Select Your Language

Notifications

webdunia
webdunia
webdunia
webdunia

ಪರಿಚಿತವಲ್ಲದ ಅಪರಿಚಿತ ಕಥೆ "ಸ್ಟ್ರೇಂಜರ್"

ಪರಿಚಿತವಲ್ಲದ ಅಪರಿಚಿತ ಕಥೆ
IFM
ಬಾಲಿವುಡ್ ಜಗತ್ತಿನ ಏಕತಾನತೆಯನ್ನು ಮುರಿಯುವ ಉದ್ದೇಶದಿಂದ ಬರುವ ವಿಭಿನ್ನ ಕಥಾವಸ್ತು ಹೊಂದಿರುವ ಕೆಲ ಚಿತ್ರಗಳು ಆಗಾಗ ಚಿತ್ರಜಗತ್ತಿನಲ್ಲಿ ಬಂದು ಹೋಗಿದ್ದು ಇದೆ. ಅವಗಳಲ್ಲಿ ಕೆಲ ಚಿತ್ರಗಳು ಪ್ರೇಕ್ಷಕರನ್ನು ರಂಜಿಸಿದ್ದೂ ಇದೆ. ಆನಂದ್ ರೈ ನಿರ್ಧೇಶನದ ಸ್ಟ್ರೇಂಜರ್ ಕೂಡ ವಿಭಿನ್ನ ಕಥಾವಸ್ತುವಿನ ಚಿತ್ರದ ಸಾಲಿನಲ್ಲಿ ನಿಲ್ಲುತ್ತದೆ.

ಭಾರತೀಯ ಕಲಾವಿದರನ್ನು ಬಿಟ್ಟು ವಿದೇಶಿ ಚಲನಚಿತ್ರ ನಟರು ಸ್ಟ್ರೇಂಜರ್ ಚಿತ್ರದಲ್ಲಿ ಅಭಿನಯಿಸಿದ್ದರೆ ಚಿತ್ರ ಅಪರಿಚಿತವಾಗಿ ಉಳಿಯುವ ಸಾಧ್ಯತೆ ಇತ್ತು. ಈ ರೀತಿಯ ಅಪರಿಚಿತತೆಯನ್ನು ಕೆಲ ಹಿಂದಿ ಸಿನಿಮಾಗಳಲ್ಲಿ ನೋಡಿಯಾಗಿದೆ. ಆದರೆ ಚಿತ್ರದ ಕಥಾವಸ್ತು ಭಿನ್ನವಾಗಿದ್ದು. ಬಾಲಿವುಡ್ ಜಗತ್ತಿಗೆ ಹೊಸತು.

ಸ್ಟ್ರೆಂಜರ್ಸ್ ಆನ್ ಟ್ರೇನ್ ಚಿತ್ರದಂತೆ ಪ್ರಾರಂಭದಲ್ಲಿ ಭಾಸವಾದರೂ, ಚಿತ್ರ ಸಾಗಿದಂತೆ ತನ್ನದೇ ಸ್ವತಂತ್ರ ಟ್ರ್ಯಾಕ್ ಹಿಡಿಯುವುದನ್ನು ಮನಗಾಣಬಹುದು. ಆದರೆ ಚಿತ್ರದ ಒಂದೇ ಒಂದು ವಿಫಲತೆ ಅಥವಾ ಮೈನಸ್ ಪಾಯಿಂಟ್ ಎಂದರೆ ಒಂದು ವರ್ಗದ ಪ್ರೇಕ್ಷಕರಿಗೆ ಮಾತ್ರ ಇಷ್ಟವಾಗುತ್ತದೆ. ಅದೇ ಚಿತ್ರದ ಸೋಲಿಗೆ ಕಾರಣವಾಗಬಹುದು. ಸಮಭಾವ ದೃಷ್ಟಿ ಚಿತ್ರದಲ್ಲಿ ಕಾಣಸಿಗುವುದಿಲ್ಲ.

ವಿರುದ್ಧ ವ್ಯಕ್ತಿತ್ವದ ಇಬ್ಬರು ಅಪರಿಚಿತ ವ್ಯಕ್ತಿಗಳು ಒಂದೇ ಕಂಪಾರ್ಟ್‌ಮೆಂಟಿನಲ್ಲಿ ಪಯಣಿಸುತ್ತಿರುತ್ತಾರೆ. ವಿಚಿತ್ರ ಎಂದರೆ ಇಬ್ಬರೂ ಭಾರತೀಯ ಮೂಲದವರು. ಅಪರಿಚಿತ ಇಂಗ್ಲೆಂಡಿನಲ್ಲಿ ಪರಿಚಿತರಾಗುತ್ತಾರೆ. ಅವರಿಬ್ಬರೂ ಗುರಿ ತಲುಪುವವರೆಗೆ ಸಾಗುವ ಮಾತುಕತೆಗಳು ಮತ್ತು ಪ್ಲ್ಯಾಷ್ ಬ್ಲ್ಯಾಕ್‌ಗಳೇ ಚಿತ್ರವನ್ನು ಮುಂದೆ ಸಾಗುವಂತೆ ಮಾಡುತ್ತವೆ.

