ಕಡೆಯಿಂದ ಅಪಾಯವಿದೆ. ಆದರೆ ದೊಡ್ಡ ಶತ್ರು ಎಂದರೆ ಚೀನಾ. ಇದು ನಮ್ಮ ದೇಶವನ್ನು ಅತಿಕ್ರಮಿಸಲು ಯತ್ನಿಸುತ್ತಲೇ ಇದೆ. ನಮ್ಮ ಯೋಧರ ತಾಕತ್ತಿನಿಂದಾಗಿ ಸಫಲವಾಗಿಲ್ಲ.

ಹೀಗಾಗಿ ಪಾಕಿಸ್ತಾನದೊಂದಿಗೆ ಸೇರಿಕೊಂಡು ಭಾರತದ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದೆ. ಉಭಯ ರಾಷ್ಟ್ರಗಳೂ ಜತೆ ಸೇರಿದರೆ ಭಾರತಕ್ಕೆ ಅಪಾಯ ಕಟ್ಟಿಟ್ಟ ಬುಟ್ಟಿ. ಹಾಗಾಗದಂತೆ ನಾವು ತಡೆಯಬೇಕು’ ಎಂದು ಮಾಜಿ ರಕ್ಷಣಾ ಸಚಿವರೂ ಆಗಿರುವ ಮುಲಾಯಂ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ.. ಶರತ್ ಕೊಲೆ ಪ್ರಕರಣ: ಕೊನೆಗೂ ಆರೋಪಿಗಳು ಅರೆಸ್ಟ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶರತ್ ಕೊಲೆ ಪ್ರಕರಣ: ಕೊನೆಗೂ ಆರೋಪಿಗಳು ಅರೆಸ್ಟ್