Select Your Language

Notifications

webdunia
webdunia
webdunia
webdunia

"50 ಲಾಖ್" ಬ್ಯಾಡ್ ಐಡಿಯಾ

ಒಳ್ಳೆಯ ಐಡಿಯಾ ಇದ್ದು ಅದನ್ನು ಸರಿಯಾಗಿ ಜಾರಿ ಮಾಡಬೇಕು ಎಂದರೂ ತಲೆ ಬೇಕು, ಮೇಲಾಗಿ ತಲೆಯಲ್ಲಿ ಬುದ್ದಿ ಇರಬೇಕು. ಅಂದರೆ ಮಾತ್ರ ಕೆಲಸ ಸುಲಭವಾಗುವ ಸಾಧ್ಯತೆ ಇರುತ್ತದೆ ಮತ್ತು ಬೇರೆಯವರಿಗೆ ಇಷ್ಟವಾಗಬಹುದು, "50 ಲಾಖ್" ಇದೇ ಜಾಡಿನಲ್ಲಿ ಸಾಗಿದೆ. ಅತ್ತ ಥ್ರಿಲ್ಲರ್ ಅಲ್ಲ ಇತ್ತ ಕಾಮಿಡಿನೂ ಅಲ್ಲ ಎನ್ನುವಂತಹ ಚಿತ್ರ

ಚಿತ್ರಕ್ಕೆ ಆಯ್ದುಕೊಂಡ ಕಥೆ ತುಂಬ ಚೆನ್ನಾಗಿದೆ ಆದರೆ "50 ಲಾಖ್" ಎಲ್ಲಿಯೂ ಗುರಿ ತಲುಪುವುದೇ ಇಲ್ಲ. ನಿರ್ದೇಶಕ ಮತ್ತು ಸ್ಕ್ರಿಪ್ಟ್ ರೈಟರ್ ಇಬ್ಬರೂ ಸರಿಯಾಗಿ ಕೆಲಸ ಮಾಡಿದರೆ, ಮತ್ತು ಮೇಲಾಗಿ ಚಿತ್ರದ ಕಥೆಯನ್ನು ಅಂತ್ಯಗೊಳಿಸುವ ಸಮಯದಲ್ಲಿ ಎಚ್ಚರಿಕೆ ವಹಿಸಿದರೆ "50 ಲಾಖ್" ತರಹ ಮತ್ತೋಂದು ಚಿತ್ರ ಬಾರದು.

ಚಿತ್ರದ ಕಥೆಯಲ್ಲಿ ಅದೇ ನಾಲ್ವರು ಮದ್ಯಮವರ್ಗದ ನಾಲ್ವರು ಹುಡುಗರು, ಮತ್ತು ಹುಡುಗಿ ಒಬ್ಬ ಖಳನಾಯಕ ಮತ್ತು ಹಕ್ಕಿ ಹಾರಿಸಿದಂತೆ ಹೊಂ ಮಿನಿಸ್ಟರ್‌ನನ್ನು ಕಿಡ್ನ್ಯಾಪ ಮಾಡುವ ಕಥೆ ಇದು.

ಮುಂಬೈ ಡಾನ್ ಇರ್ಫಾಣ್ ಖಾನ್ (ಪವನ್ ಮಲ್ಹೋತ್ರಾ) ತನ್ನ ಕಾರ್ಯಾಚರಣೆಯನ್ನು ದುಬೈಗೆ ಸ್ಥಳಾಂತರಿಸುವ ಯತ್ನದಲ್ಲಿರುತ್ತಾನೆ ಆದರೆ ಪೊಲೀಸರು ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಭಾರಿ ಬಿಗಿ ಭದ್ರತೆ ಇರುತ್ತದೆ.ಹೀಗಾಗಿ ದುಬೈಗೆ ಪರಾರಿಯಾಗುವುದಕ್ಕೆ ಅವಕಾಶ ಇರುವುದಿಲ್ಲ. ಆದಕ್ಕೆ ಅವನು ಒಂದು ಉಪಾಯ ಮಾಡುತ್ತಾನೆ
ಇಲ್ಲಿಂದ ನಾಲ್ಕು ಪಡ್ಡೆಗಳಿಗೆ ಮತ್ತು ಹೋಂ ಮಿನಿಸ್ಟರ್‍ ತೆರೆಯ ಮೇಲೆ ಬರುತ್ತಾರೆ. ಮಂತ್ರಿ ಇರುವ ವಿಮಾನದಲ್ಲಿ ಇವನು ಮುಂಬೈನಿಂದ ಹೈದರಾಬಾದ್‌ಗೆ ಬರಬೇಕು ಆಗ ಅದರಲ್ಲಿದ್ದ ನಾಲ್ಕು ಹುಡುಗರು ಮತ್ತು ಒಂದು ಹುಡುಗಿ ಆ ವಿಮಾನವನ್ನು ಕಠ್ಮಂಡುಗೆ ತೆಗೆದುಕೊಂಡು ಹೋಗಬೇಕು. ಅಲ್ಲಿ ಮಂತ್ರಿಯೊಬ್ಬನನ್ನು ಬಿಟ್ಟು ಉಳಿದೆವರು ಎಲ್ಲರೂ ಕೆಳಗೆ ಇಳಿಯಬಹುದು. ಈ ರೀತಿ ಸಾಗುವ ಚಿತ್ರದಲ್ಲಿ ಮಂತ್ರಿಯನ್ನು ಗಿಳಿ ಹಾರಿಸಿಕೊಂಡಷ್ಟೇ ಸುಲಭವಾಗಿ ಹಾರಿಸಿಕೊಂಡು ಹೋಗುವುದು ನೋಡಿದರೆ ನಗು ಬರುವುದಿಲ್ಲ ಬದಲಾಗಿ ಅಳು ಬರುತ್ತದೆ.

ಚಿತ್ರದ ಮೊದಲಾರ್ಧ ಸುಲಭವಾಗಿ ಅರ್ಥವಾಗುತ್ತದೆ ಮತ್ತು ಅಷ್ಟೇನು ಬೇಸರ ತರಿಸುವುದಿಲ್ಲ. ನಿರ್ದೇಶಕ ಚಂದ್ರಶೇಖರ ಯೆಲತಿ ಅದ್ಯಾವ ರೀತಿಯಲ್ಲಿ ಇದನ್ನು ನಿರ್ದೇಶಿಸಿದ್ದಾರೊ ಗೊತ್ತಿಲ್ಲ. ಡೈಲಾಗ್ ಸರಿಯಾಗಿವೆ ಆದರೆ ಒಟ್ಟಾರೆ ಹೇಳಬೇಕೆಂದರೆ ಇದು ಪ್ಲಾಫ್ ಚಿತ್ರ.

Share this Story:

Follow Webdunia kannada