Select Your Language

Notifications

webdunia
webdunia
webdunia
webdunia

ಆತಂಕ ಬೇಡ, ಖಂಡಿತಾ ಬೆತ್ತಲಾಗ್ತೀನಿ: ಪೂನಂ ಪಾಂಡೆ ಪುನರುಚ್ಚಾರ!

ಪೂನಂ ಪಾಂಡೆ
ಮುಂಬೈ , ಶುಕ್ರವಾರ, 1 ಏಪ್ರಿಲ್ 2011 (11:45 IST)
PR
ಟೀಂ ಇಂಡಿಯಾ ವಿಶ್ವಕಪ್ ಗೆದ್ರೆ ಬೆತ್ತಲೆ ಸೇವೆ ಮಾಡುವುದಾಗಿ ಈಗಾಗಲೇ ಹೇಳಿಕೆ ನೀಡಿರುವ ಮುಂಬೈ ಮೂಲದ ಮಾಡೆಲ್ ಪೂನಂ ಪಾಂಡೆ, ಏನೂ ಹೆದರಬೇಡಿ, ಮಾತಿಗೆ ತಪ್ಪುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.

"ಖಂಡಿತವಾಗಿಯೂ ಬೆತ್ತಲಾಗ್ತೀನಿ. ಆದ್ರೆ ಎಲ್ಲಿ? ಅವರು ಎಲ್ಲೀಂತ ಹೇಳ್ತಾರೋ ಅಲ್ಲಿ. ಆಟಗಾರರ ಡ್ರೆಸ್ಸಿಂಗ್ ರೂಂನಲ್ಲಾದ್ರೂ ಸೈ, ಸ್ಟೇಡಿಯಂನಲ್ಲೇ ಆದ್ರೂ ಸೈ" ಎಂದಿದ್ದಾರೆ ಆಕೆ.

ತನ್ನ ಈ 'ಕೊಡುಗೆ'ಗೆ ದೇಶಾದ್ಯಂತ ಭರ್ಜರಿ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿಕೊಂಡಿರುವ ಆಕೆ, 'ಎಲ್ಲರೂ ಪ್ರೋತ್ಸಾಹ ನೀಡುತ್ತಿದ್ದಾರೆ. ನಾನು ಟೀಂ ಇಂಡಿಯಾಗಾಗಿ ಇದೆಲ್ಲವನ್ನೂ ಮಾಡುತ್ತಿರುವುದರಿಂದ ನನ್ನ ಹೆತ್ತವರು ಕೂಡ ನನ್ನ ನಿರ್ಧಾರದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ನಾನು ಬೆತ್ತಲಾಗುವುದಕ್ಕೆ ಅವರದ್ದೇನೂ ಆಕ್ಷೇಪ ಇಲ್ಲ' ಎಂದೂ ಹೇಳಿಕೊಂಡಿದ್ದಾಳೆ ಪಾಂಡೆ.

ನಗ್ನತೆ ಎಂಬುದೊಂದು ಅಪರಾಧ ಮತ್ತು ಇದರಿಂದ ಆಕೆಗೆ ತೊಂದರೆಯಾಗಬಹುದು ಎಂಬ ಕುರಿತು ಎಚ್ಚರಿಸಿದಾಗ, 'ನಾನು ಇದಕ್ಕೆ ಭಾರತೀಯ ಕ್ರಿಕೆಟ್ ಮಂಡಳಿಯಿಂದ ಅನುಮತಿ ಪಡೆಯುತ್ತೇನೆ. ಆದರೆ ಕಾನೂನಿಗೆ ವಿರುದ್ಧವಾಗಿ ಏನನ್ನೂ ಮಾಡಲಾರೆ' ಎಂದು ಹೇಳಿದ್ದಾರೆ ಪೂನಂ.

ಆದರೆ ಆಕೆಯ 'ಅಭಿಮಾನಿ'ಗಳೆಲ್ಲಾ ಹೇಳುವುದೆಂದರೆ, ಬಿಸಿಸಿಐ ಅನುಮತಿ ನೀಡಲಿ, ಬಿಡಲಿ, ಅವಳು ಮಾತ್ರ ನಗ್ನಳಾಗಬೇಕು ಎಂದು. ಆಕೆಯ ಫೇಸ್‌ಬುಕ್, ಟ್ವಿಟ್ಟರ್ ಗೆಳೆಯ-ಗೆಳತಿಯರನೇಕರು ಅವಳ ಬೆಂಬಲಕ್ಕಿದ್ದಾರೆ. ಯಾವುದೇ ನೆಪ ಹೇಳಿ ತಪ್ಪಿಸಿಕೊಳ್ಳಬಾರದು ಎಂಬುದು ಅವರೆಲ್ಲರ ಸಲಹೆಯ ಸಾರಾಂಶ.

ಗೆದ್ದ ಟೀಂ ಇಂಡಿಯಾ ಹುಡುಗರಿಗೆ ಕೊಡುವ ಅತ್ಯಂತ ದೊಡ್ಡ ಕೊಡುಗೆ ಎಂದರೆ ನಗ್ನಳಾಗುವುದು ಎಂದೇ ನಂಬಿರುವ ಆಕೆಯ ಫೇಸ್‌ಬುಕ್ ಸ್ಟೇಟಸ್ ಸಂದೇಶದಲ್ಲಿ, "ನಾನು ಹೊಸ ಪೀಳಿಗೆಯ ಹುಡುಗಿ!!! ನನ್ನ ದೇಶ ವಿಶ್ವಕಪ್ ಗೆದ್ದುಕೊಳ್ಳಲು ಏನೇ ಮಾಡಲೂ ಸಿದ್ಧ. ಹೀಗಾಗಿ, 1983ರ ವಿಶ್ವಕಪ್ ಅನ್ನು ಮರಳಿ ತರಲು ಓ ಭಾರತವೇ, ನನ್ನೊಂದಿಗೆ ದನಿಗೂಡಿಸಿ!!!" ಎಂದು ಬರೆಯಲಾಗಿದೆ. ಅಂದ ಹಾಗೆ ಈಕೆ, ಕಳೆದೆರಡು ವರ್ಷಗಳಲ್ಲಿ ಗೂಗ್ಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಆದ ಮತ್ತು ಡೌನ್‌ಲೋಡ್ ಆಗಿರುವ ಹಾಟ್ ಬೆಡಗಿ!

webdunia
PR

webdunia
PR

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada