Select Your Language

Notifications

webdunia
webdunia
webdunia
webdunia

ತ್ರಿಕೋನ ಪ್ರೇಮಕಥೆಯ ಆಕಾಶಗಂಗೆ

ಚಿತ್ರ ವಿಮರ್ಷೆ

ತ್ರಿಕೋನ ಪ್ರೇಮಕಥೆಯ ಆಕಾಶಗಂಗೆ
, ಶನಿವಾರ, 14 ಜೂನ್ 2008 (12:03 IST)
MOKSHA
ಎರಡು ವರ್ಷಗಳ ಹಿಂದೆ ಆರಂಭವಾಗಿ ಈ ವಾರ ಬಿಡುಗಡೆಯಾದ ಚಿತ್ರ ಆಕಾಶ ಗಂಗೆ. ಅಮೃತವರ್ಷಿಣಿಯ ನಂತರ ಮತ್ತೊಂದು ಅದೇ ರೀತಿಯ ಚಿತ್ರ ನೀಡಲು ನಿರ್ದೇಶಕ ದಿನೇಶ್ ಬಾಬು ಪ್ರಯತ್ನಿಸಿದ್ದಾರೆ. ಆದರೆ ಅಷ್ಟು ಪರಿಣಾಮಕಾರಿಯಾಗಿ ಮಾಡುವಲ್ಲಿ ವಿಫಲರಾಗಿದ್ದಾರೆ. ಒಂದು ಪ್ರೇಮಕಥೆಯನ್ನು ಆಯ್ಕೆ ಮಾಡಿಕೊಂಡ ಬಾಬು ಅದನ್ನು ಬೆಳೆಸುವ ಪ್ರಯತ್ನ ಮಾಡಿದ್ದಾರೆ.

ನಾಯಕ ಮಿಥುನ್ ತೇಜಸ್ವಿನಿಯನ್ನು ನಾಯಕಿ ಛಾಯಾಸಿಂಗ್ ಪ್ರೀತಿಸಲಾರಂಭಿಸುತ್ತಾಳೆ. ಆದರೆ ಮಿಥುನ್ ಸಂಪ್ರದಾಯಸ್ಥ ಹುಡುಗ. ಮನೆಯ ಒಡತಿ ಜಯಂತಿಯ ಆಜ್ಞೆ ಇಲ್ಲದೇ ಯಾವ ನಿರ್ಧಾರ ಕೈಗೊಳ್ಳುವಾಗಿಲ್ಲ. ಆದ್ದರಿಂದ ಛಾಯಾಸಿಂಗ್ ಪ್ರೀತಿಯನ್ನು ನಿರಾಕರಿಸುತ್ತಾನೆ.

ಆದರೆ ಛಾಯಾಸಿಂಗ್ ನಾಯಕನ ಮನೆಗೆ ಸಂಗೀತ ಹೇಳಿಕೊಡಲು ಬಂದು ಆತನ ಮನಗೆಲ್ಲಲು ಪ್ರಯತ್ನಿಸುತ್ತಾಳೆ. ಆದರೆ ಅಲ್ಲಿ ಮೀಥುನ್‌ನನ್ನೇ ಮದುವೆಯಾಗಬೇಕೆಂಬ ಹಠದ ಹುಡುಗಿ ಸ್ಮಿತಾ ಇರುತ್ತಾಳೆ. ಕೊನೆಗೆ ಇವರಿಬ್ಬರಿಗಾಗಿ ಸ್ಮಿತಾ ತ್ಯಾಗಮಯಿ ಆಗುತ್ತಾಳೆ.

ಮಿಥುನ್ ಅಭಿನಯ ಇನ್ನೂ ಪಕ್ವವಾಗಬೇಕಾಗಿದೆ. ಸೆವೆನ್ ಓ ಕ್ಲಾಕ್ ನಂತರ ಇವರ ಅಭಿನಯದಲ್ಲಿ ಹೇಳಿಕೊಳ್ಳುವಂತಹ ಸುಧಾರಣೆಯಾಗಿಲ್ಲ. ನಿರ್ದೇಶಕರು ಕಥೆಗೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಕೋಮಲ್, ದೊಡ್ಡಣ್ಣ ಅವರ ಕಾಮಿಡಿ ಚೆನ್ನಾಗಿದೆ. ಸ್ಮಿತಾ ತನ್ನ ಪ್ರತಿಭೆಯನ್ನು ತೋರಿಸಿದ್ದಾರೆ. ಕೆ. ಕಲ್ಯಾಣ್ ಸಾಹಿತ್ಯ ಇಂಪಾಗಿದೆ. ಛಾಯಾ ಅಭಿನಯ ಮನಸ್ಸಿನಲ್ಲಿ ನಿಲ್ಲುತ್ತದೆ.

Share this Story:

Follow Webdunia kannada