Select Your Language

Notifications

webdunia
webdunia
webdunia
webdunia

'ಅಂಬಾರಿ'ಯ ಪ್ರೇಮಾಯಣ

'ಅಂಬಾರಿ'ಯ ಪ್ರೇಮಾಯಣ
ರವಿಪ್ರಕಾಶ್ ರೈ

ಆತ ಚಪ್ಪಲಿ ಹೊಲಿಯುವ ಹುಡುಗ. ಆತ ಪಕ್ಕಾ ಪ್ರಾಕ್ಟಿಕಲ್. ಪ್ರೀತಿ ಮಾಡಬಾರದು. ಅದು ಕೂಡಾ ತನ್ನಂತ ಚಪ್ಪಲಿ ಹೊಲಿಯುವವ ಪ್ರೀತಿ ಮಾಡುವುದೆಂದರೆ ಅದು ಶುದ್ದ ತಪ್ಪು ಎಂಬ ಭಾವನೆ ಅವನದು. ಆದರೆ ಅದೇ ದಾರಿಯಲ್ಲಿ ದಿನಾ ಬರುವ ಶ್ರೀಮಂತ ಹುಡುಗಿಗೆ ಈತನ ಮೇಲೆ ಯಾಕೋ ಪ್ರೀತಿ ಹುಟ್ಟುತ್ತದೆ. ಮಳೆಯಲ್ಲಿ ನೆನೆಯುತ್ತಿರುವ ಆಕೆಗೆ ಈ ಚಪ್ಪಲಿ ಹೊಲಿಯುವ ಹುಡುಗ ತನ್ನ ಪ್ಲಾಸ್ಟಿಕ್ ಕಂಬಳಿಯನ್ನು ಕೊಡುತ್ತಾನೆ. ಆಕೆ ಈತನನ್ನು ಮನಸಿಗೆ ಹಚ್ಚಿಕೊಳ್ಳುತ್ತಾಳೆ. ಕ್ರಮೇಣ ಆತನಿಗೂ ಈಕೆಯ ಮೇಲೆ ಪ್ರೀತಿ ಹುಟ್ಟುತ್ತದೆ.
NRB
ಇದು ಅಂಬಾರಿ ಚಿತ್ರದ ಒಂದು ದೃಶ್ಯ. ನಿರ್ದೇಶಕ ಅರ್ಜುನ್ ನಿಜಕ್ಕೂ ತಮ್ಮ ಮೊದಲ ಪ್ರಯತ್ನದಲ್ಲಿ ಗೆದ್ದಿದ್ದಾರೆ. ಇಂತಹ ಅನೇಕ ಕಥೆಗಳು ಹಿಂದೆ ಬಂದಿವೆ. ಆದರೆ ಈ ಚಿತ್ರದ ನಿರೂಪಣೆಯಲ್ಲಿ ಹೊಸತನವಿದೆ. ಹುಬ್ಬೇರಿಸುವ ಕ್ಯಾಮರಾ ಕೈ ಚಳಕವಿದೆ. ಚಿತ್ರದುದ್ದಕ್ಕೂ ಹೊಸತನವಿದೆ.

ನಾಯಕ ಇಲ್ಲಿ ತನ್ನ ಪ್ರೇಯಸಿಯನ್ನು ಎಷ್ಟು ಪ್ರೀತಿಸುತ್ತಾನೆ ಎಂದರೆ, ಆಕೆ ಮಲಗಿರುವಾಗ ಚಂದ್ರನ ಬೆಳಕು ಆಕೆಯ ನಿದ್ದೆಗೆ ಭಂಗ ತರುತ್ತದೆಂದು, ಲೇ ನನ್ ಮಗ್ನೇ..ನಿನ್ಗೆ ಇದೇ ಜಾಗ ಬೇಕಿತ್ತೇನೋ? ಬೇರೆ ಕಡೆ ಹೋಗೋ..ನನ್ ಸರು ಮಲಗಿದ್ದಾಳೆ. ತೊಂದರೆ ಕೊಡಬೇಡ.. ಎಂದು ಬೈಯುವ ದೃಶ್ಯ ಇಷ್ಟವಾಗುತ್ತದೆ.

