Select Your Language

Notifications

webdunia
webdunia
webdunia
webdunia

ಬಾಂಡ್‌ 'ಕ್ಯಾಸಿನೋ ರೋಯಲ್‌' ಚಿತ್ರದಲ್ಲಿ ಸಿಹಿಕಹಿ ಮಿಶ್ರಣ

ಬಾಂಡ್‌

ಇಳಯರಾಜ

ನವಂಬರ್‌ 17ರಂದು ವೀಕ್ಷಕರ ಮನ ತಟ್ಟಿದ ಜೇಮ್ಸ್‌ ಬಾಂಡ್‌ ಚಿತ್ರ ಸಾಹಸಕ್ಕಾಗಿ ಇದೀಗ ಗಿನೆಸ್‌ ದಾಖಲೆಗೆ ಸೇರುತ್ತಿದೆ. ಎರಡು ತಾಸುಕಾಲ ಪ್ರೇಕ್ಷಕರ ಮನದಲ್ಲಿವಿವಿಧ ಭಾವನೆಗಳ ಸರಮಾಲೆಯನ್ನೇ ಸೃಷ್ಟಿಸುತ್ತದೆ. ಸಾಹಸ ಪ್ರದರ್ಷನಗಳಂತೂ ತುದಿ ಬೆರಳಲ್ಲಿ ನಿಲ್ಲಿಸುತ್ತವೆ.

ಪ್ರಸ್ತುತ ಬಾಂಡ್‌ ಚಿತ್ರದಲ್ಲಿ ವಾಹನಗಳ ಸಾಹಸ ಪ್ರದರ್ಶನದಲ್ಲಿ ಹೋರಾಟದ ವೇಳೆ ಕಲಾವಿದ ಆಸ್ಟನ್‌ ಮಾರ್ಟಿನ್‌ ಅವರ ಕಾರು ಘರ್ಷಣೆಗಾಗಿ ಏಳು ಸುತ್ತು ಮಗುಚಿರುವುದು ದಾಖಲೆ ಪುಸ್ತಕಸೇರಿದೆ. ಈ ಮೊದಲಿನ ದಾಖಲೆ ಕಳೆದ ವರ್ಷ ಆರು ಬಾರಿ ಕಾರನ್ನು ಉರುಳಿಸಿ ದಾಖಲೆ ನಿರ್ಮಿಸಿದ ಖ್ಯಾತಿ ಗ್ರೇ ಪವೆಲ್‌ ಅವರಿಗೆ ಸೇರುತ್ತದೆ.

ಬಾಂಡ್‌ ಚಿತ್ರಗಳೆಲ್ಲಾ ಪತ್ತೆದಾರಿ ಪ್ರಾಮುಖ್ಯತೆಯಲ್ಲಿರುವುದರಿಂದ ಸಾಹಸ ದೃಶ್ಯಗಳು ಸಾಮಾನ್ಯ. ಆದರೆ ಗಿನಿಸ್‌ ದಾಖಲೆಯಲ್ಲಿ ಸೇರಿರುವುದರಿಂದ ಸಾಹಸಪ್ರಿಯರಂತೂ ತಮ್ಮ ಸನಿಹದ ಥಿಯೇಟರ್‌ಗಳಿಗೆ ನುಗ್ಗುವುದಂತೂ ಖಚಿತ.

ಕ್ಯಾಸಿನೋ ರಾಯಲ್‌, ಬಾಂಡ್‌ರ 21ನೇ ಚಿತ್ರ. ಈಗ ತುಂಬಿದ ಸಂಭಾಂಗಣದಲ್ಲಿ ವಿಶ್ವಾದ್ಯಂತದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಕ್ಯಾಸಿನೋ ರೋಯಲ್‌ ಜೇಮ್ಸ್‌ಬಾಂಡ್‌ಗೆ ಆಯುಧ ಪರವಾನಗಿ(ಹತ್ಯೆಗೆ ಲೈಸನ್ಸ್‌)ಸಿಗುವ ಮೊದಲಿನ ಹಂತವನ್ನು ಚಿತ್ರಿಸಿದೆ.ಆದರೆ ಬಾಂಡ್‌ ಅಪಾಯಕಾರಿ ಮನುಷ್ಯ. ವೃತ್ತಿಪರ ಎರಡು ಹತ್ಯೆಗಳನ್ನು ನಡೆಸಿ'00' ಪದವಿ ಪಡೆಯುತ್ತಾನೆ. ಆತನ 007 ಕಾರ್ಯಾಚರಣೆಯು ಆತನನ್ನು ಮಡಗಾಸ್ಕರ್‌ ಪ್ರದೇಶದತ್ತ ಒಯ್ಯುತ್ತದೆ. ಅಲ್ಲಿ ಆತ ಭಯೋತ್ಪಾದಕ 'ಮೊಲ್ಲಕ'(ಸೆಬಾಸ್ಟಿಯನ್‌ ಫೋಕನ್‌) ಇವರ ತಂಡವನ್ನು ಗುರುತಿಸಿ ಮಟ್ಟಹಾಕುವ ಹೊಣೆ ಹೊರುತ್ತಾನೆ. ಎಲ್ಲವೂ ನಿರ್ಧರಿಸಿದಂತೆ ನಡೆಯದಾಗ ಬಾಂಡ್‌ ಎಂ.16 ರೂಪದಲ್ಲಿ ಭಯೋತ್ಪಾದನಾ ಕೇಂದ್ರಗಳತ್ತ ಧಾಳಿಮಾಡುವ ಕಥಾನಕ ಇದರಲ್ಲಿದೆ.