ರಾಯ್ ( ಕಾಯ್ ಕಾಯ್ ಮೆನನ್) ದೊಡ್ಡ ಹುದ್ದೆಯಲ್ಲಿ ಇರುವವ ಮತ್ತು ರಾಹುಲ್ (ಜಿಮ್ಮಿ ಶೇರಗಿಲ್) ಬರವಣಿಗೆಯಲ್ಲಿ ಬದುಕು ಕಾಣಲು ಹೋಗಿ ವಿಫಲನಾದ ವ್ಯಕ್ತಿ. ಪ್ರಯಾಣದ ಸಮವನ್ನು ಮನರಂಜನೆಯಲ್ಲಿ ಕಳೆಯುವುದಕ್ಕೆ ಒಬ್ಬರಿಗೊಬ್ಬರು ಮಾಡಿಕೊಳ್ಳುವ ತಮಾಷೆ ಮತ್ತು ಮಾತುಗಳನ್ನು ಸ್ಟ್ರೇಂಜರ್ಸ್ ಚಿತ್ರದುದ್ದಕ್ಕೂ ಕಾಣಬಹುದು. ಇವರಿಬ್ಬರ ಕಾರಣ ನಾಲ್ವರ ಜೀವನ ಬದಲಾವಣೆಯ ಹಂತ ತಲುಪಿದೆ.
webdunia
IFM

ನಿರ್ದೇಶಕ ಆನಂದ್ ರೈ ಕಥೆಯನ್ನು ಆಕರ್ಷಕವಾದ ಶೈಲಿಯಲ್ಲಿ ನೋಡುಗರ ಎದುರು ಬಿಡಿಸಿ ಇಡುವ ಪ್ರಯತ್ನ ಮಾಡುತ್ತಾರೆ. ಕಥಾ ಪ್ರಸ್ತುತಿ ಅದ್ಬುತವಾಗಿದ್ದು, ಅದಕ್ಕೆ ತಕ್ಕಂತೆ ಕಥೆ ಹೆಣೆಯುವಲ್ಲಿ ತಂಡ ಸೋತಿದೆ ಎನ್ನುವುದಕ್ಕಿಂತ ಚಿತ್ರ ಕಥೆ ಬರೆದವರು ವಿಫಲರಾಗಿದ್ದಾರೆ ಎಂದು ಹೇಳಬಹುದು. ಕೆಲ ಸನ್ನಿವೇಶಗಳು ಪಾತ್ರಗಳ ಜೀವನ ಒಂದಕ್ಕೊಂದು ಸಂಬಂಧ ಇಲ್ಲದೇ ಸೂತ್ರ ಹರಿದ ಗಾಳಿ ಪಟದಂತೆ ಒಲಾಡುತ್ತದೆ. ಅಂತ್ಯವೂ ಕೂಡ ಸರಿಯಾಗಿಲ್ಲ ಜಿಮ್ಮಿ ಶೇರಗಿಲ್ ಎಲ್ಲವನ್ನೂ ಸುಲಭವಾಗಿ ಅಂತ್ಯಗೊಳಿಸುವ ತರಾತುರಿಯಲ್ಲಿರುತ್ತಾನೆ ಯಾಕೆ ಅನ್ನುವುದು ಗೊತ್ತಿಲ್ಲ.

ನಿರ್ಧೇಶಕ ರಾಯ್ ಅವರಿಗೆ ಸಿನಿಮಾಟೊಗ್ರಾಫಿ ಮತ್ತು ಹಿನ್ನಲೆ ಸಂಗೀತ ಅಪಾರವಾಗಿ ನೆರವಿಗೆ ಬಂದಿದೆ. ಎರಡೂ ವಿಭಾಗಕ್ಕೂ ಹ್ಯಾಟ್ಸಾಪ್ ಹೇಳಬೇಕು ಅದ್ಬುತವಾಗಿದೆ.

ಜಿಮ್ಮಿ ಶೇರಗಿಲ್ ತನ್ನ ಪಾತ್ರಕ್ಕೆ ತುಂಬು ಜೀವ ತುಂಬಿದ್ದಾರೆ. ಕಾಯ್ ಕಾಯ್ ಪುನಃ ತಮ್ಮ ಶ್ರೇಷ್ಟತೆ ಮೇರೆದಿದ್ದಾರೆ. ನಂದನಾ ಸೇನ್ ನಟನೆಯಿಂದ ಆಕರ್ಷಿಸುತ್ತಾರೆ.

ಉಪಸಂಹಾರದಲ್ಲಿ ಸ್ಟ್ರೇಂಜರ್ಸ್ ಉತ್ತಮವಾಗಿ ಮೂಡಿ ಬಂದಿದೆ. ಥ್ರಿಲ್ಲಿಂಗ್ ಜಾಣತನ ಎಲ್ಲ ಕಂಡುಬರುತ್ತದೆ. ಕೆಲವೇ ವರ್ಗದ ಪ್ರೇಕ್ಷಕರ ಮೆಚ್ಚಿನ ಚಿತ್ರವಾಗುತ್ತದೆ ಅಷ್ಟೇ

Share this Story:

Follow Webdunia kannada