Select Your Language

Notifications

webdunia
webdunia
webdunia
webdunia

ದಸರಾಗೆ ಮತ್ತೊಂದು ಮೆರುಗು: ಆಯುಧಪೂಜೆ

ದಸರಾಗೆ ಮತ್ತೊಂದು ಮೆರುಗು: ಆಯುಧಪೂಜೆ
ದಸರಾ ಕಾರ್ಯಕ್ರಮದ ಪ್ರಯುಕ್ತ ಭಾನುವಾರ ನಡೆಯುವ ಜಂಬೂ ಸವಾರಿಯ ಮುನ್ನಾ ದಿನ ಆಯುಧ ಪೂಜೆ ನಡೆಯಲಿದೆ.

ಶನಿವಾರ ಅರಮನೆಯಲ್ಲಿ ಖ್ಯಾತ ಹಿಂದಿ ಚಲನಚಿತ್ರ ತಾರೆ ಹೇಮಮಾಲಿನಿಯಿಂದ ಸಂಜೆ 7 ಗಂಟೆಗೆ ಭರತನಾಟ್ಯ ಕಾರ್ಯಕ್ರಮವಿದೆ. ಇದರ ಪ್ರವೇಶವನ್ನು ಸಾರ್ವಜನಿಕರಿಗೆ ಮುಕ್ತವಾಗಿರಿಸಲಾಗಿದೆ.

ಶತ್ರುವನ್ನು ಸಂಹಾರ ಮಾಡಿ ವಿಜಯ ಯಾತ್ರೆಯನ್ನು ಕೈಗೊಳ್ಳುವುದರ ಪ್ರತೀಕವೇ ಜಂಬೂ ಸವಾರಿ. ಬನ್ನಿ ವೃಕ್ಷವನ್ನು ಶಮೀ ವೃಕ್ಷವೆಂತಲೂ ಕರೆಯುತ್ತಾರೆ. ಹಿಂದೆ ಪಾಂಡವರು ಅಜ್ಞಾತ ವಾಸಕ್ಕೆ ಹೋದಾಗ ತಮ್ಮ ಶಸ್ತ್ರಾಸ್ತ್ರಗಳನ್ನು ಶಮೀ ವೃಕ್ಷದಲ್ಲಿ ಬಚ್ಚಿಟ್ಟು ತಾವು ಬರುವವರೆಗೆ ಆ ಆಯುಧಗಳನ್ನು ಕಾಪಾಡುವ ಜವಾಬ್ದಾರಿಯನ್ನು ಬನ್ನೀ ಮಾತೆಗೆ ಕೊಟ್ಟಿದ್ದರಂತೆ.

ತಮ್ಮ ಆಯುಧವನ್ನು ಕಾಪಾಡಿದ ಬನ್ನಿ ವೃಕ್ಷವು ಮುಂದೆ ಶತ್ರು ಸಂಹಾರ ಕಾರ್ಯಕ್ಕೆ ನೆರವಾದದ್ದರಿಂದ ಅದಕ್ಕೆ ಧನ್ಯವಾದ ವ್ಯಕ್ತಪಡಿಸುವುದು ಈ ಪೂಜೆಯ ಹಿಂದಿನ ಮರ್ಮ.

ಬನ್ನಿ ಮರವನ್ನು ಪ್ರತಿಷ್ಠಾಪಿಸಿದ ಬನ್ನಿ ಮಂಟಪಕ್ಕೆ ಹೋಗಿ, ಬನ್ನಿ ಮರವನ್ನು ಸುತ್ತಿ ಬನ್ನಿ ಮುಡಿದು ಗುರು ಹಿರಿಯರಿಗೆ ಕೊಟ್ಟು ನಮಿಸುವುದು ಅಂದಿನಿಂದ ಬಂದಿರುವ ಸಂಪ್ರದಾಯ.

ಮತ್ತೊಂದು ಪುರಾಣ ಕಥೆಯಂತೆ ಶತ್ರುಸಂಹಾರ ಕಾರ್ಯ ಮಾಡಿ ನವರಾತ್ರಿಯ ಹತ್ತೂ ದಿನಗಳಲ್ಲಿ ದೇವಿಯು ಬನ್ನಿ ಮರದಲ್ಲಿ ನೆಲಸಿರುತ್ತಾಳಂತೆ. ವಿಜಯದಶಮಿಯ ದಿನದಂದು ದೇವಿಯ ದರ್ಶನ ಭಾಗ್ಯ ಎಲ್ಲಾ ಕಾರ್ಯಗಳಿಗೂ ವಿಜಯದ ಬುನಾದಿ ಎಂಬ ನಂಬಿಕೆಯಿಂದ ಬನ್ನಿ ಮಂಟಪಕ್ಕೆ ಪ್ರಯಾಣ ಬೆಳಸುತ್ತಾರೆಂಬುದು ವಾಡಿಕೆಯಲ್ಲಿದೆ.

Share this Story:

Follow Webdunia kannada