Select Your Language

Notifications

webdunia
webdunia
webdunia
webdunia

ಜನ್ನತ್

ಜನ್ನತ್
ಮುಂಬೈ , ಗುರುವಾರ, 5 ಜೂನ್ 2008 (16:54 IST)
ನಿರ್ದೇಶಕ ಮಹೇಶ್ ಭಟ್ ಕಥೆಗಳಿಂದ ಪ್ರಭಾವಿತರಾದವರು. ಜನ್ನತ್ ಚಿತ್ರದಲ್ಲಿ ಮಹೇಶ್ ಭಟ್ ಹಾಗೂ ಮುಖೇಶ್ ಭಟ್ ಹೊಸತೊಂದು ಕಥೆಯನ್ನು ಹೇಳಲು ಚಿತ್ರವನ್ನು ಸಿದ್ದಪಡಿಸಿದ್ದಾರೆ.

ಚಿತ್ರಕಥೆಯಲ್ಲಿ ಮ್ಯಾಚ್‌ಫಿಕ್ಸಿಂಗ್ ಹಾಗೂ ಬುಕ್ಕಿಗಳ ನಡುವಣ ಹಂದರವಿರುವ ಚಿತ್ರಕಥೆ. ಹಾಗಾದರೇ ಕ್ರಿಕೆಟ್‌ಗೆ ಸಂಬಂಧಿಸಿದ ಚಿತ್ರವೇ ಎಂದು ಅಚ್ಚರಿಪಡಬೇಡಿ. ಕೇವಲ ವಾಲ್‌ಪೋಸ್ಟರ್‌ಗಳಲ್ಲಿ ಮಾತ್ರ ಕ್ರಿಕೆಟ್ ಕಾಣಿಸುತ್ತದೆ.ಚಿತ್ರ ಲವ್‌ ಸ್ಟೋರಿಯ ಮೇಲೆ ಕೇಂದ್ರಿಕೃತವಾಗಿದೆ.

ಅರ್ಜುನ್ (ಇಮ್ರಾನ್ ಹಾಶ್ಮಿ) ಹರೆಯದ ಯುವಕ. ಹಣಮಾಡಬೇಕೆನ್ನುವ ಆಕಾಂಕ್ಷೆಯನ್ನು ಹೊಂದಿರುತ್ತಾನೆ.ಶಾಪಿಂಗ್‌ ಮಳಿಗೆಯೊಂದರಲ್ಲಿ ಝೊಯಾ (ಸೋನಾಲ್ ಚವ್ಹಾಣ್)ಳನ್ನು ಅಕಸ್ಮಿಕವಾಗಿ ಭೇಟಿಯಾಗುವ ಅವಕಾಶವನ್ನು ಪಡೆಯುತ್ತಾನೆ ಸಾಮಾನ್ಯ ಜೀವನದಿಂದ ಹೊರಬಂದು ಶ್ರೀಮಂತನಾಗುವ ಇರಾದೆಯನ್ನು ವ್ಯಕ್ತಪಡಿಸುತ್ತಾನೆ.ನಂತರ ಕಾರ್ಡ್‌ ಪಂದ್ಯಗಳಿಂದ ಕ್ರಿಕೆಟ್‌ ಬುಕ್ಕಿಯಾಗುವರೆಗೆ ಮುಂದುವರಿಯುತ್ತಾನೆ.

ತಾನು ಪ್ರೀತಿಸಿದವಳಿಗಾಗಿ ಬಹುಬೇಗ ಶ್ರೀಮಂತನಾಗಲು ಬಯಸುತ್ತಾನೆ. ಆರ್ಜುನ್ ಮ್ಯಾಚ್‌ ಫಿಕ್ಸಿಂಗ್ ಜಗತ್ತಿಗೆ ಪ್ರವೇಶ ಪಡೆಯುವದರಿಂದ ಪೊಲೀಸ್ ಅಧಿಕಾರಿ ಸಮೀರ್ ಕೊಚಾರ್ ಅವರ ಗಮನ ಸೆಳೆಯುತ್ತಾನೆ.

