Select Your Language

Notifications

webdunia
webdunia
webdunia
webdunia

ವಿಭಿನ್ನ ನಿರೂಪಣಾ ಶೈಲಿಯ "ಜಬ್ ವಿ ಮೆಟ್"

ವಿಭಿನ್ನ ನಿರೂಪಣಾ ಶೈಲಿಯ
, ಸೋಮವಾರ, 29 ಅಕ್ಟೋಬರ್ 2007 (13:54 IST)
IFM
ಬಾಲಿವುಡ್ ಚಿತ್ರ ಜಗತ್ತು ತನ್ನ ಅಸ್ತಿತ್ವ ಸ್ಥಾಪಿಸಿದ ದಿನದಿಂದ ಇಲ್ಲಿಯವರೆಗೆ ಸಾವಿರಾರು ಕ್ಷಮಿಸಿ ಲಕ್ಷದ ಲೆಕ್ಕದಲ್ಲಿ ಪ್ರೇಮಕಥಾ ಚಿತ್ರಗಳು ಬಂದಿವೆ ಬರುತ್ತಿವೆ ಮತ್ತು ಮುಂದೆಯೂ ಕೂಡ ಬರುವುದು ಗ್ಯಾರಂಟಿ. ಎಲ್ಲ ಕಥೆಗಳು ಒಂದೇ ತೆರನಾಗಿದ್ದು ಅದೇ ಅಂತ್ಯವನ್ನು ಕಾಣುತ್ತಿದ್ದರೆ ಪ್ರೇಕ್ಷಕನಿಗೆ ಬೋರು ಹೋಡೆಯುವುದು ಸಹಜ

ಇಮ್ತಿಯಾಜ್ ಅಲಿ ನಿರ್ಧೇಶನದ "ಜಬ್ ವಿ ಮೆಟ್" ಪ್ರೇಮಕಥೆಯನ್ನು ವಿಭಿನ್ನವಾಗಿ ಪ್ರೇಕ್ಷಕರ ಎದುರು ತೆರೆದಿಡುತ್ತದೆ ಅದೇ ಕಾರಣದಿಂದ ಪ್ರೇಕ್ಷಕನಿಗೆ ಚಿತ್ರ ಇಷ್ಟವಾಗುವುದು ಗ್ಯಾರಂಟಿ.
"ಜಬ್ ವಿ ಮೆಟ್" ಕುರಿತು ಒಟ್ಟಾರೆ ಹೇಳಬೇಕೆಂದಲ್ಲಿ ಪ್ರೇಮ ಕಥೆ ಇರುವ ತಾಜಾತನದ ಚಿತ್ರ ಎಂದು ಹೇಳಬಹುದು. ಇಮ್ತಿಯಾಜ್ ಅವರ ಕಥಾ ನಿರೂಪಣಾ ಶೈಲಿ ಉತ್ತಮವಾಗಿದೆ.

ಆದಿತ್ಯ ( ಶಹೀದ್ ಕಪೂರ್) ಉದ್ಯಮಿ. ತನ್ನ ಪ್ರೇಯಸಿ ಮದುವೆ ಬೇರೆಯವನೊಂದಿಗೆ ಆದ ನಂತರ ಜೀವನದಲ್ಲಿ ಜಿಗುಪ್ಸೆಗೊಂಡು ಗೊತ್ತು ಗುರಿ ಇಲ್ಲದೆ ಯಾವುದೋ ರೈಲು ಹತ್ತಿ ಹೋರಟು ಬಿಡುತ್ತಾನೆ. ಅದೇ ರೈಲಿನಲ್ಲಿ ಗೀತ್ (ಕರೀನಾ ಕಪೂರ್) ಪ್ರಯಾಣ ತನ್ನ ಸ್ವಂತ ಊರು ಭಟಿಂಡಾದತ್ತ ಪ್ರಯಾಣ ಮಾಡುತ್ತಿರುತ್ತಾಳೆ. ಭಟಿಂಡಾಕ್ಕೆ ಬಂದ ನಂತರ ತನ್ನ ಪ್ರೀಯಕರ(ತರುಣ್ ಅರೋರಾ)ನೊಂದಿಗೆ ಪಲಾಯಣ ಮಾಡುವುದು ಅವಳ ಯೋಜನೆ.
webdunia
IFM

