ಇತ್ತೀಚೆಗೆಷ್ಟೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದ ಗುಂಡ ತನ್ನ ಗೆಳೆಯನಲ್ಲಿ ಸಿನಿಮಾ ಕುರಿತು ಚರ್ಚಿಸುತ್ತಿದ್ದ. ಮಾತಿನ ಮಧ್ಯೆ ಸಿನಿಮಾಕ್ಕೂ ನಿಜಜೀವನಕ್ಕೂ ಎಷ್ಟು ವ್ಯತ್ಯಾಸವಿದೆಯಲ್ಲಾ ಎಂದು ಲೋಕಾಭಿರಾಮದ ಮಾತುಗಳನ್ನಾಡಿದ.
ಆಗ ಗೆಳೆಯನು ಅಂತದ್ದೇನೆಂದು ಪ್ರಶ್ನಿಸಿದಾಗ ಗುಂಡನು, "ಸಿನಿಮಾದಲ್ಲಿ ಕಷ್ಟಗಳೆಲ್ಲಾ ಮುಗಿದ ಮೇಲೆ ವಿವಾಹವಾಗುತ್ತಾರೆ. ಆದರೆ ನಿಜ ಜೀವನದಲ್ಲಿ ಮದುವೆಯಾದ ಮೇಲೆ ಕಷ್ಟಗಳು ಪ್ರಾರಂಭವಾಗುತ್ತದೆ" ಎಂದ.