Select Your Language

Notifications

webdunia
webdunia
webdunia
webdunia

ಹಾಲಿವುಡ್ಡಿನಿಂದ ಭಾರತಕ್ಕಪ್ಪಳಿಸಿದೆ ಅಪರೂಪದ 'ಅವತಾರ್'

ಹಾಲಿವುಡ್ಡಿನಿಂದ ಭಾರತಕ್ಕಪ್ಪಳಿಸಿದೆ ಅಪರೂಪದ 'ಅವತಾರ್'
ಇತ್ತೀಚೆಗೆ ಕೆಲದಿನಗಳಿಂದ ಭಾರೀ ಸುದ್ದಿ ಮಾಡುತ್ತಿರುವ ಹಾಲಿವುಡ್ ಚಿತ್ರ ಅವತಾರ್ ಬಿಡುಗಡೆ ಕಂಡಿದ್ದು, ವಿಮರ್ಶಕರಿಂದ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಸಿನಿಮಾ ತಂತ್ರಜ್ಞಾನ ಕ್ಷೇತ್ರದಲ್ಲಿ ಇದೊಂದು ಕ್ರಾಂತಿ ಎಂದೇ ವರ್ಣಿಸಲಾಗುತ್ತಿದ್ದು, ಜಗತ್ತಿನ ಚಲನಚಿತ್ರೋದ್ಯಮದಲ್ಲಿ ಇದೊಂದು ಹೊಸ ಮೈಲುಗಲ್ಲು ಬರೆದಿದೆ ಎಂದೇ ಬಣ್ಣಿಸಲಾಗುತ್ತಿದೆ. ಈವರೆಗೆ ಬರದೇ ಇರುವಂಥ ಫ್ರೆಶ್ ತಾಂತ್ರಿಕತೆಯನ್ನು ನೀಡಿರಿವ ಹೆಗ್ಗಳಿಕೆ ಈ ಚಿತ್ರದ್ದು ಎಂದು ಅಭೂತಪೂರ್ವ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ವಿಶೇಷವೆಂದರೆ, ಈಗಾಗಲೇ ಶುಕ್ರವಾರ ಬಿಡುಗಡೆಗೊಂಡ ಮಧ್ಯರಾತ್ರಿಯ ಶೋ ಒಂದರಲ್ಲೇ 3.5 ಮಿಲಿಯನ್ ಡಾಲರ್‌ಗಳಷ್ಟು ಯುನೈಟೆಡ್ ಸ್ಟೇಟ್ಸ್, ಕೆನಡಾಗಳಲ್ಲಿ ಸಂಗ್ರಹವಾಗಿದೆ!

ಅವತಾರ್ ಭಾರತದಲ್ಲಿ ಬಿಡುಗಡೆಯಾದ ಮೊದಲ ದಿನವೇ 6.75 ಕೋಟಿ ರೂಪಾಯಿ ಗಳಿಸಿದೆ! ಭಾರತದಲ್ಲಿ ಬಿಡುಗಡೆಯಾದ ಯಾವುದೇ ಹಾಲಿವುಡ್ ಚಿತ್ರ ಮೊದಲ ದಿನ ಇಷ್ಟೊಂದು ಮೊತ್ತವನ್ನು ಗಳಿಸಿರಲೇ ಇಲ್ಲ. ಅವತಾರ್ 2ಡಿ ಹಾಗೂ 3ಡಿ ರೂಪದಲ್ಲಿ ಇಂಗ್ಲೀಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಭಾರತದಾದ್ಯಂತ ಬಿಡುಗಡೆಯಾಗಿತ್ತು.

PR
1200 ಕೋಟಿ ರೂಪಾಯಿಗಳನ್ನು ನೀರಿನಂತೆ ವ್ಯಯಿಸಿ ಮಾಡಲಾಗಿದೆಯಂತೆ ಈ ಚಿತ್ರ. ಈವರೆಗೆ ಕಂಡಿರದಷ್ಟು ಬಜೆಟ್ಟಿನ ಚಿತ್ರ ಇದಾಗಿರುವುದರಿಂದ ಸಿನಿಮಾ ಮಂದಿಯ ಹುಬ್ಬೇರುವಂತೆ ಮಾಡಿದ್ದು ಸುಳ್ಳಲ್ಲ. ಈಗ ಬಿಡುಗಡೆಯ ನಂತರವೂ ಇದು ಹುಬ್ಬೇರಿಸುವಂತೆ ಮಾಡುತ್ತಿದೆ.

