Article Movie Preview %e0%b2%ae%e0%b2%a8%e0%b2%bf %e0%b2%b9%e0%b3%88 %e0%b2%a4%e0%b3%8a %e0%b2%b9%e0%b2%a8%e0%b2%bf %e0%b2%b9%e0%b3%88 108060300029_1.htm

Select Your Language

Notifications

webdunia
webdunia
webdunia
webdunia

ಮನಿ ಹೈ ತೊ ಹನಿ ಹೈ

ಮನಿ ಹೈ ತೊ ಹನಿ ಹೈ
ಚಿತ್ರದಲ್ಲಿ ವಿಭಿನ್ನ ವ್ಯಕ್ತಿತ್ವದ ಸ್ವತಂತ್ರವಾದ ಆರು ಪಾತ್ರಧಾರಿಗಳಿದ್ದಾರೆ. ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಬಾಬ್ಬಿ ಮನೆಯಿಂದ ಹೊರಬಂದು ಸಂತೋಷದಿಂದ ಇರುತ್ತಾನೆ.

ಲಾಲಾಭಾಯಿಗೆ ಒಂದು ಕೋಟಿ ರೂಪಾಯಿ ಲಾಟರಿ ಹೊಡೆದಿದ್ದರಿಂದ ಶ್ರೀಮಂತನಾಗಿರುತ್ತಾನೆ . ಆದರೆ ಶ್ರೀಮಂತಿಕೆ ಬಹಳ ದಿನಗಳ ಕಾಲ ಉಳಿಯುವುದಿಲ್ಲ.ಆರಂಭಿಸಿದ ವ್ಯಾಪಾರದಲ್ಲಿ ಹಾನಿಯಾಗಿ ತನ್ನ ಬಂಡವಾಳವನ್ನು ಕಳೆದುಕೊಂಡು ಮತ್ತೇ ರಸ್ತೆಗೆ ಬಂದಿರುತ್ತಾನೆ.

ಗೌರವ್ ಕಾಪಿ ರೈಟರ್‌ ವೃತ್ತಿಯಲ್ಲಿದ್ದು ನೌಕರಿಯಿಂದ ಹೊರಹಾಕಲಾಗಿರುತ್ತದೆ. ಮಾಣಿಕ್ ಒಬ್ಬ ಮಾಡೆಲ್‌ ಆಗಿದ್ದು ತನ್ನನ್ನು ಉನ್ನತ ಮಟ್ಟಕ್ಕೇರಿಸಬಹುದು ಎಂದು ಮಧ್ಯಮ ವಯಸ್ಸಿನ ಫ್ಯಾಶನ್ ಡಿಜೈನರ್‌ನೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿರುತ್ತಾಳೆ.

ಆಶಿಮಾ ಕಪೂರ್ ಕಿರುತೆರೆ ಕಲಾವಿದೆಯಾಗಿದ್ದು, ತನ್ನ ವೃತ್ತಿಯ ಬಗ್ಗೆ ಅಸಮಧಾನದಿಂದಿರುತ್ತಾಳೆ.ತಾನು ಬಾಲಿವುಡ್ ಚಿತ್ರದಲ್ಲಿ ಪ್ರಮುಖ ನಾಯಕಿಯಾಗಿ ನಟಿಸಬೇಕು ಎನ್ನುವ ಅಕಾಂಕ್ಷೆಯನ್ನು ಹೊಂದಿರುತ್ತಾಳೆ.

ಶೃತಿ ಡ್ರೆಸ್ ಡಿಜೈನಿಂಗ್‌ನಲ್ಲಿ ಖ್ಯಾತಿ ಪಡೆಯಲು ಶ್ರಮಿಸುತ್ತಿರುತ್ತಾಳೆ. ಒಂದು ದಿನ ಎಲ್ಲ ಆರು ಜನರಿಗೆ ನೀವು 1000ಕೋಟಿ ರೂಪಾಯಿ ಬೆಲೆ ಬಾಳುವ ಕಂಪೆನಿಯ ಮಾಲೀಕರಾಗಿದ್ದೀರಿ ಎಂದು ಮೊಬೈಲ್‌ನಲ್ಲಿ ಎಸ್‌ಎಂಎಸ್‌ ಬರುತ್ತದೆ.ಆದರೆ ಆಸಂತೋಷ ಬಹುಕಾಲ ಉಳಿಯುವುದಿಲ್ಲ. ವಕೀಲರು ಕಂಪೆನಿಯ ಮೇಲೆ 1200 ಕೋಟಿ ರೂಪಾಯಿ ಸಾಲವಿದ್ದು, ಅದನ್ನು ಮರುಪಾವತಿ ಮಾಡಬೇಕೆಂದು ಹೇಳುತ್ತಾರೆ. ಅಲ್ಲಿಯವರೆಗೆ ಗೃಹಬಂಧನದಲ್ಲಿರುವಂತೆ ಆದೇಶವಿದೆ ಎಂದು ಹೇಳುತ್ತಾರೆ. ಮುಂದಿನ ಚಿತ್ರಕಥೆಯನ್ನು ತೆರೆಯ ಮೇಲೆ ವೀಕ್ಷಿಸಬಹುದಾಗಿದೆ.

ಚಿತ್ರವನ್ನು ರಾಜೀವ್ ಕುಮಾರ್ ನಿರ್ದೇಶಿಸಿದ್ದು,ಗೋವಿಂದಾ , ಹಂಸಿಕಾ ಮೊತ್‌ವಾನಿ, ಸೆಲಿನಾ ಜೇಟ್ಲಿ, ಅಫ್ತಾಬ್ ಶಿವದಾಸನಿ, ಉಪೆನ್ ಪಟೇಲ್ ಮತ್ತು ಮನೋಜ್ ಬಾಜ್‌ಪೈ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

Share this Story:

Follow Webdunia kannada