ಕೋಮಲ್ ಕುಮಾರ್ ನಿರ್ದೇಶನ? ಆ ಚಿತ್ರಕ್ಕೆ ರಾಗಿಣಿ ಹೀರೋಯಿನ್ ?

ಮಂಗಳವಾರ, 15 ಏಪ್ರಿಲ್ 2014 (10:04 IST)
PR
ಹೌದು ನಟ ಕೋಮಲ್ ಕುಮಾರ್ ಚಿತ್ರದಲ್ಲಿ ನಿರ್ದೇಶಕನ ಪಾತ್ರವನ್ನು ಮಾಡುತ್ತಿದ್ದಾರೆ.
ಹೊಸ ಚಿತ್ರ ಒಂದರಲ್ಲಿ ನಟ ಕೋಮಲ್ ಕುಮಾರ್ ಮತ್ತು ರಾಗಿಣಿ ದ್ವಿವೇದಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕೋಮಲ್ ಸಿನಿಮ ತಯಾರಕನ ಪಾತ್ರದಲ್ಲಿ ಕಾಣಸಿಗುತ್ತಿದ್ದಾರೆ. ಈ ಚಿತ್ರದಲ್ಲಿ ರಾಗಿಣಿ ಸೂಪರ್ ಸ್ಟಾರ್ ಪಾತ್ರದಲ್ಲಿ ಕಾಣ ಸಿಗುತ್ತಿದ್ದಾಳೆ. ಚಿತ್ರವನ್ನು ರವೀಂದ್ರ ದಾಸ್ ಅವರು ನಿರ್ದೇಶಿಸುತ್ತಿದ್ದಾರೆ. ಬಹಳ ವರ್ಷಗಳ ಬಳಿಕ ಮತ್ತೆ ರವೀಂದ್ರ ಅವರು ಆಕ್ಷನ್ ಕಟ್ ಹೇಳಲಿದ್ದಾರೆ.

ಈ ಚಿತ್ರದ ಚಿತ್ರೀಕರಣ ಮೇ ತಿಂಗಳಲ್ಲಿ ಆರಂಭ ಆಗುತ್ತದೆ. ಚಿತ್ರವನ್ನು ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡುವ ಬಗ್ಗೆ ಯೋಜಿಸಲಾಗಿದೆ. ಮತ್ತೆ ಬನ್ನಿ ಪ್ರಿತಿಸೋಣ ಎನ್ನುವ ಚಿತ್ರವನ್ನು ರವೀಂದ್ರ ಈ ಮೊದಲು ನಿರ್ದೇಶಿಸಿದ್ದರು. ಅದು ಸಾಕಷ್ಟು ಸದ್ದು ಮಾಡಿತ್ತು ಬಾಕ್ಸಾಫೀಸಲ್ಲಿ. ಆ ಚಿತ್ರವೂ 2011ರಲ್ಲಿ ಬಿಡುಗಡೆ ಆಗಿತ್ತು. ಪ್ರೇಂ ಕುಮಾರ್ ಮತ್ತು ಕರಿಷ್ಮ ತನ್ನ ಮುಖ್ಯ ಪಾತ್ರಧಾರಿಗಳಾಗಿದ್ದರು. ಅನೂಪ್ ಸೀಳಿನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದರು.

ವೆಬ್ದುನಿಯಾವನ್ನು ಓದಿ