ಅವತಾರ್. ಹೆಸರು ಕೇಳಿದಾಕ್ಷಣ ಬಾಲಿವುಡ್ ಚಿತ್ರ ಎಂದರೂ ಧಾರಾಳವಾಗಿ ನಂಬಿಬಿಡಬಹುದು. ಕಾರಣ, ಈ ಹೆಸರು ಭಾರತೀಯ ಹೆಸರಿನಂತಿದೆ. ಹಾಗಾದರೆ ಭಾರತಕ್ಕೂ ಅವತಾರ್‌ಗೂ ಏನು ಸಂಬಂಧ ಎಂದರೆ ಉತ್ತರ ಸಿಗದಿರುವುದಿಲ್ಲ. ಕೊಂಚ ಭಾರತೀಯ ಕಥೆಗಳಿಂದ ಪ್ರೇರಿತವಾಗಿದೆಯೆಂದು ಹೇಳಿಕೊಂಡಿದ್ದು ಬಿಟ್ಟರೆ ಚಿತ್ರದ ನಿರ್ದೇಶಕರು ಮಾತ್ರ ಇಡೀ ಕಥೆಯನ್ನು ತನ್ನ ಬಾಲ್ಯದಲ್ಲಿ ಓದುತ್ತಿದ್ದ ವೈಜ್ಞಾನಿಕ ಕಾದಂಬರಿಗಳಿಂದ ಪ್ರೇರಿತನಾಗಿದ್ದೇನೆ. ಅದರ ಫಲ ಈ ಚಿತ್ರ ಎಂದು ಹೇಳಿದ್ದಾರೆ. ಟೈಟಾನಿಕ್ ಎಂಬ ಅದ್ಭುತ ಚಿತ್ರ ನೀಡಿದ ಹಾಲಿವುಡ್‌ನ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಈ ಚಿತ್ರ ನಿರ್ದೇಶಿಸಿ ಮತ್ತೆ ಸುದ್ದಿ ಮಾಡಿದ್ದಾರೆ. ಬರೋಬ್ಬರಿ 114 ಪುಟಗಳ ಚಿತ್ರಕಥೆಯನ್ನು ಎರಡು ವರ್ಷಗಳ ಹಿಂದೆಯೇ ರಚಿಸಿಕೊಂಡಿದ್ದ ನಿರ್ದೇಶಕ ಕ್ಯಾಮರಾನ್ ಶ್ರಮ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ.

webdunia
PR
ಅವತಾರ್ ತ್ರಿಡಿ ಚಿತ್ರ. ಇಡೀ ಚಿತ್ರವನ್ನು ಅತ್ಯಾಧುನಿಕ ತ್ರಿಡಿ ತಂತ್ರಜ್ಞಾನದಲ್ಲಿ ವೀಕ್ಷಿಸುವಂತೆ ಚಿತ್ರಿಸಲಾಗಿದೆ. ಸ್ಟೀರಿಯೋಸ್ಕೋಪಿಕ್ ಕ್ಯಾಮರಾಗಳನ್ನು ಬಳಸಲಾಗಿದೆ. ಚಿತ್ರಕ್ಕಾಗಿಯೇ ಹೊಸ ಕ್ಯಾಮರಾವನ್ನೇ ಹುಟ್ಟುಹಾಕಿದ ಕೀರ್ತಿಯೂ ಈ ಸಿನಿಮಾಕ್ಕಿದೆ. ಅತ್ಯಾಧುನಿಕ ವಿಶುವಲ್ ಎಫೆಕ್ಟ್ಗಳಿಂದ ಚಿತ್ರ ಸಂಪ್ನನವಾಗಿದೆ. ಈ ಚಿತ್ರವನ್ನು ಸುಮ್ಮನೆ ಇತರ ಚಿತ್ರಗಳಂತೆ ಕೂತು ನೋಡಲು ಸಾಧ್ಯವಿಲ್ಲ. ನೋಡಲು ತ್ರಿಡಿ ಕನ್ನಡಕ ಅಗತ್ಯ. ಇದನ್ನು ಪ್ರದರ್ಶಿಸುವ ಪರದೆಗಳೂ ಕೂಡಾ ತ್ರಿಡಿ ತಂತ್ರಜ್ಞಾನವನ್ನು ಹೊಂದಿರುವುದು ಅಗತ್ಯ.

ಭಾರತದಲ್ಲಿ ಮೊದಲ ಬಾರಿಗೆ ತ್ರಿಡಿ ವರ್ಶನ್ ಪರದೆ ಅಳವಡಿಸಿಕೊಂಡ ಹೆಗ್ಗಳಿಕೆಯಿರುವುದು ಬೆಂಗಳೂರಿನ ಊರ್ವಶಿ ಚಿತ್ರಮಂದಿರಕ್ಕೆ. ಭಾರತದಲ್ಲಿ 17 ಇಂಥ ಚಿತ್ರಮಂದಿರಗಳು ಈವರೆಗೆ ಇದ್ದವಾದರೂ, ಈಗ ಅವತಾರ್ ಬಿಡುಗಡೆಯ ಸಂದರ್ಭ ಇಂಥ ತಂತ್ರಜ್ಞಾನ ಹೊಂದಿರುವ ಚಿತ್ರಮಂದಿರಗಳ ಸಂಖ್ಯೆ 50ಕ್ಕೇರಿದೆ.

ಕಲ್ಪನೆ, ವಿಜ್ಞಾನ, ತಂತ್ರಜ್ಞಾನಗಳನ್ನೆಲ್ಲ ಮಿಳಿತಗೊಳಿಸಿ ಮಾಡಿರುವ ಚಿತ್ರವಿದು. 650 ಪ್ರಿಂಟುಗಳೊಡನೆ ಹೊರಬಂದಿರುವ ಈ ಚಿತ್ರ ಭಾರತ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಅಬ್ಬರದ ಪ್ರಚಾರದೊಂದಿಗೆ ಬಿಡುಗಡೆ ಕಂಡಿದೆ. ಇದನ್ನು ನೋಡುವ ಟಿಕೆಟ್ ದರವೂ ಜಾಸ್ತಿ. ಅನ್ಯಗ್ರಹವಾಸಿಗಳನ್ನು ಭೇಟಿಮಾಡುವ ಕಥೆ ಇದಾಗಿದೆ.

Share this Story:

Follow Webdunia kannada