Select Your Language

Notifications

webdunia
webdunia
webdunia
webdunia

ಸಿಡಬ್ಲ್ಯುಸಿ ಪುನಾರಚನೆ: ರಾಜ್ಯ ಕಾಂಗ್ರೆಸ್‌ಗೆ ಮಿಸ್ತ್ರಿ 'ಮೇಸ್ತ್ರಿ'

ಸಿಡಬ್ಲ್ಯುಸಿ ಪುನಾರಚನೆ
ನವದೆಹಲಿ , ಶುಕ್ರವಾರ, 4 ಮಾರ್ಚ್ 2011 (20:13 IST)
PTI
ಐದು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ)ಯಲ್ಲೂ ಭಾರೀ ಬದಲಾವಣೆ ಮಾಡಲಾಗಿದ್ದು, ಕರ್ನಾಟಕದ ಉಸ್ತುವಾರಿ ಸ್ಥಾನಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗುಲಾಂ ನಬೀ ಆಜಾದ್ ಅವರ ಸ್ಥಾನದಲ್ಲಿ ಗುಜರಾತ್‌ನ ಮಧುಸೂದನ್ ಮಿಸ್ತ್ರಿ ಅವರನ್ನು ನೇಮಿಸಲಾಗಿದೆ.

ಕಾಂಗ್ರೆಸ್‌ನ ಪ್ರಧಾನ ನೀತಿ ನಿರೂಪಣಾ ಸಂಸ್ಥೆಯಾಗಿರುವ ಸಿಡಬ್ಲ್ಯುಸಿಯಲ್ಲಿ ಪ್ರಮುಖರಾದ ರಾಹುಲ್ ಗಾಂಧಿ ಮತ್ತು ದಿಗ್ವಿಜಯ್ ಸಿಂಗ್ ಅವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಉಳಿಸಿಕೊಳ್ಳಲಾಗಿದ್ದು, ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಅವರನ್ನು ಆಂಧ್ರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ದಿಗ್ವಿಜಯ್ ಸಿಂಗ್ ಅವರು ಉತ್ತರ ಪ್ರದೇಶ ಮತ್ತು ಅಸ್ಸಾಂ ಉಸ್ತುವಾರಿ ಹಾಗೂ ರಾಹುಲ್ ಗಾಂಧಿ ಅವರು ಪಕ್ಷದ ಯುವ ಹಾಗೂ ವಿದ್ಯಾರ್ಥಿ ಘಟಕಗಳ ಹೊಣೆ ಹೊರಲಿದ್ದಾರೆ.

ಕರ್ನಾಟಕದ ಮುಖಂಡರಿಗೆ ಸಂಬಂಧಿಸಿದಂತೆ ಸೋನಿಯಾ ಆಪ್ತರಾದ ಬಿ.ಕೆ.ಹರಿಪ್ರಸಾದ್ ಹಾಗೂ ಆಸ್ಕರ್ ಫೆರ್ನಾಂಡಿಸ್ ಅವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸಲಾಗಿದ್ದು, ಆಂಧ್ರದ ಉಸ್ತುವಾರಿ ವಹಿಸಿದ್ದ ವೀರಪ್ಪ ಮೊಯ್ಲಿಗೆ ಯಾವುದೇ ಜವಾಬ್ದಾರಿ ನೀಡಲಾಗಿಲ್ಲ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿವರಗಳನ್ನು ತಿಳಿಸಿದ ಕಾಂಗ್ರೆಸ್ ವಕ್ತಾರ ಜನಾರ್ದನ ದ್ವಿವೇದಿ, ಕರ್ನಾಟಕದ ಎಂ.ವಿ.ರಾಜಶೇಖರನ್‌ಗೆ ಸಿಡಬ್ಲ್ಯುಸಿಯ ಖಾಯಂ ಆಹ್ವಾನಿತರ ಸ್ಥಾನಮಾನ ನೀಡಲಾಗಿದೆ ಎಂದರು.

ಜಾಫರ್ ಶರೀಫ್‌ರನ್ನು ಸಮಿತಿಯಿಂದ ಕೈಬಿಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಂದುವರಿಸಲಾಗಿದೆ. ಬಿ.ಕೆ.ಕೃಷ್ಣಮೂರ್ತಿ ಮತ್ತು ವಿನಯ ಕುಮಾರ್ ಸೊರಕೆ ಅವರನ್ನು ಕಾಂಗ್ರೆಸ್ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ.

