Select Your Language

Notifications

webdunia
webdunia
webdunia
webdunia

ಜಗತ್ತೇ ವಿಕಿಲೀಕ್ಸ್ ತಿರಸ್ಕರಿಸಿರುವಾಗ ನಿಮ್ಮದೇನು?: ಕಾಂಗ್ರೆಸ್

ವಿಕಿ ಲೀಕ್ಸ್
ನವದೆಹಲಿ , ಗುರುವಾರ, 17 ಮಾರ್ಚ್ 2011 (18:34 IST)
2008ರ ವಿಶ್ವಾಸ ಮತ ಯಾಚನೆ ವೇಳೆ ಬೇರೆ ಪಕ್ಷಗಳ ಸಂಸದರನ್ನು ಖರೀದಿಸಿದ ಆರೋಪದ ಬಗ್ಗೆ ಪ್ರತಿಪಕ್ಷಗಳು ಕೋಲಾಹಲವೆಬ್ಬಿಸುತ್ತಿದ್ದರೆ, ಇದಕ್ಕೆ ಉತ್ತರಿಸಲು ತಡವರಿಸಿರುವ ಕಾಂಗ್ರೆಸ್, ಈ ವಿಷಯದ ಕಾರಣಕ್ಕೆ ಸಂಸತ್ ಕಲಾಪಗಳನ್ನು ಸ್ಥಗಿತಗೊಳಿಸಿರುವುದಕ್ಕೆ ಬಿಜೆಪಿ ಮತ್ತು ಇತರ ಪ್ರತಿಪಕ್ಷಗಳ ಮೇಲೆಯೇ ಕಿಡಿ ಕಾರಿದೆಯಲ್ಲದೆ, ಇಡೀ ವಿಶ್ವವೇ ವಿಕಿಲೀಕ್ಸ್ ವರದಿಯನ್ನು ತಿರಸ್ಕರಿಸಿರುವಾಗ ನಿಮ್ಮದೇನು ಎಂದು ಪ್ರಶ್ನಿಸಿದೆ.

ಒಬ್ಬ ರಾಯಭಾರಿಯು ತನ್ನ ಸಾರ್ವಭೌಮ ಸರಕಾರಕ್ಕೆ ಏನಾದರೂ ವರದಿ ಸಲ್ಲಿಸಿದರೆ, ಇದಕ್ಕೆ ಸರಕಾರವೇ ಜವಾಬ್ದಾರಿ ಹೊರಬೇಕು ಎಂದು ನನಗನ್ನಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಹೇಳಿದ್ದಾರಲ್ಲದೆ, ಕಲಾಪ ನಡೆಯಲು ತಡೆಯೊಡ್ಡುತ್ತಿರುವ ಪ್ರತಿಪಕ್ಷ ಸದಸ್ಯರು ಇದಕ್ಕಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕಾರಣಕ್ಕೆ ನೀವು ಸಂಸತ್ತಿನ ಕಲಾಪವನ್ನೇ ಸ್ಥಗಿತಗೊಳಿಸುವಂತಿಲ್ಲ ಮತ್ತು ನೀವು ಮಂತ್ರಿಗಳ ಉತ್ತರಕ್ಕೂ ಅವಕಾಶ ಕೊಡುತ್ತಿಲ್ಲ. ಸದನದಲ್ಲಿ ಈ ರೀತಿಯ ವರ್ತನೆಗೆ ಪ್ರತಿಪಕ್ಷಗಳು, ವಿಶೇಷವಾಗಿ ಬಿಜೆಪಿ ಕ್ಷಮೆ ಯಾಚಿಸಬೇಕು ಎಂದವರು ಆಗ್ರಹಿಸಿದರು.

ಇವೆಲ್ಲಾ ಅಮೆರಿಕ ರಾಯಭಾರ ಕಚೇರಿ ಮತ್ತು ಅಲ್ಲಿನ ಸರಕಾರದ ನಡುವೆ ನಡೆದ ಆಂತರಿಕ ಸಂವಹನಗಳು. ಇದು ರಾಜತಾಂತ್ರಿಕ ಚಾನೆಲ್ ಆಗಿರುವುದರಿಂದ, ಇದಕ್ಕೆ ಸರಕಾರ ಯಾಕೆ ಹೊಣೆಯಾಗಬೇಕು ಎಂದು ವರದಿ ಬಹಿರಂಗಪಡಿಸಿರುವ ಕುರಿತು ಶುಕ್ಲಾ ಹೇಳಿದರು.

ಅಮೆರಿಕದ ವ್ಯವಹಾರಗಳ ಉಸ್ತುವಾರಿಯಾಗಿದ್ದ ಸ್ಟೀವನ್ ವೈಟ್ ಅವರು ತಮ್ಮ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ 'ಓಟಿಗಾಗಿ ನೋಟು' ಉಲ್ಲೇಖವೂ ಇದ್ದು, ಇದರಲ್ಲಿ ಕಾಂಗ್ರೆಸಿಗ ಸತೀಶ್ ಶರ್ಮಾ ಮತ್ತು ಅವರ ಅನುಯಾಯಿಯಾದ ನಚಿಕೇತ್ ಕಪೂರ್ ಹೆಸರುಗಳಿವೆ. ಇದನ್ನು ಆಧರಿಸಿಯೇ ಕ್ರಿಮಿನಲ್ ತನಿಖೆಗಾಗಿ ಎಫ್ಐಆರ್ ದಾಖಲಿಸಬೇಕು ಎಂದು ಸಿಪಿಎಂ ಆಗ್ರಹಿಸಿದೆ.

Share this Story:

Follow Webdunia kannada