Select Your Language

Notifications

webdunia
webdunia
webdunia
webdunia

ಹಳೆ ಚಿತ್ರದ ದಾರಿಯಲ್ಲಿ ಸಾಗದ ವಿಕ್ಟೋರಿಯಾ

ಹಳೆ ಚಿತ್ರದ ದಾರಿಯಲ್ಲಿ ಸಾಗದ ವಿಕ್ಟೋರಿಯಾ
ಅಂದ್ ಕಾಲತ್ತಿಲ್ ಸುಪರ್ ಚಿತ್ರಗಳನ್ನು ಭಟ್ಟಿ ಇಳಿಸಿ, ಹಣ ಮಾಡುವುದು ಮತ್ತು ಹೆಸರು ಮಾಡುವುದು ಇಂದ್ ಕಾಲತ್ತಿಲ್ ಹೊಸ ಫ್ಯಾಷನ್ ಮತ್ತು ಸುಲಭದ ದಾರಿ ಕಥೆ ಸಿದ್ದ ಇದೆ, ನಿರ್ದೇಶಕನನ್ನು ಎತ್ಕೊಂಡು ಬಂದು ತಗೊ ಇದನ್ನು ಚಿತ್ರ ಮಾಡು ಎಂದು ಹೇಳಿಬಿಟ್ಟರೆ ಸಾಕು. ನಿರ್ದೇಶಕನಿಗೂ ಸುಲಭದ ಕೆಲಸ ಪಾತ್ರಕ್ಕೆ ತಕ್ಕ ನಟರನ್ನು ಶೋಧಿಸಿ, ಆ ಚಿತ್ರದ ಹಾಡು ಜನಪ್ರೀಯವಾಗಿದ್ದರೆ ಕಿರಲು ಸದ್ದಿನಲ್ಲಿ ಇರುವ ಹಿನ್ನಲೆ ಸಂಗೀತ ನೀಡಿ ಭಟ್ಟಿ ಇಳಿಸಿಬಿಟ್ಟರೆ ಕೆಲಸ ಮುಗಿಯಿತು. ಇಂತಹದೊಂದು ಪ್ರಯತ್ನ ವಿಕ್ಟೋರಿಯ 203ಯಲ್ಲಿ ಆಗಿದೆ.

ಅಂದಿನ ವಿಕ್ಟೋರಿಯಾ 203ಯನ್ನು ನೋಡಿದ್ದರೆ, ಮತ್ತು ಭಟ್ಟಿ ವಿಕ್ಟೋರಿಯಾ ನೋಡಿದರೆ ನಿರಾಸೆಯಾಗುವುದು ಖಚಿತ. ಅನಂತ್ ನಾರಾಯಣ್ ಮಹಾದೇವನ್ ನಿರ್ದೇಶನದ ರಿಮೇಕ್ ಅಂದಿನ ವಿಕ್ಟೋರಿಯಾಗೆ ಸರಿಸಾಟಿ ನಿಲ್ಲುವ ಪ್ರಯತ್ನ ಕೂಡ ಮಾಡಿಲ್ಲ.

ಹಾಸ್ಯವನ್ನು ಎರಡು ಗಂಟೆಗಳ ಅವಧಿಯಲ್ಲಿ ತುರುಕುವ ಪ್ರಯತ್ನ ನಿರ್ಧೇಶಕರಿಂದ ಆಗಿದ್ದರೂ ಮೊದಲ 20 ನಿಮಿಷಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತದೆ ನಂತರ ಚಿತ್ರ ಕಥೆ ಅನಾಥನಂತೆ ಎಲ್ಲೆಲ್ಲೊ ಸುತ್ತಾಡಲು ಪ್ರಾರಂಭಿಸಿ, ಪ್ರೇಕ್ಷಕನನ್ನು ಅನಾಥನನ್ನಾಗಿ ಮಾಡಿಬಿಡುತ್ತದೆ.