ನಾಯಕ ಯೋಗೀಶ್ ಇಲ್ಲಿ ಪಾದರಸದಂತಿದ್ದರೆ, ಅವರ ಅದ್ಬುತ ಮ್ಯಾನರಿಸಂ, ನೃತ್ಯ, ಡೈಲಾಗ್ ಡೆಲಿವರಿ ಎಲ್ಲವೂ ತುಂಬಾನೇ ಇಷ್ಟವಾಗುತ್ತದೆ. ನಾಯಕಿ ಸುಪ್ರಿತಾ ಮೊದಲ ಚಿತ್ರದಲ್ಲೇ ಅಭಿಮಾನಿಗಳ ಮನಕ್ಕೆ ಲಗ್ಗೆ ಇಟ್ಟಿದ್ದಾರೆ. ಲವಲವಿಕೆಯಿಂದ ನಟಿಸಿದ್ದಾರೆ. ರಂಗಾಯಣ ರಘು ಸ್ವಲ್ಪ ಡಿಫರೆಂಟ್ ಆಗಿ ನಟಿಸಿದರೂ ಇವರ ಪಾತ್ರ ನೋಡುವಾಗ ದುನಿಯಾದ ಸತ್ಯಣ್ಣ ನೆನಪಾಗಿ ಮರೆಯಾಗುತ್ತಾನೆ.

ಆದರೆ ಚಿತ್ರದ ದ್ವಿತೀಯಾರ್ಧದಲ್ಲಿ ನಿರ್ದೇಶಕ ಅರ್ಜುನ್ ಸ್ವಲ್ಪ ಎಡವಿದ್ದಾರೆ. ತನ್ನ ಪ್ರೇಯಸಿಗೆ ಸೈಕಲ್‌‌ನಲ್ಲೇ ಸಾವಿರಾರು ಕಿ.ಮೀ ದೂರದ ಜೈಪುರ, ಆಗ್ರಾವನ್ನು ತೋರಿಸುತ್ತಾನೆ. ಈ ಸಂದರ್ಭದಲ್ಲಿ ಡಬಲ್ ರೈಡ್ ಸೈಕಲ್ ತುಳಿದರೂ ಆತನಿಗೆ ಆಯಾಸವಾಗುವುದಿಲ್ಲ. ಈ ಮಧ್ಯೆ ಅಡ್ಡ ಬರುವ ನಾಲ್ಕಾರು ರೌಡಿಗಳನ್ನೂ ಉರುಳಿಸುತ್ತಾನೆ. ಈ ದೃಶ್ಯ ಸ್ವಲ್ಪ ಬೋರ್ ಹೊಡೆಯುತ್ತದೆ.

ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ ಪೆಟ್ರೋಲ್ ಪ್ರಸನ್ನ ಕೂಡಾ ಇಲ್ಲಿ ಮಿಂಚುತ್ತಾರೆ. ಅವರ ನಟನಾ ಶೈಲಿ ವಿಭಿನ್ನವಾಗಿದೆ. ನಿರ್ದೇಶಕ ಅರ್ಜುನ್ ಹಿಂದೆ ರವಿಚಂದ್ರನ್ ಜೊತೆ ಸಹಾಯಕ ನಿರ್ದೇಶಕರಾಗಿ ದುಡಿದವರು. ಚಿತ್ರದಲ್ಲಿ ವಿ.ಹರಿಕೃಷ್ಣ ಅವರ ಸಂಗೀತ ಕೂಡಾ ಪ್ರಧಾನ ಪಾತ್ರ ವಹಿಸುತ್ತದೆ. ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಇಷ್ಟವಾಗುತ್ತದೆ. ಒಟ್ಟಾಗಿ ಹೆಚ್ಚು ಬಿಲ್ಡಪ್ ತಗೊಳದೇ ಸೈಲೆಂಟಾಗಿ ಒಂದು ಉತ್ತಮ ಚಿತ್ರ ಮೂಡಿಬಂದಿದೆ.

Share this Story:

Follow Webdunia kannada