Select Your Language

Notifications

webdunia
webdunia
webdunia
webdunia

ಶ್ರೀಲಂಕಾದ ದಟ್ಟಡವಿಯ ಸಾಹಸಮಯ ಚಿತ್ರ ಅಗ್ಯಾತ್!

ಶ್ರೀಲಂಕಾದ ದಟ್ಟಡವಿಯ ಸಾಹಸಮಯ ಚಿತ್ರ ಅಗ್ಯಾತ್!
IFM
ರಾಮ್‌ಗೋಪಾಲ್ ವರ್ಮಾ ಕೊನೆಗೂ ಪ್ರೇಕ್ಷಕರನ್ನು ಶ್ರೀಲಂಕಾದ ದಟ್ಟಡವಿಗೆ ಕೊಂಡೊಯ್ಯುವಲ್ಲಿ ಸಫಲರಾಗಿದ್ದಾರೆ. ಆದರೆ ಇದು ಖಂಡಿತಾ ಫೂಂಕ್‌ನಂತೆ ಅತೀಂದ್ರೀಯ ಶಕ್ತಿಯಲ್ಲ. ಅಥವಾ ಭೂತ್ ಚಿತ್ರದಂತೆ ಹಾರರ್ ಕೂಡಾ ಅಲ್ಲ. ಬದಲಾಗಿ ಇದೊಂದು ಸಾಹಸಗಾಥೆ.

ಯಾವುದೇ ಚಿತ್ರದ ಯಶಸ್ಸಿನ ಪ್ರಮುಖ ಪಾತ್ರವಿರುವುದು ಚಿತ್ರದ ಆರಂಭದಲ್ಲಿ ಅದು ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ಹಿಡಿದಿಡುತ್ತದೆ ಎಂಬಲ್ಲಿ. ಅಗ್ಯಾತ್ ಚಿತ್ರ ಇದರಲ್ಲಿ ಯಶಸ್ವಿಯಾಗಿ ಪಾಸಾಗುತ್ತದೆ. ಆರಂಭದಿಂದ ಚಿತ್ರದ ಎರಡನೇ ಗಂಟೆಯತ್ತ ಎಂಥ ಕುತೂಹಲ ಇರುತ್ತದೆಂದರೆ ಪ್ರೇಕ್ಷಕರು ಥಿಯೇಟರಿನ ಸೀಟಿನ ತುದಿಯಲ್ಲಿ ಕೂರುವಷ್ಟು. ಅಗ್ಯಾತ್‌ನಂತಹ ಸಾಹಸಮಯ ಚಿತ್ರ ಈವರೆಗೆ ಹಿಂದಿ ತೆರೆಯ ಮೇಲೆ ಬಂದಿಲ್ಲ ಎಂದು ಧಾರಾಳವಾಗಿ ಹೇಳಬಹುದು.

ಅಗ್ಯಾತ್ ಇಷ್ಟವಾಗುವುದು ಕೆಲವು ಕಾರಣಗಳಿಗಾಗಿ. ಒಂದು ಅಗ್ಯಾತ್ ತುಂಬ ಹರಡಿರುವ ದಟ್ಟಡವಿ ನಿಮ್ಮ ಮನಸ್ಸನ್ನು ಕದಿಯೋದರಲ್ಲಿ ಸಂಶಯವೇ ಇಲ್ಲ. ಚಿತ್ರದಲ್ಲಿರುವ ಧ್ವನಿ- ಚಿತ್ರಣ ಹಾಗೂ ಬ್ಯಾಕ್‌ಗ್ರೌಂಡ್ ಸ್ಕೋರ್ ಯಾವುದೇ ಅಂತಾರಾಷ್ಟ್ರೀಯ ಚಿತ್ರಗಳಿಗೂ ಕಮ್ಮಿಯಿಲ್ಲ. ಇನ್ನೊಂದು ಕ್ಯಾಮರಾ ವರ್ಕ್. ಆದರೆ ಚಿತ್ರ ಆಕರ್ಷಿಸಿದಷ್ಟೇ ಸುಲಭವಾಗಿ ಅಂತ್ಯದಲ್ಲಿ ವಾದವನ್ನೇ ಹುಟ್ಟುಹಾಕುತ್ತದೆ. ಅಂತ್ಯದ್ಲಲಿ ಯಾವುದೇ ವಾದಗಳಿಗೆ ಬಲಿಯಾಗದೆ ಇಂತಹ ಚಿತ್ರವನ್ನು ಕೊಡಲು ಯಶಸ್ವಿಯಾಗಿಲ್ಲ ವರ್ಮಾ. ಚಿತ್ರದ ಅಂತ್ಯದಲ್ಲಿ ಪ್ರೇಕ್ಷಕನಿಗೆ ಏಳುವ ಸಂಶಯಗಳಿಗೆ ಉತ್ತರ ದಕ್ಕುವುದಿಲ್ಲ. ಆದರೂ ಚಿತ್ರ ಮುಗಿಸಿ ಹೊರಬಂದಾಗ ನಿಮ್ಮ ಮುಖದಲ್ಲೊಂದು ನಗೆ ಮೂಡುತ್ತದೆ. ಒಂದು ಜಗ್ತತಿಗೇ ಪ್ರಯಾಣ ಬೆಳೆಸಿದ ಅನುಭವ ದಕ್ಕುತ್ತದೆ.