ಉಳಿದಂತೆ, ಮಾಜಿ ವಕ್ತಾರ ಮೋಹನ್ ಪ್ರಕಾಶ್ ಅವರಿಗೆ ಮಹತ್ವದ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್ ಹಾಗೂ ಜಮ್ಮು ಮತ್ತು ಕಾಶ್ಮೀರಗಳ ಉಸ್ತುವಾರಿಯನ್ನಾಗಿ ಬಡ್ತಿ ನೀಡಲಾಗಿದೆ. ಪ್ರಣಬ್ ಮುಖರ್ಜಿ, ಎ.ಕೆ.ಆಂಟನಿ, ಅಂಬಿಕಾ ಸೋನಿ, ಮೋತಿಲಾಲ್ ವೋರಾ, ಜನಾರ್ದನ ದ್ವಿವೇದಿ ಅವರನ್ನು ಉಳಿಸಿಕೊಳ್ಳಲಾಗಿದ್ದು, ಪೃಥ್ವಿರಾಜ್ ಚೌಹಾಣ್, ವಿ.ನಾರಾಯಣಸ್ವಾಮಿ ಮತ್ತು ಚಂದ್ರ ದೇವ್ ಅವರನ್ನು ಮುಂದುವರಿಸಲಾಗಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ರಾಜಕೀಯ ಕಾರ್ಯದರ್ಶಿಯ ಸ್ಥಾನ ಉಳಿಸಿಕೊಂಡಿರುವ ಅಹ್ಮದ್ ಪಟೇಲ್ ಸಿಡಬ್ಲ್ಯುಸಿಯಲ್ಲಿ ಮುಂದುವರಿಯಲಿದ್ದು, ಕಾರ್ಯಕಾರಿಣಿಯಲ್ಲೀಗ ಸೋನಿಯಾ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಸೇರಿ 19 ಸದಸ್ಯರು ಇದ್ದಂತಾಗುತ್ತದೆ.

ಎಐಸಿಸಿಯ ಪ್ರಮುಖ ನೀತಿ ನಿರೂಪಣಾ ಸಂಸ್ಥೆಯಾಗಿರುವ ಸಿಡಬ್ಲ್ಯುಸಿಯಿಂದ ಖೋ ಕೊಡಿಸಿಕೊಂಡವರಲ್ಲಿ ಅರ್ಜುನ್ ಸಿಂಗ್, ಮೊಹ್ಸಿನಾ ಕಿದ್ವಾಯಿ, ಕೆ.ಕೇಶವರಾವ್ ಮತ್ತು ಜಿ.ವೆಂಕಟಸಾಮಿ ಪ್ರಮುಖರು.

