ನವದೆಹಲಿ: ಭಾರೀ ಪ್ರಚಾರ ಪಡೆದಿದ್ದ ತಮ್ಮ ಮಗ, ಬಿಜೆಪಿಯ ಸಂಸದ ವರುಣ್ ಗಾಂಧಿ ಅವರ ವಿವಾಹದ ಆರತಕ್ಷತೆಯನ್ನು ರದ್ದುಪಡಿಸಲಾಗಿದೆ ಎಂದು ಬಿಜೆಪಿ ಸಂಸದೆ ಮನೇಕಾ ಗಾಂಧಿ ಹೇಳಿದ್ದಾರೆ. ವರುಣ್ ಅವರ ಅಜ್ಜಿ ವಿಧಿವಶರಾಗಿರುವುದೇ ಇದಕ್ಕೆ ಕಾರಣ.
ಇಂದಿರಾ ಗಾಂಧಿಯ ಮೊಮ್ಮಗ, 30ರ ಹರೆಯದ ವರುಣ್ ಗಾಂಧಿ ಅವರು ಕೋಲ್ಕತಾ ಫ್ಯಾಶನ್ ಡಿಸೈನರ್ ಯಾಮಿನಿ ರಾಯ್ ಅವರನ್ನು ಮಾರ್ಚ್ 6ರಂದು ವಾರಾಣಸಿಯಲ್ಲಿ ವಿವಾಹವಾಗಲಿದ್ದಾರೆ. ಆದರೆ, ಮುಂದಿನ ವಾರ ದೆಹಲಿಯಲ್ಲಿ ಭಾರತ ರಾಜಕಾರಣದ ದೊಡ್ಡ ದೊಡ್ಡ ತಲೆಗಳೆಲ್ಲವೂ ಭಾಗವಹಿಸಲಿದ್ದ ಆರತಕ್ಷತೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಮನೇಕಾ ಗಾಂಧಿಯ 77ರ ಹರೆಯದ ತಾಯಿ ಅಮೃತೇಶ್ವರ್ ಆನಂದ್ ಅವರು ಸೋಮವಾರ ನಿಧನರಾಗಿದ್ದರು.