webdunia
IFM
ಒಂದು ಚಿತ್ರತಂಡ ಶ್ರೀಲಂಕಾದ ದಟ್ಟಡವಿಯಲ್ಲಿ ಶೂಟಿಂಗ್‌ಗೆಂದು ಹೋಗುತ್ತದೆ. ಚಿತ್ರತಂಡದಲ್ಲಿ ನಾಯಕ ನಟ ಶರ್ಮಾನ್ (ಗೌತಮ್ ರೋಡ್), ನಾಯಕಿ ಆಶಾ (ನಿಶಾ ಕೊಠಾರಿ) ಸಹ ನಿರ್ದೇಶಕ (ನಿತಿನ್ ರೆಡ್ಡಿ) ಸಾಹಸ ನಿರ್ದೇಶಕ (ರವಿ ಕಾಳೆ), ಸಿನೆಮ್ಯಾಟೋಗ್ರಾಫರ್, ನಿರ್ಮಾಪಕ ಸೇರಿದಂತೆ ಎಲ್ಲರೂ ಇರುತ್ತಾರೆ. ಆದರೆ ಚಿತ್ರತಂಡದ ಕ್ಯಾಮರಾ ಕೈಕೊಟ್ಟಾಗ ಹೊಸ ಕ್ಯಾಮರಾ ತರಲು ಇನ್ನೂ ಎರಡು ದಿನ ಹಿಡಿಯುತ್ತದೆ. ಆ ಎರಡು ದಿನಗಳಲ್ಲಿ ಚಿತ್ರತಂಡಕ್ಕೆ ಶೂಟಿಂಗ್ ಇರುವುದಿಲ್ಲ.

ಈ ಎರಡು ದಿನಗಳಲ್ಲಿ ಚಿತ್ರತಂಡ ಅರಣ್ಯದೊಳಗೆ ಕ್ಯಾಂಪ್ ಮಾಡಿ ಚಾರಣ ಮಾಡಲು ನಿರ್ಧರಿಸುತ್ತದೆ. ಒಂದು ರಾತ್ರಿ ಅರಣ್ಯದೊಳಗೆ ಕೆರೆಯ ಬಳಿ ಟೆಂಟ್ ಕಟ್ಟಿ ತಂಗುವ ಈ ಚಿತ್ರತಂಡ್ಕಡಕ್ಕೆ ಮಾರ್ಗದರ್ಶಕ ಸೇತು. ಸೇತು ಆ ರಾತ್ರಿ ಅಲ್ಲೊಂದು ವಿಚಿತ್ರವಾದ ಶಬ್ದ ಕೇಳುತ್ತಾನೆ. ಆ ಶಬ್ದದ ಜಾಡು ಹಿಡಿದು ಹೋದ ಸೇತು ಮರಳಿ ಬರುವುದಿಲ್ಲ. ಸೇತುವನ್ನು ಹುಡುಕಿಕೊಂಡು ಹೊರಟ ಚಿತ್ರತಂಡಕ್ಕೆ ಸಿಗುವುದು ಸೇತುವಿನ ಹೆಣ. ಕೊಲೆಯಾದ ಹೆಣ. ತಂಡದ ಒಬ್ಬನೇ ಮಾರ್ಗದರ್ಶಕ ಸೇತು ಸತ್ತು ಹೋದಾಗ ಚಿತ್ರತಂಡ ಕಾಡಿನಿಂದ ಹೊರಬರಲು ದಾರಿ ಗೊತ್ತಾಗದೆ ಚಡಪಡಿಸುತ್ತದೆ.