ಎಐಸಿಸಿ ಹೊಸ ತಂಡ ಇಂತಿದೆ:
ಖಜಾಂಚಿ: ಮೋತಿಲಾಲ್ ವೋರಾ
ರಾಜಕೀಯ ಕಾರ್ಯದರ್ಶಿ: ಅಹ್ಮದ್ ಪಟೇಲ್
ಪ್ರಧಾನ ಕಾರ್ಯದರ್ಶಿಗಳು: ರಾಹುಲ್ ಗಾಂಧಿ, ಬಿ.ಕೆ.ಹರಿಪ್ರಸಾದ್, ವೀರೇಂದರ್ ಸಿಂಗ್, ದಿಗ್ವಿಜಯ್ ಸಿಂಗ್, ಗುಲಾಂ ನಬೀ ಆಜಾದ್, ಜನಾರ್ದನ ದ್ವಿವೇದಿ, ಮಧುಸೂದನ್ ಮಿಸ್ತ್ರಿ ಮತ್ತು ಆಸ್ಕರ್ ಫೆರ್ನಾಂಡಿಸ್.
ವಿವಿಧ ರಾಜ್ಯಗಳ ಅಥವಾ ಸಂಸ್ಥೆಗಳ ಉಸ್ತುವಾರಿಗಳು: ಧನಿರಾಮ್ ಶಾಂಡಿಲ್ಯ, ಗುಲ್ಚೈನ್ ಸಿಂಗ್ ಚರಕ್, ಜಗದೀಶ್ ಟೈಟ್ಲರ್, ಜಗಮೀತ್ ಸಿಂಗ್ ಬ್ರಾರ್, ಲೂಯಿಸಿನೋ ಫಲೆರೋ, ಮೋಹನ್ ಪ್ರಕಾಶ್, ಮೊಹ್ಸಿನಾ ಕಿದ್ವಾಯಿ, ಶಕೀಲ್ ಅಹ್ಮದ್.
ಖಾಯಂ ಆಹ್ವಾನಿತರು: ಅರ್ಜುನ್ ಸಿಂಗ್, ಮೊಹ್ಸಿನಾ ಕಿದ್ವಾಯಿ, ಪಿ.ಚಿದಂಬರಂ, ಡಾ.ಕರಣ್ ಸಿಂಗ್, ಎಂ.ಎಲ್.ಫೋತೆದಾರ್, ಆರ್.ಕೆ.ಧವನ್, ಎಸ್.ಸಿ.ಜಮೀರ್, ಶಿವಾಜಿರಾವ್ ದೇಶಮುಖ್, ಬೇನಿಪ್ರಸಾದ್ ವರ್ಮಾ, ಎಂ.ವಿ.ರಾಜಶೇಖರನ್, ಅಜಿತ್ ಜೋಗಿ, ಶಕೀಲ್ ಅಹ್ಮದ್, ಜಗದೀಶ್ ಟೈಟ್ಲರ್, ಜಗಮೀತ್ ಸಿಂಗ್ ಬ್ರಾರ್, ಲೂಯಿಸಿನೋ ಫಲೆರೋ, ಮೋಹನ್ ಪ್ರಕಾಶ್, ಗುಲ್ಚೈನ್ ಸಿಂಗ್ ಚರಕ್.
ವಿಶೇಷ ಆಹ್ವಾನಿತರು: ಜಿ.ಸಂಜೀವ ರೆಡ್ಡಿ, ಮೊಹಿಂದರ್ ಸಿಂಗ್ ಕೇಪೀ, ಅನಿಲ್ ಶಾಸ್ತ್ರಿ, ನಿರ್ಮಲ್ ಖಾತ್ರಿ, ರಾಜ್ ಬಬ್ಬರ್.
ಕಾರ್ಯದರ್ಶಿಗಳು: ಅಬ್ದುಲ್ ಮನನ್ ಅನ್ಸಾರಿ, ಅನೀಸ್ ಅಹ್ಮದ್, ಅಶೋಕ್ ತನ್ವರ್, ಭಕ್ತ ಚರಣ್ ದಾಸ್, ಮಿರ್ಜಾ ದಿಲ್ಶದ್ ಬೇಗ್, ಜೈದೇವ್ ಜೇನಾ, ಜಿತೇಂದ್ರ ಸಿಂಗ್, ಕೆ.ಜಯಕುಮಾರ್, ಕೆ.ಬಿ.ಕೃಷ್ಣಮೂರ್ತಿ, ಮನೀಷ್ ಚತ್ರಥ್, ಮೀನಾಕ್ಷಿ ನಟರಾಜನ್, ಪಂಕಜ್ ಶರ್ಮಾ, ಪರ್ವೇಜ್ ಹಶ್ಮಿ, ಪ್ರವೀಣ್ ರಾಷ್ಟ್ರಪಾಲ್, ಪ್ರಿಯಾ ದತ್, ಆರ್.ಸಿ.ಖುಂತಿಯಾ, ಸಾಗರ್ ರಾಯ್ಕ, ಸಂಜಯ್ ಭಂಕುನಾ, ಸಂಜಯ್ ಭೋರಿ, ಸಂಜಯ್ ನಿರುಪಮ್, ಶನಿಮೋಲ್ ಉಸ್ಮಾನ್, ಶಾಂತಾರಾಮ್ ನಾಯಕ್, ಸುಧಾಕರ ರೆಡ್ಡಿ, ತಾರಾಚಂದ್ ಭಗೋರಾ, ವಿ.ಹನುಮಂತ ರಾವ್, ಮೇಜರ್ ವೇದ ಪ್ರಕಾಶ್, ವಿನಯ್ ಕುಮಾರ್ ಸೊರಕೆ, ವಿವೇಕ್ ಬನ್ಸಾಲ್.
ವಿಶೇಷ ಕಾರ್ಯದರ್ಶಿಗಳು : ಅವತಾರ್ ಸಿಂಗ್ ಭದನಾ, ದೀಪಕ್ ಬಾಬರಿಯಾ, ವಿಜಯಲಕ್ಷ್ಮಿ ಸಾಧು, ಆಶಾ ಕುಮಾರಿ, ಪಂಕಜ್ ಶರ್ಮಾ.

Share this Story:

Follow Webdunia kannada