ಅರ್ಜುನ್‌ಗೆ ಝೋಯಾ ಅಥವಾ ಅಧಿಕಾರ ಮತ್ತು ಯಶಸ್ಸನ್ನು ನೀಡಿದ ಕ್ರಿಕೆಟ್ ಮ್ಯಾಚ್‌ಫಿಕ್ಸಿಂಗ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ.ಅರ್ಜುನ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಹೋರಾಟ ನಡೆಸುತ್ತಾನೆ.ಡಾನ್ (ಜಾವೇದ್ ಶೇಖ್) ತನ್ನ ಗುಂಪನ್ನು ಸೇರಿಕೊಂಡಲ್ಲಿ ಅಪಾರ ಶ್ರೀಮಂತನಾಗುವ ಅಹ್ವಾನವನ್ನು ಮುಂದಿಡುತ್ತಾನೆ.

ನೀವು ಕ್ರಿಕೆಟ್ ಅಭಿಮಾನಿಗಳಾಗಿರಬೇಕು ಎಂದೇನಿಲ್ಲ. ಜನ್ನತ್ ಚಿತ್ರಕಥೆಯನ್ನು ಅರಗಿಸಿಕೊಳ್ಳವುದು ಕಷ್ಟವಲ್ಲ.ಇಮ್ರಾನ್ ಮತ್ತು ಕ್ರಿಕೆಟಿಗರ ನಡುವಣ ನಡೆಯುವ ಸಂಭಾಷಣೆ ಚಿತ್ರದ ಮೂಲ ತಿರುಳಾಗಿದೆ.ಚಿತ್ರಕಥೆಯ ತಿರುವುಗಳು ಕುತೂಹಲಕಾರಿಯಾಗಿ ಪ್ರೇಕ್ಷಕರನ್ನು ರಂಜಿಸುತ್ತಾ ಹೋಗುತ್ತವೆ.

ಚಿತ್ರದಲ್ಲಿ ಸೋನಾಲ್ ಚವ್ಹಾಣ್ ಸುಂದರವಾಗಿ ಕಾಣುತ್ತಾಳೆ.ಚಿತ್ರದ ಆರಂಭದಲ್ಲಿ ತನ್ನ ಮೋಹಕ ನಟನೆಯಿಂದಾಗಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾಳೆ.ಸೋನಾಲ್ ಚವ್ಹಾಣ್ ನಟನೆಯಲ್ಲಿ ಪ್ರತಿಭೆಯಿದೆ. ಜಾವೇದ್ ಶೇಖ್ ತುಂಬಾ ಬುದ್ದಿವಂತ.ತುಂಬಾ ಅದ್ಭುತವಾಗಿ ನಟಿಸಿದ್ದಾನೆ.ಸಮೀರ್ ಕೊಚರ್ ಹಾಗೂ ವಿಶಾಲ್ ಮಲ್ಹೋತ್ರಾ ಉತ್ತಮವಾಗಿ ನಟಿಸಿದ್ದಾರೆ. ಶಕೀಲ್‌ಖಾನ್ ಅಭಿಮನ್ಯು ಸಿಂಗ್ ವಿಪಿನ್ ಶರ್ಮಾ ಅವರುಗಳು ತಮ್ಮ ನಟನೆಯಿಂದ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಾರೆ ಜನ್ನತ್ ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಹಿತವಾದ ಸಂಗೀತ ಚಿತ್ರಕಥೆಯಲ್ಲಿನ ಹಿಡಿತ , ನಟನಟಿಯರ ಉತ್ತಮ ಅಭಿನಯದಿಂದಾಗಿ ಕ್ಲೈಮ್ಯಾಕ್ಸ್ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Share this Story:

Follow Webdunia kannada