webdunia
IFM
ಚಿತ್ರದ ಆರಂಭದ 25 ನಿಮಿಷ ಈವರೆಗೆ ರಾಮ್‌ಗೋಪಾಲ್ ವರ್ಮಾರ ಇತರ ಚಿತ್ರಗಳಿಗಿಂತ ಭಿನ್ನವಾಗಿ ಗೋಚರಿಸುತ್ತದೆ. ಚಿತ್ರದ ನಿಜವಾದ ಕಥೆ ಆರಂಭವಾಗುವುದು ಚಿತ್ರತಂಡ ಸೇತುವಿನ ಸಾವಿನ ನಂತರ ಅರಣ್ಯದಲ್ಲಿ ದಾರಿ ತೋಚದೆ ತಿರುಗಾಡಲು ಶುರು ಮಾಡಿದಾಗ. ಇಂತಹ ಸಂದರ್ಭದಲ್ಲಿ ಚಿತ್ರದಲ್ಲಿ ರಾಮ್‌ಗೋಪಾಲ್ ವರ್ಮಾರ ಇತರ ಚಿತ್ರಗಳಂತೆ ವರ್ಮಾ ಛಾಪು ಕೆಲವೆಡೆ ಕಾಣುತ್ತದೆ. ಇಂಟರ್ವಲ್‌ಗೂ ಮೊದಲು ಚಿತ್ರದಲ್ಲಿ ಎರಡು ಹೆಣ ಬಿದ್ದಿರುತ್ತದೆ. ಇಂಟರ್ವಲ್ ನಂತರ ಚಿತ್ರ ಸಾಹಸಮಯ ರೂಪ ಪಡೆದುಕೊಳ್ಳುತ್ತದೆ. ಚಿತ್ರ ಕಥೆಯನ್ನು ಆಧರಿಸಿದರೂ ಸಾಹಸ ಚಿತ್ರವನ್ನು ಉತ್ತಮ ಗತಿಯತ್ತ ಕೊಂಡೊಯ್ಯುತ್ತದೆ. ಚಿತ್ರದಲ್ಲಿ ಕೊಲೆಗಳಿದ್ದರೂ, ಎಲ್ಲ ಕೊಲೆಗಳೂ ವಿಚಿತ್ರ ರೀತಿಯಲ್ಲಿ ಆಗಿರುತ್ತದೆ. ಅ್ಲಲಿ ರಕ್ತದ ಓಕುಳಿಯಿರುವುದಿಲ್ಲ. ಇದು ವೀಕ್ಷಕನಿಗೆ ಊಹಿಸುವುದಕ್ಕೂ ಕಷ್ಟ. ರಾಮ್‌ಗೋಪಾಲ್ ವರ್ಮಾ ಅಗ್ಯಾತ್ ಮೂಲಕ ಮತ್ತೆ ಪ್ರಯೋಗಕ್ಕಿಳಿದದ್ದಂತೂ ಚಿತ್ರದಲ್ಲಿ ಢಾಳಾಗಿ ಕಾಣುತ್ತದೆ. ಅರಣ್ಯದಲ್ಲಿ ಶೂಟಿಂಗ್ ನಡೆಸುವುದೆಂದರೆ ಸುಲಭದ ಮಾತಲ್ಲ. ಅದೇ ನಿಮಗೆ ಚಿತ್ರದಲ್ಲಿ ಕಾಣುವ ಪ್ಲಸ್ ಪಾಯಿಂಟ್. ಇದಕ್ಕೆ ಹೊರತಾಗಿ ಚಿತ್ರದ ಶ್ರೇಯಸ್ಸು ಧ್ವನಿ ವಿನ್ಯಾಸ ಮಾಡಿದ ದ್ವಾರಕ್ ವಾರಿಯರ್, ಅಮರ್ ಮೊಹಿಲ್ ಅವರ ಬ್ಯಾಕ್‌ಗ್ರೌಂಡ್ ಸ್ಕೋರ್ ಹಾಗೂ ಸುರ್ಜೋದೀಪ್ ಘೋಷ್ ಅವರ ಸಿನೆಮ್ಯಾಟೋಗ್ರಫಿ. ಈ ಮೂರದ ಸಮ್ಮಿಲನ ಚಿತ್ರವನ್ನು ಆಕರ್ಷಕವನ್ನಾಗಿ ಮಾಡಿದೆ.

ನಟರ ಪೈಕಿ ತೆಲುಗು ನಟ ನಿತಿನ್ ರೆಡ್ಡಿ ತನ್ನ ಮೊದಲ ಹಿಂದಿ ಚಿತ್ರದಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ನಿತಿನ್ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾರೆ ಎನ್ನುವುದಕ್ಕೆ ಅಗ್ಯಾತ್ ನಿದರ್ಶನ. ನಿಶಾ ಕೊಠಾರಿ ತನ್ನ ಈ ಮೊದಲ ಚಿತ್ರಗಳಿಗಿಂತ ಅಗ್ಯಾತ್‌ನಲ್ಲಿ ಎಷ್ಟೋ ಸುಧಾರಿಸಿದ್ದಾರೆ. ಚಿತ್ರದುದ್ದಕ್ಕೂ ಉತ್ತಮ ಅಭಿನಯವನ್ನೇ ನೀಡಿದ್ದಾರೆ. ಗೌತಮ್ ರೋಡ್ ಹಾಟ್ ಸೂಪರ್‌ಸ್ಟಾರ್ ಆಗಿ ತಾಜಾ ಆಗಿಯೇ ಕಂಗೊಳಿಸಿದ್ದಾರೆ. ಒಟ್ಟಾರೆ ಅಗ್ಯಾತ್ ಕುತೂಹಲಕಾರಿ ಆರಂಭ, ಹಿಡಿದಿಡಬಲ್ಲ ಮಧ್ಯಂತರ ಇದ್ದರೂ, ಅಂತಿಮವಾಗಿ ಸೋಲುತ್ತದೆ. ಆದರೂ ಚಿತ್ರದಲ್ಲಿರುವ ಮೂರು ಪ್ಲಸ್ ಪಾಯಿಂಟ್‌ಗಳಿಗಾದರೂ ಚಿತ್ರ ನೋಡಬಹುದು.

Share this Story:

Follow Webdunia kannada