Select Your Language

Notifications

webdunia
webdunia
webdunia
webdunia

ಸುನಾಮಿ 'ಸೂಪರ್ ಮೂನ್' ಪ್ರಭಾವ, ಇಷ್ಟಕ್ಕೆ ಮುಗಿಯಲ್ಲ?

ಸುನಾಮಿ 'ಸೂಪರ್ ಮೂನ್' ಪ್ರಭಾವ, ಇಷ್ಟಕ್ಕೆ ಮುಗಿಯಲ್ಲ?
ನವದೆಹಲಿ , ಶುಕ್ರವಾರ, 11 ಮಾರ್ಚ್ 2011 (14:24 IST)
ಜಪಾನ್‌ ಕರಾವಳಿಯನ್ನು ಸೂರೆಗೈಯುತ್ತಿರುವ ಸುನಾಮಿ 'ಸೂಪರ್ ಮೂನ್'ನಿಂದಾಗಿಯೇ ಸಂಭವಿಸಿರಬಹುದು. ಇದರಿಂದಾಗಿ ಇನ್ನಷ್ಟು ಪ್ರಕೃತಿ ವಿಕೋಪಗಳು ಸಂಭವಿಸಬಹುದು ಎಂದು 'ಸೂಪರ್ ಮೂನ್'ನಿಂದಾಗಿ ಭೂಮಿಯ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಈ ಹಿಂದೆ ಎಚ್ಚರಿಕೆ ನೀಡಿದ್ದ ವಿಜ್ಞಾನಿಗಳು ವಿಶ್ಲೇಷಣೆ ನಡೆಸುತ್ತಿದ್ದಾರೆ.

ಮಾರ್ಚ್ 19ರಂದು ಭೂಮಿಯ ಸಮೀಪಕ್ಕೆ ಚಂದ್ರ ಬರಲಿದ್ದು, ಇದನ್ನು 'ಸೂಪರ್ ಮೂನ್' ಎಂದು ಕರೆಯಲಾಗಿದೆ. ಈ ಸಂದರ್ಭದಲ್ಲಿ ಭೂಮಿಯಲ್ಲಿ ಚಂಡಮಾರುತ, ಜ್ವಾಲಾಮುಖಿ ಮತ್ತು ಸುನಾಮಿಗಳು ಸಂಭವಿಸಬಹುದು ಎಂದು ಕೆಲವು ವಿಜ್ಞಾನಿಗಳು ಮತ್ತು ಜ್ಯೋತಿಷಿಗಳು ಎಚ್ಚರಿಕೆ ನೀಡಿದ್ದರು.

ಮಾರ್ಚ್ 19ರಂದು ಭೂಮಿಯ ಅತಿ ಹತ್ತಿರಕ್ಕೆ ಚಂದ್ರ ಬರುತ್ತಾನೆ. ಅಂದರೆ ಆ ದಿನ ಭೂಮಿ ಮತ್ತು ಚಂದ್ರನ ನಡುವಿನ ಅಂತರ ಕೇವಲ 2,21,556 ಮೈಲು ಮಾತ್ರ. ಭೂಮಿಯ ಸನಿಹಕ್ಕೆ ಚಂದ್ರ ಬರುವುದುದು (lunar perigee) ಒಂದು ಸಾಮಾನ್ಯ ಪ್ರಕ್ರಿಯೆಯಾದರೂ, ಹುಣ್ಣಿಮೆಯ ದಿನದಂದೇ ಇದು ನಡೆಯುತ್ತಿರುವುದು ಭೂಮಿಯ ಮಟ್ಟಿಗೆ ಅಪಾಯಕಾರಿ ಎಂದು ವಿಶ್ಲೇಷಣೆ ನಡೆಸಲಾಗಿತ್ತು.

ಆದರೆ ಇದನ್ನು ಹಲವು ವಿಜ್ಞಾನಿಗಳು ಒಪ್ಪಿಕೊಂಡಿರಲಿಲ್ಲ. ಚಂದ್ರ ಮತ್ತು ಭೂಮಿಯ ನಡುವಿನ ಅಂತರ ಕಡಿಮೆಯಾಗುವುದರಿಂದ ಯಾವುದೇ ಅಪಾಯ ಸಂಭವಿಸುವುದಿಲ್ಲ. ಭೀತಿಗೊಳಗಾಗುವ ಅಗತ್ಯವಿಲ್ಲ ಎಂದು ಹೇಳಿದ್ದರು. ಆದರೆ ಈಗ ಭೀಕರ ಸುನಾಮಿ ಜಪಾನ್ ಕರಾವಳಿಯನ್ನು ಅಪ್ಪಳಿಸಿರುವುದರಿಂದ, ಇದು ಸೂಪರ್ ಮೂನ್ ಪ್ರಭಾವ ಇರಬಹುದೇ ಎಂಬ ಶಂಕೆಗಳು ಹುಟ್ಟಿಕೊಂಡಿವೆ.

ವಿಕೋಪ ಇಷ್ಟಕ್ಕೆ ಮುಗಿಯಲ್ಲ...
ಹೀಗೆಂದು ಹೇಳಿರುವುದು ಪ್ರಖ್ಯಾತ ಜ್ಯೋತಿಷಿ ಸಚ್ಚಿದಾನಂದ ಮೂರ್ತಿ. ಜಪಾನ್ ಸುನಾಮಿ ಘಟಿಸಿದ ನಂತರ ಸುದ್ದಿವಾಹಿನಿಯೊಂದರ ಜತೆ ಮಾತನಾಡಿದ ಅವರು, ನಾವು ಜನರನ್ನು ಹೆದರಿಸುತ್ತಿಲ್ಲ; ಆದರೆ ಪ್ರಕೃತಿ ವಿಕೋಪಗಳು ಇಷ್ಟಕ್ಕೆ ಮುಗಿಯುವುದಿಲ್ಲ ಎಂದು ಹೇಳಿದರು.

ಜಪಾನ್‌ನಲ್ಲಿ ನಡೆದಿರುವ ಸುನಾಮಿ ಒಂದು ಎಚ್ಚರಿಕೆ ಮಾತ್ರ. ಇದು ಇಷ್ಟಕ್ಕೆ ಮುಗಿಯುವುದಿಲ್ಲ. ಇನ್ನೂ ಹೆಚ್ಚಾಗಲಿದೆ. ಗುರುತ್ವಾಕರ್ಷಣೆ ಹೆಚ್ಚುವುದರಿಂದ ಮತ್ತು ಬದಲಾಗುವುದರಿಂದ ಇನ್ನಷ್ಟು ಅಪಾಯಗಳು ಸಂಭವಿಸಬಹುದು ಎಂದು ಅವರು ಹೇಳಿದ್ದಾರೆ.

Share this Story:

Follow Webdunia kannada