Select Your Language

Notifications

webdunia
webdunia
webdunia
webdunia

ಕೇರಳದಲ್ಲಿ ಕಾಡಾನೆ ದಾಳಿಗೆ ಮತ್ತೋರ್ವ ಬಲಿ: ಮೂರು ತಿಂಗಳಿನಲ್ಲಿ 5 ಮಂದಿ ದುರ್ಮರಣ

ಕೇರಳದಲ್ಲಿ ಕಾಡಾನೆ ದಾಳಿಗೆ ಮತ್ತೋರ್ವ ಬಲಿ: ಮೂರು ತಿಂಗಳಿನಲ್ಲಿ 5 ಮಂದಿ ದುರ್ಮರಣ

Sampriya

ಕೇರಳ , ಸೋಮವಾರ, 1 ಏಪ್ರಿಲ್ 2024 (14:40 IST)
Photo Courtesy X
ಕೇರಳ: ಕೇರಳದ ಪಥನಂತಿಟ್ಟ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಇದರಿಂದ ಕಳೆದ ಮೂರು ಕಾಡು ಪ್ರಾಣಿಗಳ ದಾಳಿಗೆ ಕೇರಳದಲ್ಲಿ ಸಾವನ್ನಪ್ಪಿದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಇನ್ನೂ ಆನೆಗಳ ದಾಳಿಗೆ ಮೂರು ತಿಂಗಳಿನಲ್ಲಿ 5 ಮಂದಿ ಕೊನೆಯುಸಿರೆಳೆದಿದ್ದಾರೆ.

ಮೃತರನ್ನು ಪತ್ತನಂತಿಟ್ಟದ ತುಳಪಲ್ಲಿ ನಿವಾಸಿ ಕೋಡಿಲಿಲ್ ಬಿಜು (56) ಎಂದು ಗುರುತಿಸಲಾಗಿದೆ.

ಕೇರಳ ಪೊಲೀಸರ ಪ್ರಕಾರ, ಶಬರಿಮಲೆ ಅರಣ್ಯದ ಗಡಿ ಪ್ರದೇಶದಲ್ಲಿರುವ ಎರುಮೇಲಿ ಸಮೀಪದ ತುಳಪಲ್ಲಿಯಲ್ಲಿ ಭಾನುವಾರ ಈ ಘಟನೆ ಸಂಭವಿಸಿದೆ.


ತೆಂಗಿನ ಮರವನ್ನು ಉರುಳಿಸುವ ವೇಳೆ ಬಿಜು ಎಂಬಾತನ ಮೇಲೆ ಆನೆ ದಾಳಿ ಮಾಡಿದ್ದು, ಅಲ್ಲೇ ಸ್ಥಳದಲ್ಲೇ  ಕೊನೆಯುಸಿರೆಳೆದಿದ್ದಾನೆ.

ಘಟನೆಯ ಬಗ್ಗೆ ಅಕ್ರೋಶಗೊಂಡ ಸ್ಥಳಿಯರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳು ಅಥವಾ ಇತರ ಉನ್ನತ ಅಧಿಕಾರಿಗಳು ಬರುವವರೆಗೂ ಬಿಜು ಅವರ ಮೃತದೇಹವನ್ನು ಸ್ಥಳಾಂತರಿಸಲು ನಿರಾಕರಿಸಿದರು.

ಇದಕ್ಕೂ ಮೊದಲು ಫೆಬ್ರವರಿ 16 ರಂದು ಪುಲ್ಪಲ್ಲಿಯ ಪಕ್ಕಂ ಮೂಲದ ಪೌಲ್, ಆನೆಗಳ ಹಿಂಡು ದಾಳಿಗೆ ಒಳಗಾಗಿ ಸಾವನ್ನಪ್ಪಪಿದರು.  
ಜನವರಿ 30 ರಂದು, ಮಾನಂತವಾಡಿ ಸಮೀಪದ ನಾರಿಕಲ್ ನಿವಾಸಿ ಲಕ್ಷ್ಮಣ್ ಎಂದು ಗುರುತಿಸಲಾದ 55 ವರ್ಷದ ವ್ಯಕ್ತಿಯನ್ನು ಕಾಡಾನೆಗಳು ಕೊಂದಿದ್ದವು.
ಅದೇ ರೀತಿ ಫೆಬ್ರವರಿ 10 ರಂದು ಮಾನಂತವಾಡಿ ಬಳಿ ಅಜೀಶ್ ಎಂಬ 47 ವರ್ಷದ ವ್ಯಕ್ತಿಯನ್ನು ಕಾಡಾನೆ ತುಳಿದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಪಶ್ಚಿಮ ಬಂಗಾಳದಲ್ಲಿ ಬಿರುಗಾಳಿ, ಮಳೆ: ಐವರು ಸಾವು, ನೂರಾರು ಮಂದಿಗೆ ಗಾಯ