Select Your Language

Notifications

webdunia
webdunia
webdunia
webdunia

ಪತ್ರಕರ್ತನ ಜೀವನದ ಮಿಷನ್ ಇಸ್ತಾನಬುಲ್

ಪತ್ರಕರ್ತನ ಜೀವನದ ಮಿಷನ್ ಇಸ್ತಾನಬುಲ್
ನಿರ್ದೇಶನ: ಅಪೂರ್ವ ಲಾಖಿಯಾ
IFM

ಸಂಗೀತ ನಿರ್ದೇಶನ: ಅನು ಮಲ್ಲಿಕ್
ತಾರಾಗಣ: ಜಾಯೇದ್ ಖಾನ್ (ವಿಕಾಸ್ ಸಾಗರ್), ವಿವೇಕ್ ಒಬೇರಾಯ್, ಶ್ರೇಯಾ ಸರಣ್ (ಅಂಜಲಿ), ಸುನಿಲ್ ಶೆಟ್ಟಿ (ಒವಾಸಿಸ್ ಹುಸ್ಸೇನ್) ಅಭಿಷೇಕ್ ಬಚ್ಚನ್ (ಅತಿಥಿ ನಟ)

ಪತ್ರಕರ್ತನ ಜೀವನ ಮತ್ತು ಆದರ್ಶಗಳನ್ನು ಆಧರಿಸಿ ಬರುತ್ತಿರುವ ಇತ್ತೀಚಿನ ಚಿತ್ರಗಳ ಸಾಲಿಗೆ ಮತ್ತೊಂದು ಸೇರ್ಪಡೆ ಮಿಷನ್ ಇಸ್ತಾನಬುಲ್. ಜಾನ್ ಅಬ್ರಹಾಂ ಮತ್ತು ಅರ್ಷದ್ ವಾರ್ಸಿ ಅಭಿನಯದ ಕಾಬೂಲ್ ಎಕ್ಸ್‌ಪ್ರೆಸ್ ನಂತರ ಮಿಷನ್ ಇಸ್ತಾನ್ ಬುಲ್ ತೆರೆಗೆ ಬರುತ್ತಿದೆ. ವಿಕಾಸ್ ಸಾಗರ್ (ಜಾಯೇದ್ ಖಾನ್) ಪ್ರತಿಭಾವಂತ ಪತ್ರಕರ್ತ. ಓವಾಸಿಸ್ ಹುಸ್ಸೇನ್ (ಸುನಿಲ್ ಶೆಟ್ಟಿ) ಇಸ್ತಾನ್‌ಬುಲ್‌ನಲ್ಲಿ ಇರುವ ಒಂದು ವಿವಾದಿತ ಟಿವಿ ಚಾನೆಲ್‌ವೊಂದರ ಮುಖ್ಯಸ್ಥ. ವಿಕಾಸ್ ಸಾಗರ್‍ಗೆ ತಮ್ಮ ಟಿ ವಿ ಚಾನೆಲ್ ಸೇರಿದರೆ ಆಕರ್ಷಕ ಸಂಬಳ ನೀಡುವುದಾಗಿ ಆಮೀಷ ಒಡ್ಡುತ್ತಾನೆ. ಇದೇ ಸಮಯದಲ್ಲಿ ವಿಕಾಸನ ವೈಯಕ್ತಿಕ ಬದುಕು ಗೊಂದಲದ ಗೂಡಾಗಿರುತ್ತದೆ. ಅವನ ಪತ್ನಿ ಅಂಜಲಿ (ಶ್ರೀಯಾ ಸರಣ್) ವಿಚ್ಛೇಧನ ಪಡೆದು ವಿಕಾಸ ಬದುಕಿನಿಂದ ಹೊರಗೆ ಹೋಗಿರುತ್ತಾಳೆ.

ಅಪೂರ್ವ ಲಾಖಿಯಾ ನಿರ್ದೇಶನದಲ್ಲಿ ಸಿದ್ದವಾಗುತ್ತಿರುವ ಮಿಷನ್ ಇಸ್ತಾನಬುಲ್‌ನಲ್ಲಿ ಪತ್ರಕರ್ತನ ವೈಯಕ್ತಿಕ ಜೀವನ ಮತ್ತು ಅವನು ವೃತ್ತಿಯಲ್ಲಿ ಎದುರಿಸುವ ಕಥಾ ಹಂದರವಿದೆ.

ವಿವಾದಿತ ಚಾನೆಲ್ ಸೇರುವ ಒಂದು ನಿರ್ಧಾರ ವಿಕಾಸ್ ಜೀವನದ ಗತಿಯನ್ನು ಬದಲಿಸುತ್ತದೆ. ಟಿವಿ ಚಾನೆಲ್ ಬಿಟ್ಟು ಹೋಗಲು ಇಂಗಿತ ವ್ಯಕ್ತಪಡಿಸುತ್ತಿದ್ದಂತೆ ವಿಚಿತ್ರ ಘಟನೆಗಳು ನಡೆಯಲು ಪ್ರಾರಂಭಿಸುತ್ತವೆ. ತುರ್ಕಿಷ್ ಕಮಾಂಡೊ ರಿಜ್ವಾನ್ ಖಾನ್ (ವಿವೇಕ್ ಓಬೇರಾಯ್) ವಿವಾದಿತ ಚಾನೆಲ್ ಬಿಟ್ಟು ಹೋದವರು ಮಸಣ ಕಂಡಿರುವ ಭಯಂಕರ ಸತ್ಯವನ್ನು ವಿಕಾಸ್‌ಗೆ ಹೇಳುತ್ತಾನೆ. ವಿವಾದದ ಸುತ್ತ ಗಿರಕಿ ಹೊಡೆಯುವ ಟಿವಿ ಚಾನೆಲ್‌ನ ಬಿಟ್ಟುಹೋಗುವ ಸಿಬ್ಬಂದಿಗೆ ಸಾವೇ ಅಂತ್ಯ ಎನ್ನುವುದು ರಿಜ್ವಾನ್ ಮಾತಿನಲ್ಲಿ ವ್ಯಕ್ತವಾಗುತ್ತದೆ. ಹಾಗಿದ್ದರೆ ವಿಕಾಸ್ ಸಾವಿನ ಬಲೆಯಿಂದ ಬಿಡಿಸಿಕೊಳ್ಳಬಲ್ಲನೆ ಇಲ್ಲವೇ ಎನ್ನುವುದನ್ನು ಚಿತ್ರದಲ್ಲಿ ನೋಡಿ..

Share this Story:

Follow Webdunia kannada