ಆದಿತ್ಯ ರೈಲಿನಲ್ಲಿ ತನ್ನೊಂದಿಗೆ ಇರುವುದನ್ನು ಸಹಿಸಲಾಗದ ಗೀತ್ ಅವನು ಕೆಳಗಿಳಿದು ಹೋಗುವಂತೆ ತೊಂದರೆ ನೀಡುತ್ತಾಳೆ. ದುರದೃಷ್ಟವಶಾತ್ ಇಬ್ಬರೂ ರೈಲಿನಿಂದ ಕೆಳಗಿಳಿದಿರುತ್ತಾರೆ ಇಬ್ಬರ ಬಳಿ ಹಣವೂ ಇಲ್ಲ ಲಗೆಜು ಇಲ್ಲ. ಇಲ್ಲಿಂದ ಭಟಿಂಡಾದತ್ತ ಅವರಿಬ್ಬರ ಪಯಣ ಪ್ರಾರಂಭ ಅದೂ ಲಾರಿಗಳಲ್ಲಿ ಒಂಟೆಗಳ ಮೇಲೆ ಹೇಗೆ ಬಂತೊ ಹಾಗೆ ಎನು ಸಿಕ್ಕಿತೊ ಅದರ ಮೇಲೆ.

ಭಟಿಂಡಾಗೆ ಬಂದಿಳಿದವರನ್ನು ಪ್ರೇಮಿಗಳು ಎಂದು ಕರೀನಾ ಕುಟುಂಬ ತಪ್ಪಾಗಿ ಗ್ರಹಿಸುತ್ತದೆ. ಇದಕ್ಕೂ ಮುನ್ನ ಮನಾಲಿಯಲ್ಲಿ ಕರೀನಾಳ ಪ್ರೀಯಕರ ಓಡಿಹೊಗುತ್ತಾನೆ. ಅನಿವಾರ್ಯವಾಗಿ ಗೀತ್ (ಕರೀನಾ) ಆದಿತ್ಯನೊಂದಿಗೆ ಮನಿಲಾದಲ್ಲಿ ಕೇಲವು ದಿನಗಳ ವಾಸಿಸುತ್ತಾಳೆ. ಆದಿತ್ಯ ಪುನಃ ಮುಂಬೈಗೆ ಮರಳಿ ತನ್ನ ವ್ಯವಹಾರದತ್ತ ಗಮನ ನೀಡಲು ಪ್ರಾರಂಭಿಸುತ್ತಾನೆ.

ಆದಿತ್ಯನೊಂದಿಗೆ ಗೀತ್ ವಾಸಿಸುತ್ತಿದ್ದಾಳೆ ಎಂದು ತಿಳಿದಿರುವ ಗೀತ್ ಕುಟುಂಬ, ಅವನೊಂದಿಗೆ ವಾದಕ್ಕೆ ಇಳಿಯುತ್ತದೆ. ಗೀತ್ ಪುನಃ ಭಟಿಂಡಾಗೆ ಮರಳದೇ ಇರುವ ಸಂಗತಿ ಆದಿತ್ಯನಿಗೆ ಆಘಾತ ತರುತ್ತದೆ. ಅವಳ ಹುಡುಕಾಟದಲ್ಲಿ ನಿರತನಾದ ಆದಿತ್ಯ, ಗೀತ್‌ಳನ್ನು ಕೊನೆಗೂ ಹಿಮಾಲಯದ ತಪ್ಪಲಿನಲ್ಲಿ ಭೇಟಿಯಾಗುತ್ತಾನೆ. ಹಾಗೆ ಇದ್ದ ಒಂದು ರಾತ್ರಿಯಲ್ಲಿ ಅವರಿಬ್ಬರು ಲಕ್ಷ್ಮಣ ರೇಖೆಯನ್ನು ಮೀರಿ ಬಿಡುತ್ತಾರೆ.

ಕಥೆಯ ಮೂಲ ಅಂಶ ಎಂದರೆ ವಿರುದ್ದ ಲಿಂಗಗಳ ಆಕರ್ಷಣೆ, ನಿರೂಪಣಾ ಶೈಲಿ ಅತ್ಯುತ್ತಮವಾಗಿದೆ. ಕಥೆ ಕೆಲ ಹಳೆ ಚಿತ್ರಗಳ ಜಾಡಿನಲ್ಲಿ ಕೆಲಕಾಲ ಸಾಗುವ ಪ್ರಯತ್ನ ಮಾಡಿದರೂ ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ.

Share this Story:

Follow Webdunia kannada