Select Your Language

Notifications

webdunia
webdunia
webdunia
webdunia

"ಸರ್ಕಾರ್ ರಾಜ್"ನಲ್ಲಿ ಬಚ್ಚನ್‌ಗಳ ಅಭಿನಯ ಪೈಪೋಟಿ

ಸರ್ಕಾರ್ ನಂತರ ಬಂದಿರುವ ಸರ್ಕಾರ್ ರಾಜ್‌ನಲ್ಲಿ ಮೊದಲ ಬಾರಿಗೆ ನಟಿಸುತ್ತಿರುವುದು ಐಶ್ವರ್ಯಾ ರೈ ಬಚ್ಚನ್. ಬಚ್ಚನ್ ಕುಟುಂಬ ಸೇರಿದ ನಂತರ ಐಶ್ವರ್ಯಾ ರೈ ಅವರ ಮೊದಲ ಚಿತ್ರ. ಇಡೀ ಚಿತ್ರ ಸಾಗುವುದು ರಾಜಕೀಯ ಮತ್ತು ರಾಜಕೀಯ ಸುಳಿಗಳ ನಡುವೆ. ಎರಡಕ್ಕೂ ಹೆಚ್ಚು ಗಂಟೆಗಳ ಚಿತ್ರದಲ್ಲಿ ಭಾವನಾತ್ಮಕ ಅಭಿನಯ ಮತ್ತು ಸನ್ನಿವೇಶಗಳು ಸಮಾನಾಂತರವಾಗಿ ಸಾಗುತ್ತವೆ. ಸರ್ಕಾರ್ ರಾಜ್‌ನ ಬಿಗಿಯಾದ ಕಥಾ ನಿರೂಪಣೆ ಅದಕ್ಕಿಂತ ಹೆಚ್ಚಿನದ್ದು, ಕಥೆಯಲ್ಲಿನ ಸಶಕ್ತತೆ ಪ್ರೇಕ್ಷಕನನ್ನು ಎರಡು ಗಂಟೆಗಳ ಅಲುಗಾಡದಂತೆ ಮಾಡುತ್ತದೆ. ಅಚ್ಚರಿಯ ತಿರುವು ಸನ್ನಿವೇಶಗಳೊಂದಿಗೆ ಸಾಗುವ ಚಿತ್ರದ ಕೊನೆಯ ಅರ್ಧ ಗಂಟೆ ಅದ್ಭುತ. ಎರಡೇ ಶಬ್ದಗಳಲ್ಲಿ ಚಿತ್ರಕಥೆ ಕುರಿತು ಹೇಳಬೇಕು ಎಂದರೆ ಅದ್ಭುತ ಕಥೆ.
IFM

ರಾಮ್ ಗೋಪಾಲ್ ವರ್ಮಾ ಹಿಂದಿನ ಚಿತ್ರಗಳಿಗಿಂತಲೂ ಈ ಚಿತ್ರದ ನಿರ್ಮಾಣದಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಸನ್ನಿವೇಶಕ್ಕಿಂತ ಇನ್ನೊಂದು ಸನ್ನಿವೇಶ ಅದ್ಭುತವಾಗಿವೆ. ಕಥೆಗೆ ಚಿತ್ರದ ಆಕರ್ಷಕ ರೂಪ ನೀಡುವಲ್ಲಿ ಆರ್‌ಜಿವಿ ತಮ್ಮ ಎಲ್ಲ ಸಾಮರ್ಥ್ಯವನ್ನು ಧಾರೆ ಎರೆದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಚಿತ್ರದ ಕೆಲ ಸನ್ನಿವೇಶಗಳು ಮರೆಯಲಾರದ ಅನುಭವ ನೀಡುತ್ತವೆ. ಉದಾ:
* ಐಶ್ವರ್ಯ ಮತ್ತು ಅಭಿಷೇಕ್ ನಡುವಿನ ಮೊದಲ ಭೇಟಿ.
*ಅಭಿಷೇಕ್ ಬಚ್ಚನ್‌ಗೆ ಗೋವಿಂದ್ ನಾಮದೇವ್ ಲಂಚ ನೀಡುವ ಪ್ರಯತ್ನ
* ದಿಲೀಪ್ ಪ್ರಭಾವಳ್ಕರ್ ಮನೆಗೆ ಬಚ್ಚನ್‌ ಬೇಟಿ
* ಕಾಯ್ ಕಾಯ್ ಮೆನನ್‌ನೊಂದಿಗೆ ಬಚ್ಚನ್ ಮಾತುಕತೆ (ಸರ್ಕಾರ್ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್ ಹಿರಿಯ ಮಗನಾಗಿ ನಟಿಸಿರುವುದು, ಕಾಯ್ ಕಾಯ್.. ಈತನನ್ನು ಅಭಿಷೇಕ್ ಬಚ್ಚನ್‌ನನ್ನು ಗುಂಡಿಕ್ಕಿ ಕೊಂದಿರುತ್ತಾನೆ)