ಕ್ಯಾಸಿನೋ ರಾಯಲ್‌ನಲ್ಲಿ ಬಾಂಡ್‌ ಸಾಹಸ ಪರಿಕಲ್ಪನೆ ಸ್ವಲ್ಪ ಕುಸಿದಿರುವುದರಿಂದ ಮೂಲ ಬಾಂಡ್‌ ಕಲ್ಪನೆಗಳಲ್ಲಿರುವವರಿಗೆ ರಸಾಭಾಸವಾಗಬಹುದು. ಬಾಂಡ್‌ ಪರಿಕಲ್ಪನೆಗಳಿಂದ ಸ್ವಲ್ಪ ಆಧುನೀಕರಣಗೊಳಿಸಿದ ಮಹಿಳಾ ಏಜೆಂಟ್‌ಗಳ ಚಿತ್ರಣ ಸ್ವಲ್ಪ ಬಿಸಿಯಾಗಿ ಬಳಸಲಾಗಿದೆ. ರಕ್ತಸಿಕ್ತತೆ, ಸ್ವಿಮ್‌ವಸ್ತ್ರ ವಿನ್ಯಾಸ, ನಗ್ನ ನಡವಳಿಕೆಗಳು ಸಿನಿಮಾ ಹಂತದಲ್ಲಿ ಹೊಸ ಸೇರ್ಪಡೆಯಂತೆ ಕಾಣಿಸುತ್ತಿವೆ. ಡಾನಿಯಲ್‌ಕ್ರಾಯಿಗ್‌ ಅವರ ಚಿತ್ರಣ ಹೊಸ ಬಾಂಡ್‌ ರೂಪದಲ್ಲಿ ತೃಪ್ತಿಕರ ಎನ್ನಬಹುದು.

ಬಾಂಡ್‌ ಏಜೆಯಟರೆಲ್ಲಾ ಹತ್ಯಾಪರವಾನಗಿ ಇರುವ ಪತ್ತೆದಾರರು, ಆಯುಧದಾರಿಗಳಾಗಿರುತ್ತಾರೆ. ಆದರೆ ಈ ಚಿತ್ರದಲ್ಲಿ ಹತ್ಯೆಗೆ ಪರವಾನಗಿ ಇಲ್ಲ ಎಂಬುದು ಪ್ರತ್ಯೇಕತೆ. ಓರ್ವ ಪತ್ತೆದಾರ ಏಜಂಟಿಗೆ ಈ ಹತ್ಯಾ ಪರವಾನಗಿ ಯಾಕೆ ಹೇಗೆ ಲಭಿಸುತ್ತದೆ ಅನ್ನುವುದೂ ಸ್ವಾರಸ್ಯಕರ. ಎರಡು ಹತ್ಯೆ ಮಾಡಿದರೆ ಆತನಿಗೆ ಪರವಾನಗಿ ಲಭಿಸುತ್ತದೆ! ಎರಡು ಹತ್ಯಾ ಚಿತ್ರಗಳನ್ನೂ ತೀರಾ ಸರಳವಾಗಿಸಿ ಬಾಂಡ್‌ಗೆ ಹತ್ಯೆ ಎನ್ನುವುದು ತುಂಬಾ ಸರಳ ಅನ್ನಿಸುವಂತೆ ಮಾಡಿದೆ.

Share this Story:

Follow Webdunia kannada