ಬಾಬಿ ( ಜಾವೇದ್ ಜಾಪ್ರಿ) ಒರ್ವ ಅಗರ್ಭ ಉದ್ಯಮಿ ಮತ್ತು ಅವನ ಹೆಂಡತಿ ದೆವಯಾನಿ ( ಪ್ರೀತಿ ಜಿಂಗಾನಿ) 300ಕೋಟಿ ರೂ ಬೆಲೆಬಾಳುವ ವಜ್ರಗಳಿಗೆ ಮಾರುಹೊಗುತ್ತಾರೆ. ಹೆಗಾದರೂ ಮಾಡಿ ಅವುಗಳನ್ನು ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ವಜ್ರದ ಮಾಲಿಕನನ್ನು ಕೇಳುತ್ತಾನೆ, ಮಾಲಿಕನಿಂದ ಇಲ್ಲ ಎನಿಸಿಕೊಂಡ ನಂತರ ರಂಜಿತ್‌ (ಕಮಲ್ ಸಾದಂತ್) ಎಂಬ ಬಾಡಿಗೆ ಹಂತಕನಿಗೆ ವಜ್ರಗಳನ್ನು ಲಪಟಾಯಿಸುವುದಕ್ಕೆ ಹೇಳುತ್ತಾನೆ. ರಂಜೀತ್, ತೋರಾ ( ತೋರಾ ಖಾಸ್ಗಿರ್ ಎಂಬ ಯುವತಿಗೆ ಕೆಲಸ ವಹಿಸುತ್ತಾನೆ ವಜ್ರಗಳನ್ನು ಕದ್ದ ತೋರಾ ಎಲ್ಲರಿಂದ ತಪ್ಪಿಸಿಕೊಂಡು ಒಡಿಹೋಗುವ ಪ್ರಯತ್ನದಲ್ಲಿ ರಂಜೀತ್‌ನಿಂದ ಹಲ್ಲೆಗೆ ಒಳಗಾಗುತ್ತಾಳೆ.

ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ವಿಕ್ಟೋರಿಯಾ 203 ಟ್ಯಾಕ್ಸಿಯ ಮುಂದೆ ಬಿಳುತ್ತಾಳೆ. ಟ್ಯಾಕ್ಸಿ ಡ್ರೈವರ್ ರಾಮನ್ ಅವಳನ್ನು ಆಸ್ಪತ್ರೆಗೆ ಸಾಗಿಸುವ ಯತ್ನದಲ್ಲಿ ಕೊಲೆ ಅಪಾದನೆ ಎಂದು ಪೊಲೀಸರು ಬಂಧಿಸುತ್ತಾರೆ. ಈ ಸಮಯದಲ್ಲಿ ತೋರಾ ತನ್ನ ಬಳಿಯಿದ್ದ 300 ಕೋಟಿ ವಜ್ರಗಳನ್ನು ಕಾರಿನಲ್ಲಿ ಬಚ್ಚಿಟ್ಟಿರುತ್ತಾಳೆ.

ರಾಮನ್ ಮಗಳು ಸಾರಾ ( ಸೋನಿಯಾ ವಿನೋದ್ ಮೆಹ್ರಾ) ಜೀವನ ನಿರ್ವಹಣೆಗೆ ಟ್ಯಾಕ್ಸಿ ಚಾಲಕಳಾಗಿ, ವಜ್ರ ತಜ್ಞ ಜಿಮ್ಮಿಯ ಪ್ರೇಮಪಾಶದಲ್ಲಿ ಬಿಳುತ್ತಾಳೆ.

ರಾಜಾ (ಅನುಪಮ್ ಖೇರ್) ರಾಣಾ ( ಓಂ ಪುರಿ) ತರಲೆ ಕಳ್ಳರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆ ಎರಡು ಗಂಟೆಗಳ ಕಾಲ ಮಸಾಲೆ ಚಿತ್ರ ಎನಿಸಿಕೊಳ್ಳುವುದಕ್ಕೆ ಎನು ಬೇಕು ಅದೇಲ್ಲವನ್ನು ಅನಂತ್ ಮಹಾದೇವನ್ ತುಂಬಿದ್ದಾರೆ.

Share this Story:

Follow Webdunia kannada