ಸಶಕ್ತ ಕಥೆ ಇರುವ ಸರ್ಕಾರ್ ರಾಜ್‌ನಲ್ಲಿ ನಟನೆಯ ಪೈಪೋಟಿ ಎಲ್ಲರಿಂದಲೂ ಬಂದಿದೆ. ಒಬ್ಬರೇ ಒಬ್ಬರು ನಪಾಸು ಆಗಿಲ್ಲ. ಅಮಿತಾಭ್‌ನೊಂದಿಗೆ ಅಭಿಷೇಕ್ ಅಭಿನಯದಲ್ಲಿ ಸರಿಸಾಟಿಯಾಗುವ ಪ್ರಯತ್ನ, ಇವರಿಬ್ಬರಿಗೆ ಸಮವಾಗಿ ಮೂರನೆ ಪಾತ್ರದಲ್ಲಿ ಇರುವ ಅನಿತಾ (ಐಶ್ವರ್ಯ ಬಚ್ಚನ್) ಅಭಿನಯ, ಸಹನಟರೊಂದಿಗೆ ಪೊಲೀಸ್ ಸಿಬ್ಬಂದಿಯ ಸಹಜವಾದ ವರ್ತನೆಗಳು ಮತ್ತಷ್ಟು ಮೆರುಗು ನೀಡಿವೆ. ಅಲನ್ ಅಮೀನ್ ಅವರ ನಿರ್ದೇಶನದ ತೀರ ಸಾಮಾನ್ಯವಾಗಿ ಕಾಣುವ ಹೊಡೆದಾಟದ ದೃಶ್ಯಗಳು ಮನಸ್ಸಿಗೆ ಮುದ ನೀಡುತ್ತವೆ.
webdunia
IFM

ಮೊದಲು "ಯುವಾ" ನಂತರ "ಗುರು" ಇದೀಗ "ಸರ್ಕಾರ್ ರಾಜ್" ಮೂಲಕ ಹಿಂದಿ ಚಿತ್ರರಂಗದ ಅದ್ಭುತ ನಟ ಎನಿಸಿಕೊಳ್ಳುವ ಹಾದಿಯಲ್ಲಿ ಅಭಿಷೇಕ್ ಬಚ್ಚನ್ ಮೂಡಿಸಿದ ಹೆಜ್ಜೆಯ ಗುರುತುಗಳೊಂದಿಗೆ ಪ್ರತಿಯೊಂದು ಸನ್ನಿವೇಶದಲ್ಲಿ ಅಭಿಷೇಕ್ ಪ್ರೇಕ್ಷಕನ ಗಮನ ಸೆಳೆಯುತ್ತಾರೆ. ಮೇಲಾಗಿ ಬಿಗ್ ಬಿಗೆ ಪ್ರತಿಸ್ಪರ್ಧೆ ಒಡ್ಡುವವರು ಯಾರಾದರೂ ಇದ್ದರೆ ಅದು ಮಗ ಅಭಿಷೇಕ್ ಮಾತ್ರ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಅಭಿಷೇಕ್‌ಗೆ ಅಭಿನಯದಲ್ಲಿ ಸರಿಸಾಟಿಯಾಗುವ ಪ್ರಯತ್ನವನ್ನು ಪತ್ನಿ ಐಶ್ವರ್ಯ ರೈ ಮಾಡಿದ್ದಾರೆ. ಇಲ್ಲಿಯವರೆಗೆ ಪುಂಖಾನು ಪುಂಖವಾಗಿ ಐಶ್ವರ್ಯ ಸೌಂದರ್ಯದ ಕುರಿತು ಮಾಧ್ಯಮಗಳು ಪುಟಗಟ್ಟಲೆ ಬರೆದಿವೆ. ಅಭಿನಯಕ್ಕೆ ಸಂಬಂದಿಸಿದಂತೆ ಮಾತ್ರ ಮಾಧ್ಯಮಗಳ ಅಭಿಪ್ರಾಯ ಅಷ್ಟಾಗಿ ಬಂದಿಲ್ಲ. ಹಮ್ ದಿಲ್ ದೇ ಚುಕೆ ಸನಮ್‌ನಿಂದ ಸರ್ಕಾರ್ ರಾಜ್‌ವರೆಗಿನ ಐಶ್ವರ್ಯ ಅಭಿನಯದ ಪಯಣ ಮನಮೋಹಕವಾಗಿದೆ.
webdunia
IFM


ಸರ್ಕಾರ್ ರಾಜ್‌ನಲ್ಲಿನ ಪೋಷಕ ನಟರ ಅಭಿನಯ ಕೂಡ ಪ್ರೇಕ್ಷಕನ ಗಮನ ಹಿಡಿದಿಡುವಲ್ಲಿ ಸಫಲವಾಗುತ್ತದೆ. ದಿಲೀಪ್ ಪ್ರಭಾವಳ್ಕರ್, ಗೋವಿಂದ ನಾಮದೇವ್, ಸಯ್ಯಾಜಿ ಶಿಂಧೆ, ರವಿ ಕಾಳೆ, ಸುಪ್ರಿಯಾ ಪಾಠಕ್, ತನಿಷಾ ಈ ಎಲ್ಲರ ಅಭಿನಯದಲ್ಲಿ ಎದ್ದು ಕಾಣುವುದು ಪ್ರಭಾವಳ್ಕರ್ ಮತ್ತು ರವಿ ಕಾಳೆ ಮಾತ್ರ.

Share this Story:

Follow Webdunia kannada